ಶಾಸಕ ಎ. ಮಂಜುನಾಥ್ ಹೇಳುವುದನ್ನೆಲ್ಲಾ ನಂಬಲು ಮಾಗಡಿ ತಾಲ್ಲೂಕಿನ ಜನರು ಕುರಿಗಳಲ್ಲ : ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ

ಮಾಗಡಿ : ಎಚ್.ಎಂ.ರೇವಣ್ಣ ಅವರನ್ನು ಜೆಡಿಎಸ್‍ನಿಂದ ಶಾಸಕರು ನಿಲ್ಲಿಸಲಿ ಪ್ರಮಾಣಿಕವಾಗಿ ನಾನು ಸಪೋಟ್‍ಮಾಡುತ್ತೇನೆ, ಬೂಟಾಟಿಕೆ, ನಾಟಕ ಬಿಡಲಿ ಶಾಸಕರು ಬಿಡಬೇಕು ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎ.ಮಂಜುನಾಥ್ ಹೇಳುವುದನ್ನೆಲ್ಲಾ ಜನರು ನಂಬಲು ತಾಲೂಕಿನ ಜನರು ಕುರಿಗಳಲ್ಲ, ದಡ್ಡರಲ್ಲ, ಎಚ್.ಎಂ.ರೇವಣ್ಣ ರಾಜಕೀಯದ ಕೊನೆಯ ಹಂತ, ಕೊನೆ ಮೆಟ್ಟಿಲಲ್ಲಿ ಇದ್ದಾರೆ ಇಬ್ಬರು ಸೇರಿ ದೊಡ್ಡತನ ತೋರಿಸೋಣ ಅದನ್ನು ಬಿಟ್ಟು ಶಾಸಕರು ನಾಟಕವಾಡುವುದು ಸರಿಯಲ್ಲ. ಅಡ್ಜೆಟ್‍ಮೆಂಟ್ ರಾಜಕೀಯ ನಮಗೆ ಬರುವುದಿಲ್ಲ ನೇರವಾಗಿ ಮಾತನಾಡುತ್ತೇನೆ ಎಂದು ಶಾಸಕರ ವಿರುದ್ದ ಟೀಕಾಪ್ರಹಾರ ನಡೆಸಿದರು.
ಶಾಸಕ ಎ.ಮಂಜುನಾಥ್‍ರವರು ಮಾಜಿ ಸಚಿವಎಚ್.ಎಂ.ರೇವಣ್ಣನವರು ನನಗೆ ಗುರು ಶಿಷ್ಯರ ಸಂಬಂಧವಿದ್ದುದ್ರೋಣಾಚಾರ್ಯರು- ಏಕಲವ್ಯರೀತಿಯ ಸಂಬಂಧಎಂದು ಹೇಳಿಕೆ ಕೊಟ್ಟಿದ್ದಾರೆ ಹಾಗಾದರೆ 2023 ರಲ್ಲಿ ಮಾಜಿ ಸಚಿವರಿಗಾಗಿ ಶಾಸಕ ಸ್ಥಾನವನ್ನು ಎ.ಮಂಜುನಾಥ್‍ತ್ಯಾಗ ಮಾಡಲಿ. ನಾನು ಕಳೆದ ಇಪ್ಪತ್ತು ವರ್ಷಗಳಿಂದ ರಾಜಕೀಯ ಜಿದ್ದಾಜಿದ್ದಿನಲ್ಲಿ ವಿರೋಧ ಮಾಡಿಕೊಂಡು ಎಚ್.ಎಂ. ರೇವಣ್ಣ ವಿರುದ್ಧಚುನಾವಣೆ ಮಾಡಿಕೊಂಡು ಬಂದಿದ್ದೇನೆ ರೇವಣ್ಣನವರ ಮನಸ್ಸಿನಲ್ಲಿ ನಾನು ಬೇರೆ ಕ್ಷೇತ್ರಕ್ಕೆ ಕಳಿಸಿದ್ದೇನೆ ಎಂಬ ಕೊರಗಿದೆ ಅದು ವಿಮೋಚನೆಯಾಗಬೇಕು ಅವರು ಬೇg Éಯಾವುದೇಕ್ಷೇತ್ರದಲ್ಲೂ ನಿಂತರೂಗೆಲ್ಲಲು ಸಾಧ್ಯವಿಲ್ಲ ಗೋವಿಂದರಾಜುಕ್ಷೇತ್ರ, ಹೆಬ್ಬಾಳು ಕ್ಷೇತ್ರ ಖಾಲಿ ಇಲ್ಲ, ಮಾಗಡಿಕ್ಷೇತ್ರ ನಾನು ಬಿಟ್ಟುಕೊಡುವುದರಿಂದಎಚ್.ಎಂ.ರೇವಣ್ಣನವರು ಸ್ಪರ್ಧೆ ಮಾಡಲಿ ಶಾಸಕ ಎ.ಮಂಜುನಾಥ್‍ರವರು ಬೂಟಾಟಿಕೆ ಮಾತನ್ನು ಬಿಟ್ಟುಎಚ್.ಎಂ.ರೇವಣ್ಣ ನವರಿಗೆ ಮುಂದಿನ ಬಾರಿ ಶಾಸಕ ಸ್ಥಾನವನ್ನು ಬಿಟ್ಟುಕೊಡಿ ನಾನು ಕೂಡಅವರ ಪರವಾಗಿ ನಿಲ್ಲುತ್ತೇನೆ ಬೇಕಾದರೆಎಚ್.ಎಂ.ರೇವಣ್ಣಅವರನ್ನುಜೆಡಿಎಸ್ ಪಕ್ಷದಿಂದಲೇ ಸ್ಪರ್ಧೆ ಮಾಡಲಿ ನಾನೂ ಕೂಡ ಸಂಪೂರ್ಣ ಸಹಕಾರ ಮಾಡುತ್ತೇನೆ ಎಚ್.ಎಂ. ರೇವಣ್ಣಅವರನ್ನು ಶಾಸಕರನ್ನಾಗಿ ಕಳಿಸುತ್ತೆನೆ ಎಂದು ಬಾಲಕೃಷ್ಣ ಸ್ಪಷ್ಟನೆ ನೀಡಿದರು.
ಶಸ್ತ್ರತ್ಯಾಗ ನನ್ನಜೀವನದಲ್ಲಿಇಲ್ಲವೇಇಲ್ಲ : ಚುನಾವಣೆಯಲ್ಲಿ ಹೆದರಿ ಪಲಾಯನ ಮಾಡುವುದು ಬೆನ್ನುತೋರಿಸುವ ಕೆಲಸ ನನ್ನಜೀವನದಲ್ಲಿ ಮಾಡುವುದೇಇಲ್ಲಯಾರುಯಾರೋ ಬಂದಾಗಲೇ ನಾನು ಯುದ್ಧಮಾಡಿಗೆದ್ದಿದ್ದೇನೆ ನನ್ನಜೀವನದಲ್ಲಿ ಶಸ್ತ್ರತ್ಯಾಗ ಮಾಡುವಜಾಯಮಾನದವನು ನಾನಲ್ಲಎಂದು ಮಾಜಿ ಶಾಸಕ ಬಾಲಕೃಷ್ಣಖಾರವಾಗಿ ಹೇಳಿಕೆ ನೀಡಿದರು.
ಕಾಂಗ್ರೆಸ್ ನಲ್ಲಿಗೊಂದಲ ಮಾಡಲುರೇವಣ್ಣನವರ ಹೆಸರು ಬಳಸುತ್ತಿದ್ದಾರೆ : ಶಾಸಕ ಎ. ಮಂಜುನಾಥ್‍ರವರುಕಾಂಗ್ರೆಸ್ ನಲ್ಲಿಗೊಂದಲ ಮೂಡುವ ನಿಟ್ಟಿನಲ್ಲಿ ಮಾಜಿ ಸಚಿವಎಚ್.ಎಂ. ರೇವಣ್ಣನವರ ಹೆಸರನ್ನು ಬಳಸುತ್ತಿದ್ದಾರೆ ಅವರಿಗೆರೇವಣ್ಣನವರ ಮೇಲೆ ಕರುಣೆಇದ್ದರೆ ಶಾಸಕರನ್ನಾಗಿ ಮಾಡಿಆಗದಿದ್ದರೆ ಈ ರೀತಿಗೊಂದಲವನ್ನು ಏಕೆ ಮಾಡುತ್ತಿದ್ದಾರೆಕಾಂಗ್ರೆಸ್ ಗೂ ಜೆಡಿಎಸ್ ಗೂ ಏನ್ ಸಂಬಂಧ, ಇಲ್ಲಿಗೊಂದಲ ಮೂಡಿಸುವ ಕೆಲಸವನ್ನುದಯಮಾಡಿ ಶಾಸಕರು ನಿಲ್ಲಿಸಬೇಕು ನಿಮ್ಮ ನಾಟಕಗೊತ್ತಾಗಿದೆಎಂದು ಬಾಲಕೃಷ್ಣತಿರುಗೇಟು ನೀಡಿದರು.
ರೇವಣ್ಣನವರ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ : ಇಪ್ಪತ್ತು ವರ್ಷಗಳಿಂದ ಎಚ್.ಎಂ. ರೇವಣ್ಣನವರ ವಿರುದ್ಧರಾಜಕೀಯವಾಗಿ ವಿರೋಧ ಮಾಡಿದ್ದೇನೆ ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದ ಮೇಲೆ ರೇವಣ್ಣನವರ ಬಗ್ಗೆ ಕಿಂಚಿತ್ತುಕೆಟ್ಟದಾಗಿ ಮಾತನಾಡಿದ್ದರೆತೋರಿಸಲಿ ಅದರೆರೇವಣ್ಣನವರುಒಂದು ಸರಿ ನನ್ನನ್ನು ಶಾಸಕನನ್ನಾಗಿ ಮಾಡಬೇಕುಎಂದು ಹೇಳುತ್ತಾರೆ ಹಿಂದೆ ನನ್ನ ವಿರುದ್ಧವೇ ಕೇವಲವಾಗಿ ಮಾತನಾಡುತ್ತಾರೆಇದುರಾಜಕೀಯವಾಗಿ ನಡೆಯಬಾರದು ಸಾವನದುರ್ಗಅಭಿವೃದ್ಧಿ ವಿಚಾರವಾಗಿಜನರಲ್ಲಿಗೊಂದಲ ಮೂಡಿಸುವುದುರೇವಣ್ಣನವರಿಗೆ ಸರಿ ಬರುವುದಿಲ್ಲ ನನ್ನಕಾಲದಲ್ಲಿಅಭಿವೃದ್ಧಿಆಗಿತ್ತು ಈಗ ಶಾಸಕರನ್ನು ಹೊಗಳಿದರೆ ನನ್ನ ಪರಿಸ್ಥಿತಿ ಏನಾಗುತ್ತದೆಎಂದು ಮಾಜಿ ಶಾಸಕ ಬಾಲಕೃಷ್ಣ ಪ್ರಶ್ನಿಸಿದರು.
ರೇವಣ್ಣನವರ ಮನೆಗೆ ಹೋಗಲು ಸಿದ್ಧ : ಮಾಜಿ ಸಚಿವಎಚ್.ಎಂ. ರೇವಣ್ಣನವರ ಮನೆಗೆ ನಾನು ಮತ್ತು ಶಾಸಕ ಎ.ಮಂಜುನಾಥ್‍ರವರು ಬರಲಿ ರೇವಣ್ಣನವರನ್ನು ಒಪ್ಪಿಸಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿಸೋಣ ದಿನಾಂಕ ನಿಗದಿ ಮಾಡಲಿ ನಾನು ರೇವಣ್ಣನವರ ಮನೆಗೆ ಬರಲು ಸಿದ್ಧನಿದ್ದೇನೆ ಎಂದು ಮಾಜಿ ಶಾಸಕ ಬಾಲಕೃಷ್ಣ ತಿಳಿಸಿದರು.
ಬಾಚೇನಹಟ್ಟಿ ಗ್ರಾ.ಪಂ. ಸದಸ್ಯ ಕಲ್ಲೂರು ರಂಗನಾಥ್, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಮಂಜುನಾಥ್, ಪುರಸಭಾ ಮಾಜಿ ಸದಸ್ಯ ಚಂದ್ರಶೇಖರ್, ಆನಂದ್, ತೇಜ, ಮೂರ್ತಿ, ಕೇಬಲ್ ಮಂಜುನಾಥ್, ಚಿದಾನಂದ್ ಪಟೇಲ್, ಕುದೂರು ಲೋಕೇಶ್, ಬಿಜೆಪಿ ಮುಖಂಡ ಗೋಪಾಲ್ ಇದ್ದರು.

Leave a Reply

Your email address will not be published. Required fields are marked *