ನಿವೃತ್ತ ಮುಖ್ಯಶಿಕ್ಷಕರು, ಸಹಶಿಕ್ಷಕರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸನ್ಮಾನ

ರಾಮನಗರ : ದಿನಾಂಕ 30/4/22ರಂದು ನಿವೃತ್ತಿಯಾದ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚನ್ನಪಟ್ಟಣ ಘಟಕದ ವತಿಯಿಂದ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಮಾನ್ಯ ಉಪನಿರ್ದೇಶಕ ರಾದ ಶ್ರೀ ಗಂಗಣ್ಣ ಸ್ವಾಮಿಯವರು ಉಪಸ್ಥಿತರಿದ್ದು ನಿವೃತ್ತ ಶಿಕ್ಷಕರಿಗೆ ಶುಭಹಾರೈಸಿದರು.ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ತ್ವರಿತವಾಗಿ ಇಲಾಖೆಯು ತಲುಪಿಸುವ ವ್ಯವಸ್ಥೆ ಮಾಡಿದೆ ಎಂದರು.


ಈದಿನ ನಿವೃತ್ತಿ ಯಾದ ಸರಗೂರು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ನಾಗಮಣಿ, ಟಿಪ್ಪುನಗರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ವೆಂಕಟರಾಮು, ಕೂಡ್ಲೂರು ಶಾಲೆಯ ಸಹಶಿಕ್ಷಕರಾದ ಶ್ರೀ ಶೇಖರಯ್ಯ ಮಠಪತಿ ಯವರನ್ನು ಸನ್ಮಾನಿಸಲಾಯಿತು.


ಈ ಸಮಾರಂಭದಲ್ಲಿ ರಾಮನಗರ ಜಿಲ್ಲಾ ವಿಷಯ ಪರಿವೀಕ್ಷಕರಾದ ಶ ಶ್ರೀ ಸೋಮಲಿಂಗಯ್ಯರವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾದ ಶ್ರೀ ನಾಗೇಶ್ ಎಸ್ ಎಂ ,ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀ ಕೃಷ್ಣ ಕುಮಾರ್ ಎಂಟಿ, ಸಹಕಾರ್ಯದರ್ಶಿಗಳಾದ ಶ್ರೀ ಲಿಂಗರಾಜು, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ವೀರಾಜ್, ಉಪಾಧ್ಯಕ್ಷ ರಾದ ಶ್ರೀಮತಿ ಸಾಕಮ್ಮ, ರಾಮಕೃಷ್ಣೇಗೌಡ, ಹರಿದಾಸ್, ಹೇಮಾವತಿ, ಶಿವಕುಮಾರ್,ಪ್ರಸನ್ನ ರಾಘವೇಂದ್ರ, ರವಿ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *