ಬೈಕ್ ಗೆ ಟ್ರಾಕ್ಟರ್ ಡಿಕ್ಕಿ : ಸ್ಥಳದಲ್ಲೇ ಅಣ್ಣ ಸಾವು, ತಂಗಿಗೆ ಗಂಭೀರ ಗಾಯ
ಮಾಗಡಿ : ಬೈಕ್‍ಗೆ ಟ್ಯಾಕ್ಟರ್ ಡಿಕ್ಕಿ ಅಣ್ಣ ಸ್ಥಳದಲ್ಲೆ ಸಾವು ತಂಗಿಗೆ ಗಂಭೀರಗಾಯವಾಗಿರುವ ಘಟನೆ ತಾಲೂಕಿನ ಹೊಸಪಾಳ್ಯ ಬಳಿ ನಡೆದಿದೆ.
ಪಟ್ಟಣದ ಎನ್‍ಇಎಸ್‍ಬಡಾವಣೆ ನಿವಾಸಿ ಶಿಕ್ಷಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಪತಿಗೌಡ ಪುತ್ರ ಚಂದನ್‍ಗೌಡ [21] ಮೃತಪಟ್ಟ ದುರ್ದೈವಿಯಾಗಿದ್ದು, ಚಂದನ್ ಗೌಡ ದ್ವಿತಿಯ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದರು. ಚಂದನ್ ಗೌಡ ಮತ್ತು ಮೋಕ್ಷಿತ ಇಬ್ಬರು ಅಜ್ಜಿಯನ್ನು ನೋಡಲು ತಾಳೇಕೆರೆ ಗ್ರಾಮಕ್ಕೆ ಬೈಕ್‍ನಲ್ಲಿ ತೆರಳುವ ವೇಳೆ
ಈ ದುರ್ಘಟನೆ ನಡೆದಿದೆ.
ತೀವ್ರವಾಗಿ ಗಾಯಗೊಂಡ ಮೋಕ್ಷಿತರಿಗೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸರಕಾರಿ ಆಸ್ಪತ್ರೆ ಬಳಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಎಚ್.ಎನ್.ಆಶೋಕ್, ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ ಸೇರಿದಂತೆ ನೂರಾರು ಶಿಕ್ಷಕರು, ಶಿಕ್ಷಕಿಯರು ಬೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.
ಮಾಗಡಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಮೃತನ ಅಂತ್ಯಕ್ರಿಯೆ ಶುಕ್ರವಾರ ತಾಳೆಕೆರೆ ಗ್ರಾಮದ ತಮ್ಮ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಅಪಘಾತಗಳು ನಡೆಯುತ್ತಿರುವುದರಿಂದ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಮಾಗಡಿ-ಕುಣಿಗಲ್, ಮಾಗಡಿ-ಹುಲಿದುರ್ಗ ರಸ್ತೆಗಳನ್ನು ಕೆಶಿಫ್ ಅಭಿವೃದ್ದಿಗೊಳಿಸುತ್ತಿದ್ದು ಕೆಲವೆಡೆ ಆವೈಜ್ಞಾನಿಕವಾಗಿ ರಸ್ತೆ ಮತ್ತು ಕಾಮಗಾರಿಗಳ ಬಳಿ ಸೂಚನ ಫಲಕ ಅಳವಡಿಸದೆ ನಿರ್ಲಕ್ಷದಿಂದಾಗಿ ಸಾಕಷ್ಟು ಅಪಘಾತಗಳು ಸಂಬಂವಿಸುತ್ತಿದ್ದು ಈ ಬಗ್ಗೆ ಕೆಶಿಫ್ ಅಧಿಕಾರಿಗಳ ಸಭೆ ನಡೆಸಿ ಸಮಪ್ರಕವಾಗಿ ರಸ್ತೆ ನಿರ್ಮಿಸಲು ಶಾಸಕ ಎ.ಮಂಜುನಾಥ್ ಸೂಚಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.