ರಾಗಿ ಖರೀದಿಸಲು ಸರ್ವರ್ ಸಮಸ್ಯೆ ನೆಪವೊಡ್ಡಿ ರೈತರಿಗೆ ಅನ್ಯಾಯ : ಲೋಕೇಶ್ ಹೊಸಪಾಳ್ಯ ಆಕ್ರೋಶ
ಮಾಗಡಿ : ರಾಗಿ ಖರೀದಿಸಲು ಒಂದು ದಿನ ಸಮಯ ನೀಡಿ ನಂತರ ಸರ್ವರ್ ಸಮಸ್ಯೆ ನೆಪಹೊಡ್ಡಿ ರೈತರಿಗೆ ಅನ್ಯಾಯಮಾಡುತ್ತಿದ್ದಾರೆಂದು ರೈತ ಸಂಘದ ಲೋಕೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸೋಮೇಶ್ವರ ದೇವಾಲಯದ ಬಳಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಗಿ ಖರೀದಿ ಸ್ಥಗಿತಗೊಳಿಸಿದ ನಂತರ ರಾಗಿ ಖರೀದಿ ಮಾಡುವಂತೆ ರಾಜ್ಯ ರೈತಸಂಘ ಹೋರಾಟ ನಡೆಸಿದ್ದು ಈ ಸಂಬಂಧ ಸರಕಾರ ಖರೀದಿಗೆ ಮುಂದಾಗಿ ಒಂದುದಿನ ಮಾತ್ರ ರಾಗಿ ಖರೀದಿ ಮಾಡಿ ಮರುದಿನ ಸರಕಾರ ರಾಗಿ ಖರೀದಿಗೆ ಸರ್ವರ್ ನಿಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದು ಇದು ಅಧಿಕಾರಿಗಳ ತಪ್ಪೆ ಅಥವ ಸರಕಾರ ಖರೀದಿಗೆ ಸ್ಥಗಿತಗೊಳಿಸಿದೀಯಾ ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದರು.
ಮಾಗಡಿಯಿಂದ ತಾಳೇಕೆರೆ ಹ್ಯಾಂಡ್ ಪೋಸ್ಟ್ ವರೆಗೂ ಕೆಶಿಫ್ ರಸ್ತೆ ನಿರ್ಮಿಸುತ್ತಿದ್ದು ರಸ್ತೆ ಬದಿ ಎತ್ತರವಾಗಿ ಚರಂಡಿ ನಿರ್ಮಾಣಮಾಡುತ್ತಿರುವುದರಿಂದ ಮನೆಗಳಿಗೆ ತೆರಳು ಸಾಧ್ಯವಾಗದೆ ಮನೆ ಬಾಗಿಲ ಎತ್ತರಕ್ಕೆ ರೈತರು ಮಣ್ಣುಹಾಕಿಕೊಳ್ಳುತ್ತಿರುವುದರಿಂದ ರಸ್ತೆ ಅಪಘಾತನಡೆದು ಪ್ರಾಣ ಹಾನಿಸಂಬಂವಿಸುತ್ತಿದ್ದು ಕೂಡಲೇ ಕೆಶಿಫ್ ಅಧಿಕಾರಿಗಳು ಚರಂಡಿಯ ಸ್ಲಾಬ್ ಕತ್ತರಿಸಿ ರೈತರು ಮನೆಗಳಿಗೆ ತೆರಳಲು ಅವಕಾಶಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ರೈತರಿಗೆ ಟಿಸಿ ಅಳವಡಿಸಲು ಕಳೆದ ಎರಡು ವರ್ಷದ ಹಿಂದೆ ಹಣ ಕಟ್ಟಿಸಿಕೊಂಡು ಇಂದಿಗೂ ಆಳವಡಿಸದ ಕಾರಣ ರೈತರು ಸಮಸ್ಯೆ ಎದುರಿಸುತ್ತಿದ್ದು ಈ ಬಗ್ಗೆ 2 ತಿಂಗಳ ಹಿಂದೆ ಬೆಸ್ಕಾಂ ವಿರುದ್ದ ಪ್ರತಿಭಟನೆ ನಡೆಸಿದ ವೇಳೆ ಶೀಘ್ರವೆ ಟಿಸಿ ಅಳವಡಿಸುವ ಭರವಸೆ ನೀಡಿದರು ಆದರೂ ಇಲ್ಲಿಯವರೆಗೂ ಅಳವಡಿಸಿಲ್ಲ ನಿರಂತರವಾಗಿ ಎಇಇ ಅಧಿಕಾರಿಗಳು ವರ್ಗಾವಣೆಯಾಗುತ್ತಿದ್ದಾರೆ ಈ ರೀತಿಯಾದರೆ ರೈತರು ಯಾರ ಬಳಿ ನೋವು ಹೇಳಿಕೊಳ್ಳುವುದು ಎಂದು ಪ್ರಶ್ನಿಸಿದ ಅವರು ಬೇಸಿಗೆಯಾಗಿದ್ದು ಸಮರ್ಪಕ ವಿದ್ಯುತ್ ಇಲ್ಲದೆ ರೈತರು ಬೆಳೆದ ಬೆಳೆಗಳು ಒಣಗುತ್ತಿವೆ ಎಂದು ಆರೋಪಿಸಿದರು.
ತಾಲೂಕು ಕಚೇರಿಯ ಸರ್ವೆ, ಆರ್‍ಆರ್‍ಟಿ ಇಲಾಖೆಯಲ್ಲಿ ಹಣ ಕೊಟ್ಟಂತಹವರಿಗೆ ಕೆಲಸವಾಗುತ್ತಿದೆ, ಯಾರದ್ದೊ ಭೂಮಿಯನ್ನು ಇನ್ಯಾರದ್ದೋ ಹೆಸರಿಗೆ ಕೂರಿಸುತ್ತಿದ್ದಾರೆ ಇದನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿ, ನ್ಯಾಯಾಲಯಕ್ಕೆ ಅಲೆಯುವಂತಾಗಿದೆ ಈ ಸಂಬಂಧ ಮೂರುದಿನಗಳ ಒಳಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ತಹಶೀಲ್ದಾರ್ ರೈತ ಮುಖಂಡ ರೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಒಂದು ವಾರದ ಒಳಗೆ ಸೋಮೇಶ್ವರ ಕಾಲೋನಿ ಬಳಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು, ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳುಬೇಟಿ ನೀಡಿ ನಮ್ಮ ಸಮಸ್ಯೆ ಬಗೆಹರಿಸಲಾಗಿದೆ ಎಂದು ಹೇಳುವ ವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಪೊಲೀಸರು ಬಂಧಿಸಿದರು ಎದುರುವುದಿಲ್ಲ ಇದು ಬೂಟಾಟಿಕೆ ಪ್ರತಿಭಟನೆ ಅಲ್ಲ ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ಒಳಚರಂಡಿ ತ್ಯಾಜ್ಯ ಭರ್ಗಾವತಿ ಕೆರೆಗೆ ಸೇರಿ ಕೆರೆ ಕಲುಷಿತವಾಗಿ ಸುತ್ತಮುತ್ತಲ ಗ್ರಾಮಸ್ಥರು ಕಲುಷಿತ ನೀರು ಕುಡಿದು ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ ಸರಿಪಡಿಸಲು ಯಾರು ಮುಂದಾಗಿಲ್ಲ ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನಗೊಳಿಸುವ ಕೆಲಸ ಸ್ಥಗಿತಗೊಂಡಿದ್ದು 15 ದಿನಗಳ ಒಳಗೆ ಜಲಾಶಯದ ಬಳಿ ಪ್ರತಿಭಟನೆ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ಸಾಕಷ್ಟು ಜಲಂತ ಸಮಸ್ಯೆಗಳಿಗೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದರು ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿ ಬಗೆಹರಿಯುತ್ತಿಲ್ಲ ಇಂಥಹವರಿಗೆ ರೈತಸಂಘ ಬಿಸಿ ಮುಟ್ಟಿಸುವ ಕೆಲಸಮಾಡಲಾಗುವುದು,
ಬಾಕ್ಸ್: ಜನ ಪ್ರತಿ ನಿಧಿಗಳು ನಮ್ಮ ಹೋರಾಟವನ್ನು ಗಮನಿಸಬೇಕು ಇದರಲ್ಲಿ ಪಕ್ಷ-ಭೇಧ ಮಾಡಬಾರದು ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಕೆಲಸಮಾಡಬೇಕು ಎಂದು ಒತ್ತಾಯಿಸಿದರು.
ರೈತಮುಖಂಡರಾದ ಚನ್ನರಾಯಪ್ಪ, ಪಟೇಲ್ ಹನುಮಂತಯ್ಯ, ಶಿವರುದ್ರಯ್ಯ, ನಿಂಗಪ್ಪ, ರಂಗಪ್ಪ, ಹನುಮಂತಯ್ಯ, ನಾಗರಾಜು, ಷಡಾಕ್ಷರಿ, ಚಿಕ್ಕಣ್ಣ, ಮಂಜುನಾಥ್, ಶಂಕರಯ್ಯ, ನಾರಾಯಣಪ್ಪ ಇತರರು ಪಾಲ್ಗೊಂಡಿದ್ದರು.