ಸುಸೂತ್ರವಾಗಿ ನಡೆದ ಮುಖ್ಯಶಿಕ್ಷಕರ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಸ್ಥಳ ಆಯ್ಕೆ ಪ್ರಕ್ರಿಯೆ

ರಾಮನಗರ : ಗುರುವಾರ ರಾಜ್ಯಾದ್ಯಾಂತ ನಡೆದ ಮುಖ್ಯಶಿಕ್ಷಕರ ಹುದ್ದೆಯಿಂದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಉರ್ದು ಮತ್ತು ಕನ್ನಡ ಶಿಕ್ಷಕರ ಸ್ಥಳ ಆಯ್ಕೆ ಪ್ರಕ್ರಿಯೆ ಉಪನಿರ್ದೇಶಕರ ಕಛೇರಿಯಲ್ಲಿ ನಡೆಯಿತು.

ಮಾನ್ಯ ಉಪನಿರ್ದೇಶಕರಾದ ಶ್ರೀ ಗಂಗಣ್ಷಸ್ವಾಮಯವರ ಮಾರ್ಗದರ್ಶನದಲ್ಲಿ ನಡೆದ ಸ್ಥಳ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 11 ಹಿರಿಯ ಮುಖ್ಯ ಶಿಕ್ಷಕ ಹುದ್ದೆಗಳಿಗೆ 22 ಮುಖ್ಯ ಶಿಕ್ಷಕರನ್ನು ಕರೆಯಲಾಗಿದ್ದು 9 ಹುದ್ದೆಗಳೂ ಭರ್ತಿಯಾಗಿದ್ದು ವಿಶೇಷ. ಕನಕಪುರದ 4 ಮಾಗಡಿಯ 1 ರಾಮನಗರದ 5 ಚನ್ನಪಟ್ಟಣ 1 ಹುದ್ದೆಗಳು ಭರ್ತಿ ಆದವು.

ಎಂದಿನಂತೆ ಸ್ಥಳ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ರಮೇಶ್, ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್.ರಾಮನಗರ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕಾಂತರಾಜ್, ಕಾರ್ಯದರ್ಶಿ ವಾಸು, ಕನಕಪುರದ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ನೇ.ರ. ಪ್ರಭಾಕರ ಕಾರ್ಯದರ್ಶಿ ನಟರಾಜ್, ಚನ್ನಪಟ್ಟಣ ಪ್ರಧಾನ ಕಾರ್ಯದರ್ಶಿ ಎಂ.ಟಿ. ಕೃಷ್ಣಕುಮಾರ್ , ಮಾಗಡಿ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು ರವರು ಪಾಲ್ಗೊಂಡು ಶಿಕ್ಷಕರ ಸ್ಥಳ ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.

ಕನಕಪುರ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಕುಮಾರ್ ಕೋಡಿಹಳ್ಳಿ ಶಾಲೆಯನ್ನು ಆಯ್ಕೆ ಮಾಡಿಕೊಂಡರು. ಅವರನ್ನು ಅಭಿನಂದಿಸಲಾಯಿತು. ಅಕ್ಷರ ಬೆಳಕು ಸಂಯೋಜಕ ಶ್ರೀನಿವಾಸಯ್ಯ.ಎಂ. ಜಿ ಉಪಸ್ಥಿತರಿದ್ದು ಶಿಕ್ಷಕರ ಸ್ಥಳ ಆಯ್ಕೆ ಪ್ರಕ್ರಿಯೆಯಲ್ಲಿ ಶಿಕ್ಷಕರಿಗೆ ಸಹಕರಿಸಿದರು.

Leave a Reply

Your email address will not be published. Required fields are marked *