ಅಂತರ ರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ ಕೋಡಿಹಳ್ಳಿ ಪೊಲೀಸರು
ಕನಕಪುರ : ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಕಳ್ಳರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಕೋಡಿಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎರಡು ರಾಜ್ಯಗಳಲ್ಲಿ ಸುಮಾರು 6 ಲಕ್ಷ ರೂ. ಬೆಲೆಬಾಳುವ ವಿವಿಧ ಕಂಪನಿಗಳ 10 ಬೈಕ್‌ಗಳನ್ನು ಕಳ್ಳತನ ಮಾಡಿದ್ದರು. ಮುನಿನಂಜ ಮತ್ತು ಸಂಜೀವ ಬಂಧಿತ ಆರೋಪಿಗಳು. ಅವರು ಕರ್ನಾಟಕದಲ್ಲಿ 5 ಪ್ರಕರಣ, ತಮಿಳುನಾಡಿನಲ್ಲಿ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ ಎರಡು ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ಕೋಡಿಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಅನಂತ್‌ರಾಮು ಮತ್ತು ಸಿಬ್ಬಂದಿ ಕನಕಪುರ ಸಿಪಿಐ ಟಿ.ಟಿ. ಕೃಷ್ಣ ಅವರ ನೇತೃತ್ವದಲ್ಲಿ ಡಿವೈಎಸ್‌ಪಿ ಕೆ.ಎನ್.ರಮೇಶ್ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಭೇದಿಸಿದ್ದು, ಎಸ್.ಪಿ. ಸಂತೋಷ್‌ಬಾಬು ತನಿಖಾ ತಂಡವನ್ನು ಪ್ರಶಂಸಿದ್ದಾರೆ.