220 ಮಂದಿ ಗೃಹರಕ್ಷಕ ಸ್ವಯಂ ಸೇವಕರ ನೇಮಕಾತಿಗೆ ಮೇ 27 ರಂದು ಸಂದರ್ಶನ
ರಾಮನಗರ : ಜಿಲ್ಲಾ ಗೃಹರಕ್ಷಕ ದಳದ 9 ಘಟಕಗಳಲ್ಲಿ ಖಾಲಿ ಇರುವ 220 ಮಂದಿ ಗೃಹರಕ್ಷಕ ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳ ಸಂದರ್ಶನವು ಮೇ 27ರಂದು ಬೆಳಿಗ್ಗೆ 9ಕ್ಕೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನ, ಚನ್ನಪಟ್ಟಣ ಇಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಭಾಗವಹಿಸ ಬೇಕು ಎಂದು ಗೃಹರಕ್ಷಕ ದಳದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.