ಮಾಗಡಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ : ಮತ್ತಷ್ಟು ಮಂದಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ
ರಾಮನಗರ : ಮಾಗಡಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಕೆಂಪೇಗೌಡ ಶಾಲೆಯ ಕ್ಲರ್ಕ್ ರಂಗನಾಥ ಜೊತೆಗೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಐವರು ವಿಷಯ ತಜ್ಞರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಅಲ್ಲದೆ ಮಾಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನೂ ಪೊಲೀಸರು ಈಗಾಗಲೇ ವಿಚಾರಣೆ ಮಾಡಿದ್ದಾರೆ.

ಖಾಸಗಿ ಶಾಲೆಯ ಕ್ಲರ್ಕ್ ಬಂಧನ :
ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಆರೋಪದ ಮೇರೆಗೆ ಮಾಗಡಿಯ ಕೆಂಪೇಗೌಡ ಖಾಸಗಿ ಪ್ರೌಢಶಾಲೆಯ ಕ್ಲರ್ಕ್ ರಂಗೇಗೌಡ ಎಂಬುವವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ಆರೋಪಿಯು ಪರೀಕ್ಷೆ ಅವಧಿಗೆ ಮುನ್ನವೇ ವಾಟ್ಸ್‌ಅಪ್ ಮೂಲಕ ಶಿಕ್ಷಕರು ಇರುವ ಗುಂಪೊಂದಕ್ಕೆ ಹಾಕಿದ್ದ. ಬಳಿಕ ಅದನ್ನು ಡಿಲಿಟ್ ಸಹ ಮಾಡಿದ್ದ ಎನ್ನಲಾಗಿದೆ. ಮತ್ತೊಬ್ಬ ಶಿಕ್ಷಕರು ಇದನ್ನು ಗಮನಿಸಿದ್ದು, ನಂತರದಲ್ಲಿ ಇದೇ ವಿಚಾರವಾಗಿ ಶಿಕ್ಷಕ ಹಾಗೂ ಸ್ಥಳೀಯ ಪತ್ರಕರ್ತರೊಬ್ಬರು ಆತನನ್ನು ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ್ದರು ಎನ್ನಲಾಗಿದೆ.

ಪರೀಕ್ಷೆ ಮುಗಿದ ತಿಂಗಳ ಬಳಿಕ ಈ ವಿಷಯ ಪೊಲೀಸರ ಗಮನಕ್ಕೆ ಬಂದಿದ್ದು, ಸೋಮವಾರ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರರಣದ ವಿವರ :
ಖಾಸಗಿ ಶಾಲೆಯೊಂದರಲ್ಲಿ ಎಸ್‍ಎಲ್‍ಸಿ ಪ್ರಶ್ನೆ ಪತ್ರಿಕೆ ಬಹಿರಂಗವಾಗಿರುವ ಬಗ್ಗೆ ಫಲಿತಾಂಶದ ನಂತರ ಮಾಗಡಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವ ದೂರು ನೀಡಿದ್ದಾರೆ.
ರಾಮನಗರ ಜಿಲ್ಲೆಗೆ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿರುವ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಟ್ಟಣದ ಸಂಸ್ಥೆಯೊಂದರ ಶಾಲೆಯಲ್ಲಿ ಪ್ರಶ್ನೆ ಪತ್ರಿಕೆ ಬಹಿಂರಗದ ಕಳಕಂದ ನೆರಳು ಹಾವರಿಸಿದೆ.
ಏ.11ರ ರಂದು ನಡೆಯುತ್ತಿದ್ದ ವಿಜ್ಞಾನ ವಿಷಯದ ಪರೀಕ್ಷೆ ಆರಂಬವಾಗುತ್ತಿದಂತೆ ಪ್ರಶ್ನೆಪತ್ರಿಕೆಗಳನ್ನು ಬೆಳಗ್ಗೆ 10-30ಕ್ಕೆ ಎಚ್.ಎಂ, ಮಾಗಡಿ ಗ್ರೂಫ್ ಎಂಬ ವಾಟ್ಯಾಫ್ ಗ್ರೂಪಿಗೆ ರಂಗೇಗೌಡ ಎಂಬುವ ಖಾಸಗಿ ಶಾಲೆಯ ಸಿಬ್ಬಂದಿ ಗ್ರೂಫ್ ಗಳಿಗೆ ರವಾನಿಸಿದ್ದಾರೆ ತಕ್ಷಣವೇ ವಾಟ್ಸಾಫ್ ಗ್ರೂಫ್ ನಲ್ಲಿ ಬಂದಿರುವ ಪ್ರಶ್ನೆಪತ್ರಿಕೆಯನ್ನು ಅದೇ ಗ್ರೂಫ್ ನಲ್ಲಿದ್ದ ವ್ಯಕ್ತಿಯೊಬ್ಬ ಸ್ಕ್ರೀನ್ ಶ್ಯಾಟ್ ಮಾಡಿಕೊಂಡು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗೆ ವಿಷಯ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ತಕ್ಷಣವೇ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಪ್ರಕರಣ ಬಹಿರಂಗವಾದರೆ ತಾಲೂಕಿಗೆ ಕಳಂಕಬರುವ ಜತೆಗೆ ತಮ್ಮ ವೃತ್ತಿಗೆ ಸಮಸ್ಯೆಯಾಗುತ್ತದೆಂದು ದೂರು ನೀಡಿದ ವ್ಯಕ್ತಿಯನ್ನು ಮನಹೊಲಿಸುವ ಪ್ರಯತ್ನ ಮಾಡಿದ್ದಾರೆಂಬುದು ತಿಳಿದುಬಂದಿದೆ ಈ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಯ ಕೆಲವು ಪದಾಧಿಕಾರಿಗಳು ಸಹ ದೂರು ದಾರನನ್ನ ಮನಹೊಲಿಸು ಪ್ರಯತ್ನ ಮಾಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೂದಿ ಮುಚ್ಚಿದ ಕೆಂಡದಂತಿತ್ತು ಈಗ ಜಿಲ್ಲೆಗೆ ಟಾಪರ್ಸ್‍ಗಳನ್ನು ನೀಡಿದ ಶಾಲೆ ಎಂದು ಪ್ರಶಂಸೆಗೆ ಒಳಪಡುತ್ತಿದಂತೆ ಈಗ ಕಳಕಂದ ಚಾಯೆ ಆವರಿಸಿದೆ.
ಶಿಕ್ಷಣ ಇಲಾಖೆ ಯಾವುದೇ ಕ್ರಮಕೈಗೊಳ್ಳದ ಸಂಬಂಧ ದೂರು ದಾರ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನಲೆಯಲ್ಲಿ ಖಾಸಗಿ ಶಾಲೆಯ ಸಿಬ್ಬಂದಿಯನ್ನು ವಶಕೆಪಡೆದಿದ್ದಾರೆ ಈ ಬಗ್ಗೆ ಯಾವ ಪ್ರಕರಣ ದಾಖಲಾಗಿಲ್ಲ ಈ ಬಗ್ಗೆ ಬಿಇಓ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಪೊನ್ ಕರೆ ಸ್ವೀಕರಿಸದೆ ಇರುವುದು ಸಾಕಷ್ಟು ಅನುಮಾನಗಳಿಗೆ ಹೆಡೆಮಾಡಿಕೊಟ್ಟಿದೆ.

ನಿಯಮ ಬಾಹಿರ :
ಪ್ರಶ್ನೆಪತ್ರಿಕೆಗಳು ಪರೀಕ್ಷಾ ಅವಧಿ ಮುಗಿದ ನಂತರವೆ ಹೊರಗಡೆ ತರಬಹುದು ಆದರೆ ಪರೀಕ್ಷಾ ಆರಂಬವಾಗುತ್ತಲೆ ಪ್ರಶ್ನೆಪತ್ರಿಕೆ ವಾಟ್ಸಾಫ್ ಗ್ರೂಫ್ ಗಳಲ್ಲಿ ಬಹಿರಂಗವಾಗಿರುವುದು ಎಸ್‍ಎಸ್‍ಎಲ್‍ಸಿ ಪರೀಕ್ಷಾ ವ್ಯವಸ್ಥೆ ಮೇಲೆ ಕರಿಚಾಯಿ ಅವರಿಸಿದೆ ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿದರೆ ಸತ್ಯ ಬಹಿರಂಗವಾಗಿ ಇಂಥಹ ಪ್ರಕರಣಗಳು ಮುಂದೆ ಯಾವ ಶಾಲೆಗಳನ್ನು ನಡೆಯದಂತೆ ಶಿಕ್ಷಣ ಇಲಾಖೆ, ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಇಲಾಖೆಯ ಮೇಲಿನ ಗೌರವ ಕಡಿಮೆಯಾಗುತ್ತದೆ ಎಂಬುದು ನಾಗರೀಕರ ಅಭಿಪ್ರಾಯವಾಗಿದೆ.
ಪ್ರಶ್ನೆಪತ್ರಿಕೆಗಳ ಬಹಿರಂಗದಿಂದ ಬೌದ್ದಿಕ ವಿಕಸನ ಕುಂಠಿತವಾಗಿ ನಂತರ ಉನ್ನತ ವಿದ್ಯಾಬ್ಯಾಸಕ್ಕೆ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ, ಖಾಸಗಿ ಶಾಲೆಗಳು ಕೇವಲ ಪಸೆಂಟೇಜು ಹುದ್ದೇಶಕ್ಕಾಗಿ ಇಂಥಹ ಅಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ಶೈಕ್ಷಣಿಕ ವ್ಯವಸ್ಥೆಯ ದುರಂತವಾಗಿದೆ.