ಉದ್ಯೋಗಿಗಳ ಕ್ಷೇಮಾಭಿವೃದ್ಧಿಗೆ ಉತ್ತೇಜನ ನೀಡಲು ಟೋಯೋಟಾ ಕಿರ್ಲೋಸ್ಕರ್ ತನ್ನ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸಿದೆ
ಬೆಂಗಳೂರು : ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಉದ್ಯೋಗಿಗಳು, ಸಮಾಜ ಮತ್ತು ಕಂಪನಿಯ ಅಭಿವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ತನ್ನ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿ ಪರಸ್ಪರ ನಂಬಿಕೆ ಮತ್ತು ಎಲ್ಲರನ್ನೂ ಗೌರವಿಸುವ ತತ್ವದ ಆಧಾರದ ಮೇಲೆ ಧನಾತ್ಮಕ ಕೆಲಸದ ವಾತಾವರಣವನ್ನು ನಿರ್ಮಿಸಲು ಇತ್ತೀಚೆಗೆ ಒಪ್ಪಂದದ ಜ್ಞಾಪಕ ಪತ್ರಕ್ಕೆ (ಎಂಒಎಸ್) ಸಹಿ ಹಾಕಿದೆ.
2020-2022 ರ ಎರಡು ಆರ್ಥಿಕ ವರ್ಷಗಳ ಅವಧಿಯ ಬೇಡಿಕೆಯ ಚಾರ್ಟರ್ ಅನ್ನು ಪೂರೈಸುವ ಹೊಸ ಒಪ್ಪಂದಕ್ಕೆ ಕರ್ನಾಟಕ ಸರ್ಕಾರದ ಹೆಚ್ಚುವರಿ ಕಾರ್ಮಿಕ ಆಯುಕ್ತ ಡಾ. ಮಂಜುನಾಥ್ ಜಿ ಮತ್ತು ಟಿಕೆಎಂನ ಹಿರಿಯ ಆಡಳಿತ ಮಂಡಳಿ ಮತ್ತು ಟಿಕೆಎಂ-ಇಯುನ ಯೂನಿಯನ್ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಹಿ ಹಾಕಲಾಯಿತು.
ಎಂಒಎಸ್ ಬಗ್ಗೆ ಮಾತನಾಡಿದ ಟಿಕೆಎಂನ ಹಿರಿಯ ಅಧಿಕಾರಿಯೊಬ್ಬರು, “ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನಲ್ಲಿ, ನಾವು ಉದ್ಯೋಗಿಗಳ ಅಭಿವೃದ್ಧಿಗೆ ಅತ್ಯುನ್ನತ ಬದ್ಧತೆಯನ್ನು ಹೊಂದಿದ್ದೇವೆ ಮತ್ತು “ಪರಸ್ಪರ ನಂಬಿಕೆ ಮತ್ತು ಗೌರವ” ದ ತತ್ವದ ಆಧಾರದ ಮೇಲೆ ಆಕರ್ಷಕ ಕೆಲಸದ ಸ್ಥಳವನ್ನು ರಚಿಸುತ್ತೇವೆ. ಉದ್ಯೋಗಿಗಳು ನಮ್ಮ ಪಾಲುದಾರರು; ಆದ್ದರಿಂದ, ಬಲವಾದ ಕಂಪನಿಯನ್ನು ನಿರ್ಮಿಸುವಾಗ ಪ್ರತಿಯೊಬ್ಬ ಉದ್ಯೋಗಿಗೂ ಸಕಾರಾತ್ಮಕ ಚಿಂತನೆ ಮತ್ತು ಬೆಳವಣಿಗೆಯ ಅವಕಾಶಗಳನ್ನು ಸುಗಮಗೊಳಿಸುವ ಕಾರ್ಯಕ್ಷೇತ್ರವನ್ನು ಅಭಿವೃದ್ಧಿಪಡಿಸುವತ್ತ ನಮ್ಮ ಪ್ರಯತ್ನಗಳು ಇವೆ ಎಂದರು.
ಒಪ್ಪಂದದ ಭಾಗವಾಗಿ, ಕಂಪನಿಯ ಬೆಳವಣಿಗೆಯನ್ನು ಉಳಿಸಿಕೊಳ್ಳಲು, ವೇತನ ಮತ್ತು ಪ್ರಯೋಜನದ ಮಟ್ಟಗಳನ್ನು ನಿರ್ವಹಿಸಲು ಜಂಟಿಯಾಗಿ ಪ್ರಯತ್ನಿಸಲು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಯಿತು. ಉದ್ಯೋಗಿಗಳು ಉತ್ಪನ್ನ, ಸೇವೆ ಮತ್ತು ಭವಿಷ್ಯದ ಸ್ಪರ್ಧಾತ್ಮಕತೆಯನ್ನು ಗಮನದಲ್ಲಿರಿಸಿಕೊಂಡು ಗರಿಷ್ಠ ಫ್ಲೆಕ್ಸಿಬಲಿಟಿ ಮತ್ತು ಉತ್ಪಾದಕತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮ್ಯಾನೇಜ್ಮೆಂಟ್ ಮತ್ತು ಯೂನಿಯನ್ ನ ಎಲ್ಲಾ ಉದ್ಯೋಗಿಗಳು, ಕಂಪನಿ ಮತ್ತು ದೇಶದ ಅಭಿವೃದ್ಧಿಗಾಗಿ ಒಟ್ಟಾಗಿ ಕಾರ್ಯ ನಿರ್ವಹಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ.