ಜನುಮ ದಿನದ ಅಂಗವಾಗಿ ಇರುಳಿಗ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಸೀರೆಗಳನ್ನು ವಿತರಿಸಿದ ಸಾಪ್ಟವೇರ್ ಉದ್ಯೋಗಿ ಎನ್.ಎಸ್. ಚೈತ್ರ
ರಾಮನಗರ : ಬೆಂಗಳೂರಿನ ಸಾಪ್ಟವೇರ್ ಉದ್ಯೋಗಿ ಎನ್.ಎಸ್. ಚೈತ್ರ ಅವರು ಜನುಮ ದಿನದ ಅಂಗವಾಗಿ ತಾಲ್ಲೂಕಿನ ಕೂಟಗಲ್ ಬಳಿಯ “ರತ್ನಗಿರಿ ಹಾಡಿ”ಯಲ್ಲಿನ ಇರುಳಿಗ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಸೀರೆಗಳನ್ನು ಶನಿವಾರ ವಿತರಿಸಿದರು.

ಹ್ಯೂಮ್ಯಾನಿಟಿ ಫಸ್ಟ್ ಫೌಂಡೇಶನ್ ಅಧ್ಯಕ್ಷ ಎಸ್.ಬಿ. ಉದಯ್ ಕುಮಾರ್ ಮಾತನಾಡಿ ಜನುಮ ದಿನ, ಮದುವೆ ವಾರ್ಷಿಕೋತ್ಸವ ಸೇರಿದಂತೆ ಇತ್ಯಾದಿ ಆಚರಣೆಗಳನ್ನು ಸಾಮಾಜಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಆಚರಣೆ ಮಾಡುವುದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಾಪ್ಟವೇರ್ ಉದ್ಯೋಗಿ ವಿನಯ್ ಕುಮಾರಸ್ವಾಮಿ ಮಾತನಾಡಿ ನಮ್ಮ ತಂದೆಯವರಾದ ಉದ್ಯಮಿ ಜಿ.ಎಸ್. ಕುಮಾರಸ್ವಾಮಿ ಅವರು ಪ್ರತಿ ವರ್ಷವೂ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದರು. ಅವರ ಪ್ರೇರಣೆಯಿಂದ ನಾವು ಇರುಳಿಗ ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಸೀರೆಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.

ಸಂಶೋಧಾನ ವಿದ್ಯಾರ್ಥಿ ಎಸ್. ರುದ್ರೇಶ್ವರ, ಇರುಳಿಗ ಅರಣ್ಯವಾಸಿ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಲ್. ಶಿವರಾಜ್, ಎಸ್.ಕೆ. ಮನಸ್ವಿನಿ ಇದ್ದರು.