ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆ.ಎಸ್. ಶಿವಮಾದು, ಸದಸ್ಯರಾಗಿ ಸಿಂಗ್ರಯ್ಯ, ಡಿ. ನರೇಂದ್ರ ನೇಮಕ
ರಾಮನಗರ: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳಿಗೆ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಬಿಜೆಪಿ ಮುಖಂಡ ಕೆ.ಪಿ. ದೊಡ್ಡಿ ನಿವಾಸಿ ಕೆ.ಎಸ್. ಶಿವಮಾದು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ. ಎಸ್.ಸಿ. ಮೋರ್ಚಾ ಮುಖಂಡ ಕೇತೋಹಳ್ಳಿ ಸಿಂಗ್ರಯ್ಯ ಹಾಗೂ ನಗರ ಮಂಡಲದ ಕಾರ್ಯದರ್ಶಿ ಡಿ. ನರೇಂದ್ರ ಅವರು ಸದಸ್ಯರಾಗಿ ನೇಮಕ ಆಗಿದ್ದಾರೆ.