ಶ್ರೀ ವೀರಭದ್ರೇಶ್ವರ ದೇವಾಲಯ ಜೀರ್ಣೋದ್ದಾರ, ಸಂಪ್ರೋಕ್ಷಣ ಹಾಗೂ ವಿಮಾನ ಗೋಪುರ ಕಲಶ ಪ್ರತಿಷ್ಟಾಪನಾ ಮಹೋತ್ಸವ

ಬಿಡದಿ : ಪುರಸಭೆ ವ್ಯಾಪ್ತಿಯ ಹೆಗ್ಗಡಗೆರೆ ವಾರ್ಡ್ 23 ರಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ವೀರಭದ್ರೇಶ್ವರ ದೇವಾಲಯ ಜೀರ್ಣೋದ್ದಾರ, ಸಂಪ್ರೋಕ್ಷಣ ಹಾಗೂ ವಿಮಾನ ಗೋಪುರ ಕಲಶ ಪ್ರತಿಷ್ಟಾಪನಾ ಮಹೋತ್ಸವ ಬುಧವಾರ ಮಹಾಮಂಗಳಾರತಿಯೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ತ್ರಿದಿನ ಸಂಕಲ್ಪಿತ ಕಾರ್ಯಕ್ರಮದ ಭಾಗವಾಗಿ ದೇವಾಲಯದಲ್ಲಿ ಧಾರ್ಮಿಕ ಪೂಜಾವಿಧಿ ವಿಧಾನ ಕಾರ್ಯಗಳು ಯಶಸ್ವಿಯಾಗಿ ಜರುಗಿದವು.

ಬುಧವಾರ ಮಹಾಮಂಗಳಾರತಿ ಕಾರ್ಯದಲ್ಲಿ ಶಾಸಕ ಎ.ಮಂಜುನಾಥ್, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಪುರಸಭೆ ಮಾಜಿ ಉಪಾಧ್ಯಕ್ಷ ಲೋಕೇಶ್, ಮಾಜಿ ಸದಸ್ಯರಾದ ಸಿ.ಉಮೇಶ್, ಜಲಜಾ ಹರೀಶ್, ದೇವರಾಜು, ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಚಂದ್ರಶೇಖರ್, ಆರ್ ಎಸ್ಎಸ್‌ಬಿಎನ್ ನಿರ್ದೇಶಕ ಜೀವನ್ ಬಾಬು, ಗ್ರಾಮದ ಮುಖಂಡರಾದ ಸೋಮಶೇಖರ್, ರಮೇಶ್, ವೆಂಕಟಾಚಲಯ್ಯಸೇರಿದಂತೆ ಹೆಗ್ಗಡಗೆರೆ, ಹೆಗ್ಗಡಗೆರೆ ಕಾಲನಿ, ಅಂಗರಹಳ್ಳಿ,ಬೀಮೇಗೌಡನದೊಡ್ಡಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಹೆಗ್ಗಡಗೆರೆ ಗ್ರಾಮಸ್ಥರು, ಕ್ರಷರ್ ಹಾಗೂ ಲಾರಿ ಮಾಲೀಕರ ಸಹಕಾರದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.


ವರದಿ : ಪಾದ್ರಳ್ಳಿ ರಾಜು ಮೊ : 6360 905 062