ಬಿಸಿಲು ಮಾರಮ್ಮ ದೇವಾಲಯದ ಹುಂಡಿ ಹೊಡೆದು ಕಳ್ಳತನ
ಮಾಗಡಿ : ತಾಲೂಕಿನ ಐಯ್ಯಂಡಹಳ್ಳಿ ಗ್ರಾಮದ ಬಿಸಿಲು ಮಾರಮ್ಮ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಕಳ್ಳರು ಹಾರೆ ಕೊಲು ನಿಂದ ಹುಂಡಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ. ಕಳೆದ 8 ತಿಂಗಳ ಹಿಂದೆ ದೇವಾಲಯ ಆಡಳಿತ ಮಂಡಳಿ ಹುಂಡಿಯಲ್ಲಿದ್ದ ಹಣವನ್ನು ಸಂಗ್ರಹಿಸಲಾಯಿತು ನಂತರ ಹುಂಡಿಯ ಹಣವನ್ನು ಸಂಗ್ರಹಿಸಿರಲಿಲ್ಲ ಇದರಿಂದಾಗಿ ಸುಮಾರು 2,50 ಲಕ್ಷದಷ್ಟು ಹಣ ಸಂಗ್ರಹವಾಗಿದ್ದು ಇದನ್ನು ಕಳ್ಳರು ಕದ್ದು ಪರಾಯಾಗಿದ್ದು ಈ ಬಗ್ಗೆ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಗ್ರಾಮದ ಹಿರಿಯ ಮುಖಂಡ ಐಯ್ಯಂಡಹಳ್ಳಿ ರಂಗಸ್ವಾಮಿ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಕಳ್ಳರು ದೇವಾಲಯ ಹುಂಡಿಗಳಲ್ಲೆ ಟಾರ್ಗೆಟ್ ಮಾಡಿ ಹಣದೋಚುತ್ತಿದ್ದು, ಕಳ್ಳರನ್ನು ಸೆರೆಹಿಡಿಯುವಲ್ಲಿ ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.