ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ರಾಮನಗರ : ಇಲ್ಲಿನ ಹೋಲಿಕ್ರೆಸೆಂಟ್ ಆಂಗ್ಲಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆರ್ಟಿಕಲ್ ಮೇಕಿಂಗ್, ಪೋಸ್ಟರ್ ಮೇಕಿಂಗ್, ಫಲಕಗಳು, ಗ್ರೀಟಿಂಗ್ ಕಾರ್ಡ್ ಮೇಕಿಂಗ್, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಮನಗರದ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಸಿ. ಲಿಂಗರಾಜು ರವರು ಮಾಲಿನ್ಯತೆ, ಬಡತನ, ಜನಸಂಖ್ಯೆ ಇವು ದೇಶದ ಅಭಿವೃಧ್ಧಿಗೆ  ಶಾಪ. ಇವುಗಳನ್ನು ನಿಯಂತ್ರಿಸಿದರೆ ನಮ್ಮ ಮುಂದಿನ ದಿನಗಳು ಉತ್ತಮವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶಿವಮೂರ್ತಿ ಮಾತನಾಡಿ ಪರಿಸರ ರಕ್ಷತಿ ರಕ್ಷಿತ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಕಾರ್ಯದರ್ಶಿಗಳಾದ ಅಲ್ಹಾಜ್ ಅಲ್ತಾಫ್ ಅಹಮದ್ ಮಾತಾನಾಡಿ ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಪರಿಸರ ಸಂರಕ್ಷಣೆ ನಮ್ಮ ನಿರಂತರ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಅರಣ್ಯ ರಕ್ಷಕರಾದ ವೀರಭದ್ರಯ್ಯ ವಿಶೇಷ ಆಹ್ವಾನಿತರಾಗಿದ್ದು ಇವರ ಸೇವಾಮನೋಭಾವವನ್ನು ಗುರುತಿಸಿ ಶಾಲಾ ಆಡಳಿತಮಂಡಳಿಯ ವತಿಯಿಂದ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ ನಂತರ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಡಾ. ಅಲ್ಹಾಜ್ ಸಯ್ಯದ ಶಾಜಿಯ, ಮುಖ್ಯೋಪಾಧ್ಯಾಯರಾದ ಲತಾ ಆನಂದ್ ಹಾಗೂ  ಸಮನ್ವಯಾಧಿಕಾರಿಗಳಾದ ಸ್ಟಾನ್ಲೀ ಪಾಲ್  ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಅರಣ್ಯ ರಕ್ಷಕರಾದ ವೀರಭದ್ರಯ್ಯ ಅವರನ್ನು ಸನ್ಮಾನಿಸಲಾಯಿತು

Leave a Reply

Your email address will not be published. Required fields are marked *