ಪೊಲೀಸ್ ಇಲಾಖೆಯಿಂದಲೇ ಪಿಎಸ್‌ಐ ನೇಮಕಾತಿ ಅಕ್ರಮ ಬಹಿರಂಗ : ಅಶ್ವತ್ಥನಾರಾಯಣ ವಿರುದ್ಧ ಬಿಜೆಪಿ ಮಂತ್ರಿಗಳಿಂದಲೇ ಷಡ್ಯಂತ್ರ : ಎಚ್.ಡಿ. ಕುಮಾರಸ್ವಾಮಿ ಆರೋಪ
ಚನ್ನಪಟ್ಟಣ : PSI ಹಗರಣದ ವಿಚಾರವಾಗಿ ನನಗಿರುವ ಮಾಹಿತಿಯೇ ಬೇರೆ ಇದೆ. ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿದೆ. ಚಾಮರಾಜಪೇಟೆಯಲ್ಲಿ ನಡೆದ ಘಟನೆಗೂ ಇದಕ್ಕೂ ದೊಡ್ಡ ಕಥೆ ಇದೆ. ಕಾಂಗ್ರೆಸ್ ನಾಯಕರ ಬಳಿ ದಾಖಲೆ ಎಲ್ಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಪಿಎಸೈ ನೇಮಕ ವಿಚಾರದಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಸತ್ಯವಾಗಿದೆ. ಅಶ್ವಥ್ ನಾರಾಯಣ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ದಾಖಲೆ ಎಲ್ಲಿದೆ..! ಬಿಜೆಪಿಯ ಒಬ್ಬ ವಕ್ತಾರ ಕಮಲ್ ಪಂಥ್ ವಿರುದ್ಧ ಆರೋಪ ಮಾಡಿದ್ದರು. ಚಾಮರಾಜಪೇಟೆಯಲ್ಲಿ ನಡೆದ ಕೊಲೆಯ ವಿಚಾರವಾಗಿ ಆರೋಪ ಮಾಡಿದ್ದರು.
ಪೊಲೀಸ್ ಇಲಾಖೆ ಆಕ್ಸಿಡೆಂಟ್ ಎಂದು ಹೇಳಿತ್ತು. ಆದರೆ ಬಿಜೆಪಿ ನಾಯಕರು ಉರ್ದು ವಿಚಾರವಾಗಿ ಗಲಾಟೆಯಾಗಿ ಕೊಲೆಯಾಯ್ತು ಎಂದು ಕಥೆ ಕಟ್ಟಿದ್ದರು. ಅಲ್ಲಿಂದ PSI ವಿಚಾರವಾಗಿ ಲಿಂಕ್ ಹೋಯ್ತು.
ಬಿಜೆಪಿಯ ವ್ಯಕ್ತಿಯೊರ್ವ ನಿಷ್ಠಾವಂತ ಪೊಲೀಸ್ ಅಧಿಕಾರಿಯ ಮೇಲೆ ಆರೋಪ ಮಾಡಿದ್ದರು. ಆ ವ್ಯಕ್ತಿಗೆ ಈಗ ಕಲಬುರ್ಗಿಯಲ್ಲಿ ಅರೆಸ್ಟ್ ಆಗಿರುವವರ ಲಿಂಕ್ ಇತ್ತು. ಅದಕ್ಕಾಗಿ ಈಗ PSI ಹಗರಣ ಫಿಕ್ಸ್ ಆಗಿದೆ, ಇದು ದೊಡ್ಡ ಕಥೆ ಇದೆ. ಎಲ್ಲರೂ ದುಡ್ಡು ಕೊಟ್ಟು ಅಗಿದ್ದಾರೆ ಎನ್ನಲು ಆಗಲ್ಲ, 30 % ದುಡ್ಡು ಕೊಟ್ಟು ಆಗಿರಬಹುದು. 30 – 40 % ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರಬಹುದು.
ಬಿಜೆಪಿ ನಾಯಕರು ಪೊಲೀಸ್ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಕಮಲ್ ಪಂಥ್ ಗೆ ಅವಮಾನ ಮಾಡಿದ್ದರು. ಅದಕ್ಕಾಗಿ ಅವರ ಅಭಿಮಾನಿಗಳು ಸರ್ಕಾರಕ್ಕೆ ಬುದ್ಧಿ ಕಲಿಸಲು ಅವರೇ ಹೊರತೆಗೆದಿದ್ದಾರೆ, ಇದು ಸರ್ಕಾರದಿಂದ ಹೊರಬಂದಿಲ್ಲ. ಪೊಲೀಸ್ ಇಲಾಖೆಯಿಂದಲೇ ಇದು ಹೊರಬಂದಿದೆ. ಈ ಸರ್ಕಾರದ ನಡವಳಿಕೆ ವಿರುದ್ಧ ಇಲಾಖೆಯವರೇ ಹೊರತೆಗೆದಿದ್ದಾರೆ. ಅಶ್ವಥ್ ನಾರಾಯಣ ವಿರುದ್ಧ ಅವರ ಜೊತೆಯಲ್ಲಿದ್ದವರೇ ಮಾಧ್ಯಮಕ್ಕೆ ಮಾಹಿತಿ ಕೊಟ್ಟಿದ್ದಾರೆ.
ಅಮಿತ್ ಷಾ ಬರುತ್ತಿದ್ದರಿಂದ ಇದನ್ನ ಎಕ್ಸಪೋಸ್ ಮಾಡಲು ಅವರೇ ಹೊರತೆಗೆದಿದ್ದಾರೆ. ಅಮಿತ್ ಷಾ ತಲೆಗೆ ಹೋಗಲಿ ಎಂದು ಅಶ್ವಥ್ ನಾರಾಯಣ ವಿರುದ್ಧ ಮಾಹಿತಿ ನೀಡಿದ್ದಾರೆ. ಇವರ ವಿಕೆಟ್ ಉರುಳಿಸಲು ಬಿಜೆಪಿಯಲ್ಲಿಯೇ ನಡೆದಿದೆ ಕುತಂತ್ರ. ಇಲ್ಲಿ ಅವರ ಮನೆಗೆ ಅವರೇ ಬೆಂಕಿ ಹಚ್ಚಿಕೊಳ್ತಾರೆ ಬಿಜೆಪಿಯವರು, ನಾವು ಹಚ್ಚಬೇಕಿಲ್ಲ. ನಾನು ಮತ್ತೆ ಪೆಟ್ರೋಲ್ ತೆಗೆದುಕೊಂಡು ಹೋಗ್ಲಾ ಸುರಿಯೋಕೆ ಎಂದರು.
ಇನ್ನು ಕಾಂಗ್ರೆಸ್ ನವರಿಗೆ ರಿಯಲ್ ಇಶ್ಯೂ ಮೇಲೆ ಹೋರಾಟ ಮಾಡುವ ಶಕ್ತಿಯಿಲ್ಲ. ಲಯಾರೋ ಹೇಳಿದನ್ನ ಹೇಳ್ಕೋತ್ತಾರೆ ಅಷ್ಟೇ. ಕಮಲ್ ಪಂಥ್ ಗೆ ಅವಮಾನ ಮಾಡದಿದ್ದರೆ ಈ ವಿಚಾರ ಬರುತ್ತಿರಲಿಲ್ಲ. ಇಲ್ಲದಿದ್ದರೆ ಇದನ್ನ ಹೂತು ಹಾಕುತ್ತಿದ್ದರು. ಯಾರೇ ಈ ಅಕ್ರಮ ಮಾಡಿದ್ದರು ಅವರ ವಿರುದ್ದ ಕ್ರಮ ವಹಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಧರ್ಮಗುರುಗಳ ನಿಧನಕ್ಕೆ ಸಂತಾಪ –
ನಿನ್ನೆ ಮುಸ್ಲಿಂ ಧರ್ಮಗುರುಗಳು ಮೃತಪಟ್ಟ ವಿಚಾರ ದುರಂತವಾಗಿದೆ. ರಂಜಾನ್ ನಮಾಜ್ ಬಳಿಕ ಕುಟುಂಬ ಸಮೇತರಾಗಿ ಊರಿಗೆ ಹೊರಟಿದ್ದರು. ಅಪಘಾತದಲ್ಲಿ ಧರ್ಮ ಗುರುಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಧರ್ಮ ಗುರು, ಅವರ ಪತ್ನಿ, ಪುತ್ರಿ ಮೃತಪಟ್ಟಿರುವುದು ದಾರುಣ ಘಟನೆಯಾಗಿದೆ. ಊರಿಗೆ ಹೊರಟವರು ಮೃತಪಟ್ಟ ವಿಚಾರ ನೋವಿನ ಸಂಗತಿಯಾಗಿದ್ದು, ಮತ್ತೊಬ್ಬ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಗೆ ಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ಮನವಿ ಮಾಡಲಾಗಿದೆ. ಚುಂಚನಗಿರಿ ಶ್ರೀಗಳು ಜೊತೆಗೆ ಈಗಾಗಲೆ ಮಾತನಾಡಿದ್ದೇನೆ. ಶ್ರೀಗಳು ವೈಯಕ್ತಿಕವಾಗಿ ನೋಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಯಾವುದೇ ರೀತಿಯ ಚಿಕಿತ್ಸಾ ವೆಚ್ಚವನ್ನು ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ.
ಮುಸ್ಲಿಂ ಧರ್ಮಗುರು ಸೈಯದ್ ನಜ್ಮಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಧಾರ್ಮಿಕ ಕೆಲಸದ ಮೂಲಕ ಅವರ ಸಮುದಾಯದಲ್ಲಿ ಒಳ್ಳೆಯ ಹೆಸರು ಪಡೆದಿದ್ದರು. ಮುಸ್ಲಿಂ ಧರ್ಮಗುರುಗಳ ಆತ್ಮಕ್ಕೆ ಶಾಂತಿ ಕೋರುತ್ತೇನೆಂದು ಧರ್ಮಗುರುಗಳ ಸಾವಿಗೆ ಮಾಜಿ ಸಿಎಂ ಹೆಚ್‌ಡಿಕೆ ಸಂತಾಪ ವ್ಯಕ್ತಪಡಿಸಿದರು.