ಅಗತ್ಯ ಇರುವಷ್ಟು ಜಾಗವನ್ನು ಉಚಿತವಾಗಿ ನೀಡುವವರೆಗೆ ರಾಮನಗರಕ್ಕೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಳಾಂತರಿಸುವುದಿಲ್ಲ : ಡಾ.ಎಂ.ಕೆ. ರಮೇಶ್
ಬೆಂಗಳೂರು : ‘ರಾಜ್ಯ ಸರ್ಕಾರ ಅಗತ್ಯ ಇರುವಷ್ಟು ಜಾಗವನ್ನು ಉಚಿತವಾಗಿ ನೀಡುವವರೆಗೆ ರಾಮನಗರಕ್ಕೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ಸ್ಥಳಾಂತರಿಸುವುದಿಲ್ಲ’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವವಿದ್ಯಾಲಯಕ್ಕೆ ನೀಡಿದ ಜಾಗ ವ್ಯಾಜ್ಯ ಮುಕ್ತವಾಗುವವರೆಗೆ ಹೊಸ ಕಟ್ಟಡ ನಿರ್ಮಾಣ ಅಥವಾ ಕ್ಯಾಂಪ್ ಸ್ಥಳಾಂತರಿಸುವುದಿಲ್ಲವೆಂದು ಸಿಂಡಿಕೇಟ್ ಮತ್ತು ಸೆನೆಟ್ ಸ್ಪಷ್ಟವಾಗಿ ತಿಳಿಸಿದೆ’ ಎಂದರು.
‘274 ಎಕರೆ ಜಾಗದಲ್ಲಿ 70 ಎಕರೆ ಜಾಗವನ್ನು ಸರ್ಕಾರ ನಮಗೆ ನೀಡಿದೆ. ಉಳಿದ ಜಾಗ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿದೆ. ವ್ಯಾಜ್ಯ ಮುಕ್ತ ಜಾಗವನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದ ಬಳಿಕವಷ್ಟೆ ಅಲ್ಲಿ ಕಟ್ಟಡ ಕಾಮಗಾರಿ ಕೆಲಸ ಆರಂಭಿಸಲಾಗುವುದು. ಅಲ್ಲದೆ, ವಿಶ್ವವಿದ್ಯಾಲಯದ ಆಡಳಿತ ವಿಭಾಗವನ್ನು ಮಾತ್ರ ಈ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ರಾಮನಗರದ ಅರ್ಚಕರಹಳ್ಳಿಯ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ರಾಜೀವಗಾಂಧಿ ಆರೋಗ್ಯ ವಿವಿಗೆ 2007ರಲ್ಲಿ ಅನುಮತಿ ದೊರೆತ್ತು. 2010ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತಾದರೂ ಇದುವರೆಗೆ ಯೋಜನೆ ನಿಗದಿ ಮಾಡಿರುವ ಪ್ರದೇಶದಲ್ಲಿ ಒಂದಿಂಚೂ ಭೂಮಿ ಅಗೆದ ಕುರುಹು ಎಲ್ಲೂ ಕಂಡಿಲ್ಲ.!
ವಿವಿಯಲ್ಲಿ ಏನೇನು ಇರಲಿದೆ..?
ರಾಜೀವಗಾಂಧಿ ಆರೋಗ್ಯ ವಿವಿ ಆವರಣದಲ್ಲಿ ಆಡ್ಥಳಿತ ಭವನ, 34,35 ಕೋಟಿ ವಚ್ಚದಲ್ಲಿ 750 ಹಾಸಿಗೆಯ ಹೈಟೆಕ್ ಆಸ್ಪತ್ರೆ, 78,63 ಕೋಟಿ, 250 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 53,27 ಕೋಟಿ, ವ್ಯೆದ್ಯಕೀಯ ಕಾಲೇಜು, 72,28 ಕೋಟಿ, ದಂತ ವ್ಯೆದ್ಯಕೀಯ ಕಾಲೇಜು, 24,56 ಕೋಟಿ, ಪಾರ್ಮಸಿ ಕಾಲೇಜು,12,95 ಕೋಟಿ, ನರ್ಸಿಂಗ್ ಕಾಲೇಜು, 8,13 ಕೋಟಿ, ಪುರುಷರ ಹಾಸ್ಟೆಲ್ 14,07 ಕೋಟಿ, ಮಹಿಳೆಯರ ಹಾಸ್ಟೆಲ್ 14,07 ಕೋಟಿ, ನರ್ಸಿಂಗ್ ಹಾಸ್ಟೆಲ್ 3,52 ಕೋಟಿ, ಸಿಬ್ಬಂದಿ ಕ್ವಾಟ್ರಸ್ 12,49 ಕೋಟಿ, ವಿಶ್ರಾಂತಿ ಕೊಠಡಿಗಳು 2,63 ಕೋಟಿ, ಕ್ಯಾಂಟಿನ್ ಬ್ಲಾಕ್ 0,96 ಲಕ್ಷ , ಅನಿಮಲ್ ಪ್ಲಾಂಟ್ 1,34 ಕೋಟಿ, ಭದ್ರತಾ ಸಿಬ್ಬಂದಿ ಕೊಠಡಿ 23ಲಕ್ಷ ,ಮತ್ತು ಇತರೇ ಕಟ್ಟಡ ಖರ್ಚಿಗಾಗಿ 07 ಲಕ್ಷ ರೂಗಳ ಖರ್ಚುಗಳುಳ್ಳ ನೀಲಿ ನಕ್ಷೆ ಸಿದ್ಧವಾಗಿದೆ.