ನಿರ್ಮಲಾನಂದನಾಥ ಸ್ವಾಮೀಜಿ, ಡಾ. ಬಿ.ಎನ್. ಗಂಗಾಧರ್‌, ಡಾ. ರಾಜನ್‌ ದೇಶಪಾಂಡೆ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

ಬೆಂಗಳೂರು : ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ನಿಮ್ಹಾನ್ಸ್‌ ನಿವೃತ್ತ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್‌, ಧಾರವಾಡದ ಮಕ್ಕಳ ತಜ್ಞ ಡಾ. ರಾಜನ್‌ ದೇಶಪಾಂಡೆ ಅವರನ್ನು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಗೆ ಆಯ್ಕೆ ಮಾಡಲಾಗಿದೆ.

‘ಇದೇ 30ರಂದು ನಿಮ್ಹಾನ್ಸ್‌ ಸಭಾಂ ಗಣದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅಧ್ಯಕ್ಷತೆಯಲ್ಲಿ ನಡೆಯಲಿ ರುವ 24ನೇ ಘಟಿಕೋತ್ಸವದಲ್ಲಿ ಈ ಮೂವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್‌ ತಿಳಿಸಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಡಾ. ಭಾರತೀ ಪ್ರವೀಣ್‌ ಪವಾರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಭಾಗವಹಿ ಸಲಿದ್ದಾರೆ. ‘82 ಪಿಎಚ್‌.ಡಿ, 146 ಸೂಪರ್ ಸ್ಪೆಷಾಲಿಟಿ, 6,796 ಸ್ನಾತಕೋತ್ತರ, 787 ಸ್ನಾತಕೋತ್ತರ ಡಿಪ್ಲೊಮಾ ಪದವಿ, 362 ಫೆಲೋಷಿಪ್‌ ಕೋರ್ಸ್‌, 10 ಸರ್ಟಿಫಿಕೇಟ್‌ ಕೋರ್ಸ್‌, 36,409 ಸ್ನಾತಕ ಅಭ್ಯರ್ಥಿ ಗಳು ಸೇರಿ ವಿವಿಧ ವಿಷಯಗಳಲ್ಲಿ 43,883 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡ ಲಾಗುವುದು. ಎಲ್ಲ ನಿಕಾಯಗಳ ಒಟ್ಟು ವಿದ್ಯಾರ್ಥಿಗಳ ಒಟ್ಟಾರೆ ಫಲಿ ತಾಂಶ ಶೇ 82.25. ಒಟ್ಟು 83 ವಿದ್ಯಾರ್ಥಿ ಗಳು 100 ಚಿನ್ನದ ಪದಕ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *