ಜೂನ್ 11 ರಂದು ಜಾನಪದ ಲೋಕದಲ್ಲಿ ನಡೆಯುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಗುರುಬಸವಯ್ಯ ನೀಲಗಾರರು

ರಾಮನಗರ : ಧಾರ್ಮಿಕ ವೃತ್ತಿಗಾಯಕ ಪರಂಪರೆಗೆ ಸೇರಿದ ನೀಲಗಾರರು ಮಂಟೇಸ್ವಾಮಿಯಗುಡ್ಡರು. ನಾಡತಂಬೂರಿಯನ್ನು ಮೀಟುತ್ತಾಢಕ್ಕೆ, ಗಗ್ಗರ, ತಾಳಗಳನ್ನು ನುಡಿಸುತ್ತಾ ಹಾಡತೊಡಗಿದರೆ ಎಂತಹ ಅರಸಿಕನೂ ತಲೆದೂಗುತ್ತಾನೆ. ಅನೇಕ ಪವಾಡಗಳನ್ನು ಮೆರೆದು ಒಕ್ಕಲುಗಳನ್ನು ಮಾಡಿದ ಮಹಾಪುರುಷ ಮಂಟೇಸ್ವಾಮಿ ನೀಲಗಾರರ ಆರಾಧ್ಯದೈವ. ಮಂಟೇಸ್ವಾಮಿಯಗುಡ್ಡರೆಂದು ಕರೆಸಿಕೊಳ್ಳುವ ನೀಲಗಾರರು ಮಂಟೇಸ್ವಾಮಿ ಮಹಿಮೆಯನ್ನು ಪ್ರಸಾರ ಮಾಡುತ್ತಾ ಮಂಟೇಸ್ವಾಮಿ ಪೂಜಾರಾಧನೆಗಳಲ್ಲಿ ಸದಾದೈವದ ಸೇವೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಪರಂಪರೆಯಲ್ಲಿ ಬೆಳೆದು ಬಂದಉತ್ಕøಷ್ಟ ನೀಲಗಾರ ಸಂಪ್ರದಾಯದಗಾಯಕಶ್ರೀ ಗುರುಬಸವಯ್ಯ. ತಾತಶ್ರೀ ಪೆದ್ದೋಡಿರಾಚಯ್ಯ, ತಂದೆಶ್ರೀ ಶಿವರಿ ಮಂಚಯ್ಯ ಪ್ರಸಿದ್ಧ ನೀಲಗಾರರು. ಮಂಡ್ಯಜಿಲ್ಲೆ ಮಳವಳ್ಳಿ ಪಟ್ಟಣದಕೀರ್ತಿನಗರದಲ್ಲಿತಾಯಿ ಸಿದ್ಧಮ್ಮನ ಪುತ್ರನಾಗಿ1932ರಲ್ಲಿ ಜನಿಸಿದರು. ವಂಶಪÀರಂಪರೆಯಿಂದ ಬಂದಕಲೆಯನ್ನುತನ್ನ ಹದಿನೈದನೆ ವಯಸ್ಸಿನಿಂದ ಕಲಿತು ಹಾಡುವುದನ್ನು ಆರಂಭಿಸಿದರು.
ಮೈಸೂರು ಆಕಾಶವಾಣಿ, ಮೈಸೂರು ದಸರಾ ಸೇರಿದಂತೆ ಸುತ್ತೇಳು ಊರುಗಳಲ್ಲಿ ನಡೆಯುವಧಾರ್ಮಿಕ ಕಾರ್ಯಕ್ರಮಗಳು, ಮಂಟೇಸ್ವಾಮಿ ಭಕ್ತರ ಪೂಜನೀಯ ಸ್ಥಳಗಳಾದಕಪ್ಪಡಿ, ಕುರುಬನ ಕಟ್ಟೆ, ಬಪ್ಪನಪುರ, ಚಿಕ್ಕಲ್ಲೂರು, ಹೊನ್ನಾಕನಹಳ್ಳಿ ಜಾತ್ರೆಗಳಲ್ಲಿ ಇವರತಂಡ ಪ್ರತಿವರ್ಷ ಹಾಡಿನ ಸೇವೆಯನ್ನು ಮಾಡುತ್ತಿದ್ದಾರೆ. ತಮ್ಮ ಹಾಡಿಗೆದನಿಗೂಡಿಸುವಸಹ ಕಲಾವಿದರಾದಯತಿರಾಜು, ಬಸವರಾಜು, ಜಯರಾಜುತಂಬೂರಿ, ಡಕ್ಕೆ, ಗಗ್ಗರ, ತಾಳ ಹಿಡಿದುಕಥನ ಕಾವ್ಯಗಳಿಗೆ ಮೆರಗು ನೀಡುತ್ತಾರೆ.ಇವರಿಗೆಇಬ್ಬರು ಮಕ್ಕಳಿದ್ದು ಕಲೆ ಕಲಿಯಲಿಲ್ಲ ಎಂಬ ಕೊರಗು.
ಮೈಸೂರು ಗುರುರಾಜು ಇವರ ಪರಂಪರೆಯ ಪ್ರಸಿದ್ಧ ಗಾಯಕರು. ಧರೆಗೆದೊಡ್ಡೋರು, ರಾಚಪ್ಪಾಜಿ ಪವಾಡ, ಚನ್ನಬಸವಣ್ಣನಕಥೆ, ಗಣಪತಿರಾಜನಕಥೆ, ಶಿವನಾರಾಯಣ ಕಥೆ, ಚನ್ನಿಗರಾಮನಕಥೆ, ಮೈದಾಳರಾಮನ ಕಥೆ, ಪಿರಿಯಾಪಟ್ಟಣ ಕಾಳಗ, ನಂಜುಂಡೇಶ್ವರನ ಕಥೆಗಳನ್ನು ನಿರರ್ಗಳವಾಗಿ ಕಥೆಗೊಂದುರಾತ್ರಿಯಂತೆ ಹಾಡುವಅಸಾದಾರಣಕಲಾವಿದ.ಇವರ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನಾರ್ಥವಾಗಿ ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುವ ಲೋಕಸಿರಿ-74ರ ತಿಂಗಳ ಅತಿಥಿಕಾರ್ಯಕ್ರಮದಲ್ಲಿಗೌರವಿಸಲಾಗುತ್ತಿದೆ.

ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು
ಜಾನಪದ ಲೋಕ,ರಾಮನಗರ
ನಾಡೋಜಎಚ್.ಎಲ್ ನಾಗೇಗೌಡರ ನೆನಪಿನ ಕಾರ್ಯಕ್ರಮ
ಲೋಕ ಸಿರಿ – 74
ಪ್ರತಿ ತಿಂಗಳು ಎರಡನೇ ಶನಿವಾರ ನಡೆಯುವ ತಿಂಗಳ ಅತಿಥಿಕಾರ್ಯಕ್ರಮ
ಶ್ರೀ ಗುರುಬಸವಯ್ಯ ನೀಲಗಾರರು
ಗೌರವ – ಮಾತುಕತೆ – ಸಂವಾದ

ಸ್ಥಳ: ಜಾನಪದ ಲೋಕ ದಿನಾಂಕ: 11.06.2022 ಸಮಯ: ಇಳಿಹೊತ್ತು 4 ಗಂಟೆ

ಅಧ್ಯಕ್ಷತೆ: ಶ್ರೀ ಆದಿತ್ಯ ನಂಜರಾಜ್ ಮ್ಯಾನೇಜಿಂಗ್ ಟ್ರಸ್ಟಿ
ಕರ್ನಾಟಕ ಜಾನಪದ ಪರಿಷತ್ತುಗೌರವ ಉಪಸ್ಥಿತಿ: ಶ್ರೀ ಕೃಷ್ಣಯ್ಯ ಟಿ.ಪಿ,ಕನ್ನಡ ಪ್ರಾಧ್ಯಾಪಕರು
ಶಾಂತಿನಿಕೇತನಕಾಲೇಜ್‍ಆಫ್‍ಸೈನ್ಸ್
ಅಂಡ್‍ಮ್ಯಾನೇಜ್‍ಮೆಂಟ್, ರಾಮನಗರ.

Leave a Reply

Your email address will not be published. Required fields are marked *