ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಈಚೆಗೆ ನಿಧನರಾದ ಪತ್ರಕರ್ತ ರವಿ ಅವರಿಗೆ ಶ್ರದ್ಧಾಂಜಲಿ ಸಭೆ

ರಾಮನಗರ : ಕಳೆದ ಮಂಗಳವಾರ ರಸ್ತೆ ಅಪಘಾತದಲ್ಲಿ ಮೃತರಾದ ಪತ್ರಕರ್ತ ಎಂ.ರವಿ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಜಿಲ್ಲಾ ಸಂಘದ ವತಿಯಿಂದ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಶ್ರದ್ದಾಂಜಲಿ‌ ಸಭೆಯಲ್ಲಿ ಹೊಸ ಆದರ್ಶ ದಿನ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಅಗಲಿಕೆ ನೋವು ತರಿಸಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನೋವು ತರಿಸಿದ್ದು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಆಗಿರುವ ನೋವನ್ನು ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿ, ಅವರ ಗುಣಗಾನ ಮಾಡಿದರು.

ಹಿರಿಯ ಪತ್ರಕರ್ತರಾದ ಚಲುವರಾಜು ಮಾತನಾಡಿದರು.

ಶ್ರದ್ದಾಂಜಲಿ ಸಭೆಯಲ್ಲಿ ಚಲುವರಾಜು ಮಾತನಾಡಿ ವೃತ್ತಿ ಒಡನಾಡಿಯಾಗಿದ್ದ ರವಿ ಅವರ ಅಕಾಲಿಕ ಸಾವು ದುಖಃ ತರಿಸುವಂತಾಗಿದೆ. ಅವರು ಎಲ್ಲರ ಜೊತೆ ಉತ್ತಮ ಬಾಂದವ್ಯ ಇರಿಸಿಕೊಂಡು ಆತ್ಮೀಯವಾದ ಸಂಭಂದ ಇರಿಸಿಕೊಂಡಿದ್ದರು ಎಂದು ಅವರನ್ನು ಸ್ಮರಿಸಿದರು.

ಇದೇ ವೇಳೆ ಮೃತ ರವಿ ಭಾವಚಿತ್ರಕ್ಕೆ ಜಿಲ್ಲೆಯಿಂದ ಆಗಮಿಸಿದ್ದ ಎಲ್ಲಾ ಪತ್ರಕರ್ತರು ಪುಷ್ಪನಮನ‌ ಸಲ್ಲಿಸಿದರು.

ಜಿಲ್ಲಾಧ್ಯಕ್ಷರಾದ ಬಿ.ವಿ. ಸೂರ್ಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ಟಿ. ಶಿವರಾಜು, ರಾಜ್ಯ ಪರಿಷತ್ ಸದಸ್ಯ ಸಿದ್ದಲಿಂಗೇಗೌಡ, ಹಿರಿಯ ಪತ್ರಕರ್ತರಾದ ಚಲುವರಾಜು, ಎಸ್. ರುದ್ರೇಶ್ವರ, ಅಪ್ರೋಜ್ ಖಾನ್, ರವಿಕಿರಣ್, ಬಾಬು ಸಹರಾ, ಜಿಲ್ಲಾ ಸಂಘದ ಪದಾಧಿಕಾರಿಗಳಾದ ಎಂ. ಶಿವಮಾದು, ಗುರುಮೂರ್ತಿ, ಪಾದ್ರಳ್ಳಿರಾಜು, ಅರುಣ್, ಶಿವಲಿಂಗಯ್ಯ, ಜಗದೀಶ್, ಪತ್ರಕರ್ತರಾದ ಬೆಂಕಿಮಹದೇವ್, ನರಸಿಂಗರಾವ್, ಅನಿಲ್, ಗಿರೀಶ್ ಕೊತ್ತೀಪುರ, ಸಂದೀಪ್, ಲಿಂಗರಾಜು, ಸಾಧು ಇತರರು ಇದ್ದರು.  

10 ಸಾವಿರ ನೆರವು :

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ದಿಂದ  ಪತ್ರಕರ್ತ ಎಂ.ರವಿ ಕುಟುಂಬಕ್ಕೆ (ಪತ್ನಿ ಉಮಾ ಅವರಿಗೆ) ನೀಡಿದ್ದ 10 ಸಾವಿರ ರೂ.ಗಳ ನೆರವನ್ನು ಪತ್ರಕರ್ತರೊಡಗೂಡಿ ರವಿ ಅವರ ನಿವಾಸಕ್ಕೆ ಜಿಲ್ಲಾಧ್ಯಕ್ಷ ಬಿ.ವಿ. ಸೂರ್ಯಪ್ರಕಾಶ್ ತೆರಳಿ ಪರಿಹಾರ ಚೆಕ್ ವಿತರಿಸಿದರು. ಈ ವೇಳೆ ಅವರ ಪತ್ನಿ ಉಮಾ ಅವರಿಗೆ ದೃತಿಗೆಡದೆ ದೈರ್ಯದಿಂದ ಇರುವಂತೆ ಸಾಂತ್ವನ‌ ಹೇಳಿ ದೈರ್ಯ ತುಂಬಿದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದ ರಾಮನಗರ ಜಿಲ್ಲಾ ಘಟಕವು ರವಿ ಕುಟುಂಬಕ್ಕೆ ನೆರವು ನೀಡುವಂತೆ ಮನವಿ ಮಾಡಿತ್ತು.

ವರದಿ : ಪಾದ್ರಳ್ಳಿ ರಾಜು, ಮೊ: 6360 905 062

ಇದನ್ನೂ ಓದಿ :

ಈಚೆಗೆ ನಿಧನರಾದ ಪತ್ರಕರ್ತ ರವಿ ಕುಟುಂಬಕ್ಕೆ 11 ಲಕ್ಷ ಪರಿಹಾರ : ಎಸ್.ಕೆ. ಸಾಮ್ರಾಟ್ ಗೌಡ – ಹಾಯ್ ರಾಮನಗರ –

https://go.shr.lc/3kf9qHp

ಇದನ್ನೂ ಓದಿ :

ಅಪಘಾತದಲ್ಲಿ ಪತ್ರಕರ್ತ ರವಿ ಸಾವು – ಹಾಯ್ ರಾಮನಗರ –

https://go.shr.lc/3OHAjSt

Leave a Reply

Your email address will not be published. Required fields are marked *