ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಹಲಸಬೆಲೆ ಗ್ರಾಮದ ವಿದ್ವಾನ್ ಎಚ್.ಬಿ. ಗಂಗಾಧರಯ್ಯ ಆಯ್ಕೆ

ನೂತನ ರಾಜ್ಯಾಧ್ಯಕ್ಷ ಹಲಸಬೆಲೆ ಗ್ರಾಮದ ವಿದ್ವಾನ್ ಎಚ್.ಬಿ. ಗಂಗಾಧರಯ್ಯ ಮಾತನಾಡಿ, 1995ರಿಂದ ಅನುದಾನ ರಹಿತವಾಗಿ ನಡೆಯುತ್ತಿರುವ ಸಂಸ್ಕೃತ ಪಾಠ ಶಾಲೆಗಳನ್ನು ಸರಕಾರದ ಗಮನಕ್ಕೆ ತಂದು ಅನುದಾನ ಶಾಲೆಯನ್ನಾಗಿಸಲಾಗುವುದು, ಸಂಸ್ಕೃತ ಶಿಕ್ಷಕರು ತರಬೇತಿ ಪಡೆಯಲು ಯಾವುದೆ ತರಬೇತಿ ಕೇಂದ್ರಗಳಿಲ್ಲ ಈ ಸಂಬಂಧ ಸರಕಾರದ ವತಿಯಿಂದ ತರಬೇತಿ ಶಾಲೆ ಆರಂಭಿಸಲು ಸರಕಾರಕ್ಕೆ ಒತ್ತಾಯಿಸಲಾಗುವುದು, ಸಾಮಾನ್ಯ ಶಾಲೆಗಳಿಗೆ ಸರಕಾರ ಉಚಿತ ಪಠ್ಯಪುಸ್ತಕ ನೀಡುತ್ತಿರುವ ರೀತಿ ರಾಜ್ಯದ ಸಂಸ್ಕೃತ ಪಾಠ ಶಾಲೆಗಳಿಗೂ ಪಠ್ಯ ಪುಸ್ತಕ ಹಾಗೂ ವಿದ್ಯಾರ್ಥಿ ವೇತನ ನೀಡಬೇಕು ಎಂದು ಮನವಿ ಮಾಡಿದರು.

ಮಾಗಡಿ : ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಹಲಸಬೆಲೆ ಗ್ರಾಮದ ವಿದ್ವಾನ್ ಎಚ್.ಬಿ.ಗಂಗಾಧರಯ್ಯ ಆಯ್ಕೆಯಾಗಿದ್ದಾರೆ.
ತುಮಕೂರಿನ ಸಿದ್ದಗಂಗಾಮಠದ ಉದ್ದಾನೇಶ್ವರ ಸಮುದಾಯ ಭವನದಲ್ಲಿ ಏ. 30 ರಂದು ನಡೆದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಹಲಸಬೆಲೆ ಗ್ರಾಮದ ವಿದ್ವಾನ್ ಎಚ್.ಬಿ.ಗಂಗಾಧರಯ್ಯ, ಪ್ರಧಾನ ಕಾರ್ಯದರ್ಶಿ ವಿದ್ವಾನ್. ಜಿ. ಪರಶಿವಮೂರ್ತಿ, ಖಜಾಂಚಿಯಾಗಿ ಡಾ. ಜಗದೀಶ್ ಆವಿರೋಧ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಎಚ್.ಬಿ. ಗಂಗಾಧರಯ್ಯ, ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಪರಶಿವಮೂರ್ತಿ, ನಂಜಾನಾಯ್ಕ್ ನಾಮಪತ್ರ ಸಲ್ಲಿಸಿದ್ದು, ಎಚ್.ಬಿ.ಗಂಗಾಧರಯ್ಯ 206 ಮತಪಡೆದು ಅಧ್ಯಕ್ಷರಾಗಿ ಜಯಶೀಲರಾದರೆ, 146 ಮತಪಡೆದು ಪ್ರಧಾನ ಕಾರ್ಯದರ್ಶಿಯಾಗಿ ಜಿ.ಪರಶಿವಮೂರ್ತಿ, ಖಜಾಂಚಿ ಡಾ.ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚುನಾವಣಾಧಿಕಾರಿ ರಾಮಕೃಷ್ಣ ತಿಳಿಸಿದ್ದಾರೆ.
ನೂತನ ರಾಜ್ಯಾಧ್ಯಕ್ಷ ಹಲಸಬೆಲೆ ಗ್ರಾಮದ ವಿದ್ವಾನ್ ಎಚ್.ಬಿ.ಗಂಗಾಧರಯ್ಯ ಮಾತನಾಡಿ, 1995ರಿಂದ ಅನುದಾನ ರಹಿತವಾಗಿ ನಡೆಯುತ್ತಿರುವ ಸಂಸ್ಕೃತ ಪಾಠ ಶಾಲೆಗಳನ್ನು ಸರಕಾರದ ಗಮನಕ್ಕೆ ತಂದು ಅನುದಾನ ಶಾಲೆಯನ್ನಾಗಿಸಲಾಗುವುದು, ಸಂಸ್ಕೃತ ಶಿಕ್ಷಕರು ತರಬೇತಿ ಪಡೆಯಲು ಯಾವುದೆ ತರಬೇತಿ ಕೇಂದ್ರಗಳಿಲ್ಲ ಈ ಸಂಬಂಧ ಸರಕಾರದ ವತಿಯಿಂದ ತರಬೇತಿ ಶಾಲೆ ಆರಂಭಿಸಲು ಸರಕಾರಕ್ಕೆ ಒತ್ತಾಯಿಸಲಾಗುವುದು, ಸಾಮಾನ್ಯ ಶಾಲೆಗಳಿಗೆ ಸರಕಾರ ಉಚಿತ ಪಠ್ಯಪುಸ್ತಕ ನೀಡುತ್ತಿರುವ ರೀತಿ ರಾಜ್ಯದ ಸಂಸ್ಕೃತ ಪಾಠ ಶಾಲೆಗಳಿಗೂ ಪಠ್ಯ ಪುಸ್ತಕ ಹಾಗೂ ವಿದ್ಯಾರ್ಥಿ ವೇತನ ನೀಡಬೇಕು ಎಂದರು.
ಕಳೆದ ಆರು ವರ್ಷಗಳಿಂದ ಚಿತ್ರದುರ್ಗ ಸಂಸ್ಕೃತ ವಿಷಯ ಪರಿವೀಕ್ಷಕನಾಗಿ ಸಂಸ್ಕೃತ ಭಾಷೆ, ಪಾಠಶಾಲೆಗಳ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸಿದರಿಂದ ಎಲ್ಲಾ ಸಂಸ್ಕೃತ ಶಿಕ್ಷಕರ ವಿಶ್ವಾಸಗಳಿಸಿದ ಕಾರಣ ಇಂದು ರಾಜ್ಯಾಧ್ಯಕ್ಷನಾಗಲು ಅನುಕೂಲವಾಗಿದೆ ಇದರಿಂದ ಮತಷ್ಟು ಜವಬ್ದಾರಿ ಹೆಚ್ಚಿದ್ದು ಸಂಸ್ಕøತ ಪಾಠಶಿಕ್ಷಕರ ಧ್ವನಿಯಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಇದೇ ವೇಳೆ ಸಂಸ್ಕೃತ ಪಾಠಶಾಲಾ ಶಿಕ್ಷಕರಾದ ಭರತ್ ಕುಮಾರ್, ಸತೀಶ್ ಡಿವಿ, ಸುರೇಶ್, ಎಚ್.ಎ.ಕುಮಾರು, ಶಂಕುತಕಾ ಹೊಜಗನವರ್, ಅನಿತ ಎಸ್.ಬಿ. ನಿರ್ಮಲಾ ದೇವಿ, ಕೆಂಪಮ್ಮ, ನವೀನ್ ಇದ್ದರು.
ನೂತನ ಅಧ್ಯಕ್ಷರನ್ನು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮೀಜಿ, ಕರ್ನಾಟ ಸಂಸ್ಕøತ ವಿಶ್ವವಿದ್ಯಾಲಯದ ಕುಲಸಚಿವ ಪ್ರೋ.ವಿ.ಗಿರೀಶ್ ಚಂದ್ರ, ಶಾಸಕ ಜ್ಯೋತಿಗಣೇಶ್ ಅಭಿನಂದಿಸಿದರು.

Leave a Reply

Your email address will not be published. Required fields are marked *