ಕರಾಟೆ ಸ್ಪರ್ಧೆಯಲ್ಲಿ ಎನ್. ವರ್ಷಿತ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಮಾಗಡಿ : ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದ ಯುವತಿ ಎನ್. ವರ್ಷಿತ ಕರಾಟೆ ಸ್ಪರ್ದೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾಳೆ.
ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದ ನಾಗರಾಜು ಎಂಬುವರ ಪುತ್ರಿ ಎನ್.ವರ್ಷಿತ ಬೆಂಗಳೂರಿನ ಕುರುಬರ ಹಳ್ಳಿ ಡಾ.ರಾಜಕುಮಾರು ಆಡಿಟೋರಿಯಂನಲ್ಲಿ ನಡೆದ ರಾಜ್ಯಮಟ್ಟದ ರಾಜ್ಯ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಗೆಲ್ಲುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮೇ. 24 ರಿಂದ 31ರ ವರೆಗೆ ಇಂದ್ರ ಮುಲಿಯಾ, ಇಪೋ ಹ್ ಪೆರಾಕ್. ಮಲೇಷ್ಯಾ ಕ್ರಿಡಾಂಗಣದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ದೆ ನಡೆಯಲಿದ್ದು ಇಲ್ಲಿಯೂ ಗೆಲ್ಲುವ ಮೂಲಕ ಅಂತರ್ ರಾಷ್ಟ್ರೀಯಮಟ್ಟದಲ್ಲಿ ಗೆಲ್ಲುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಹೆಸರುತರಲಿ ಎಂದು ತಾಲೂಕಿನ ಕ್ರೀಡಾ ಅಭಿಮಾನಿಗಳು ಹಾರೈಸಿದ್ದಾರೆ.
ಬೆಂಗಳೂರಿನ ಓಕಿನವ ಡ್ರಾಗನ್ ಮಾರ್ಷಿಯಲ್ ಆಟ್ಸ್ ಫೆಡರೇಷನ್ ಕರಾಟೆ ಚಾಂಪಿಯನ್ಶಿಪ್ – 2022 ಸಂಸ್ಥೆಯಲ್ಲಿ ಕಳೆದ ಆರು ವರ್ಷದಿಂದ ತರಬೇತಿ ಪಡೆದಿದ್ದಾಳೆ.
ಪಿಯು ನಂತ ಕರಾಟೆ ತರಬೇತಿ ಕೇಂದ್ರ ಪ್ರಾರಂಬಿಸಿ ಇದರಿಂದ ನಾನು ಕಲಿತ ವಿದ್ಯೆ ಮತ್ತೊಂಬರಿಗೆ ನೀಡುತ್ತೇನೆ, ಕರಾಟೆಯಿಂದ ಆರೋಗ್ಯ, ನಮ್ಮ ರಕ್ಷಣೆ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಎನ್.ವರ್ಷಿತ ತಿಳಿಸಿದರು.
ತಾಲೂಕಿನ ಹೆಣ್ಣುಮಗಳೊಬ್ಬಳು ರಾಜ್ಯಮಟ್ಟದ ಕರಾಟೆ ಸ್ಪರ್ದೆಯಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತೋಷವಾಗಿದೆ. ಇವರ ಮುಂದಿನ ತರಬೇತಿಗೆ ಬೇಕಾದ ಎಲ್ಲಾ ಸಹಕಾರ ನೀಡುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ ತಿಳಿಸಿದರು.