ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾ- ತಾಲ್ಲೂಕು ಘಟಕಗಳ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ಮಾಜಿ ಜಿಲ್ಲಾಧ್ಯಕ್ಷ ಬಿ.ಟಿ. ಚಿಕ್ಕಪುಟ್ಟೇಗೌಡ ಅವರಿಂದ ಸಲಹೆ
ರಾಮನಗರ : ಎಲ್ಲಾ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಘಟಕಗಳ ಅಧ್ಯಕ್ಷರುಗಳು ಮತ್ತು ಪಧಾಧಿಕಾರಿ ಗೆಳೆಯರಿಗೆ ಶುಭೋದಯ. ಮಿತ್ರರೆ ನನ್ನ ಪುಟ್ಟ ಸಲಹೆ ಮತ್ತು ಕೋರಿಕೆಯೆನೆಂದರೆ ತಾವು ಆಯೋಜಿಸುವ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳನ್ನ ಅಲ್ಲಲ್ಲೇ ಗಮನಿಸುತ್ತಿರುತ್ತೇನೆ. ಕಾರ್ಯಕ್ರಮಗಳ ಉದ್ಘಾಟನೆ, ಅಧ್ಯಕ್ಷತೆ ಮತ್ತು ಅಥಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿನವರೇ ಆಗಿರುತ್ತಾರೆ. ಕಸಾಪದವರ ಕೆಲಸ ಮೂಲೆಗುಂಪಾಗಿರುವ ಕೆಲವು ಸಾಹಿತ್ಯ ಕ್ಷೇತ್ರದ ಪ್ರತಿಭೆಗಳನ್ನ ಗುರುತಿಸುವ ಕಾರ್ಯಕ್ರಗಳಾಗಬೇಕಾಗಿದೆ. ಜೊತೆಗೆ ಇವರುಗಳನ್ನ ಜಿಲ್ಲೆಯ, ತಾಲ್ಲೂಕಿನ ಹಾಗು ಹೋಬಳಿಯ ಜನತೆಗೆ ಪರಿಚಯಿಸುವ ಕೆಲಸವಾಗಬೇಕಾಗಿದೆ. ಅಹ್ವಾನ ಪತ್ರಿಕೆಗಳನ್ನು ನೋಡಿದಾಗ ಉದಯೊನ್ಮುಖ ಸಾಹಿತಿಗಳ ಹೆಸರುಗಳಿರಬೇಕು, ಸಾಧ್ಯವಾದಷ್ಟು ಅನುಭವಸ್ತ ಸಾಹಿತಿಗಳನ್ನ ಆಹ್ವಾನಿಸಿ ಕಿರಿಯರಿಗೆ ಸಲಹೆ ಮತ್ತು ಮಾರ್ಗದರ್ಶನ ಕೊಡಿಸುವ ಕೆಲಸ ಸಾಧ್ಯವಾದಷ್ಟು ಆಗಬೇಕು.ಇದರಿಂದ ನಿಮಗೆ ಹೊಸ ಅನುಭವ ಆಗುವುದರ ಜೊತೆಗೆ ಹೊಸ ಹೊಸ ವಿಚಾರಗಳು ದೊರೆಯುತ್ತವೆ.ನಮ್ಮ ಕಸಾಪದ ಪದಾಧಿಕಾರಿಗಳನ್ನ ಆಹ್ವಾನ ಪತ್ರಿಕೆ ಕೊನೆಯಲ್ಲಿ ಎಲ್ಲಾ ಪತ್ರಿಕೆಗಳಲ್ಲೂ ನೋಡುತ್ತಿರುತ್ತೇವೆ.ನಮ್ಮ ಮನೆಯವರನ್ನ ನಾವೇ ಕರೆದು ಗೌರವಿಸುವ ಅವಶ್ಯಕತೆಯಿಲ್ಲ. ಹಾಗಾಗಿ ದಯವಿಟ್ಟು ಸಾಧ್ಯವಾದಷ್ಟು ಅಕ್ಕಪಕ್ಕದ ಜಿಲ್ಲೆಯ, ತಾಲ್ಲೂಕಿನ ಸಾಹಿತಿಗಳನ್ನ, ವಿಚಾರವಂತರನ್ನು ಆಹ್ವಾನಿಸಿ ಅವರುಗಳಿಂದಲೂ ಹೊಸ ಹೊಸ ವಿಚಾರಗಳನ್ನು ತಿಳಿಸುವುದರ ಜೊತೆಗೆ, ಹೊಸ ಹೊಸಬರ ಮುಖ ಪರಿಚಯ ಮಾಡಿದಂತಾಗುತ್ತದೆ. ಇದರ ಜೊತೆಗೆ ಮಧ್ಯ ಮಧ್ಯ ವಿವಿಧ ಇಲಾಖೆಗಳ ಅಧಿಕಾರಿಗಳನ್ನ ಆಹ್ವಾನಿಸಿ ಅವರ ಅನುಭವಗಳನ್ನು ಕೂಡ ಜನತೆಗೆ ಪರಿಚಯಿಸುವ ಕಸಾಪದ ಕೆಲಸವಾಗಬೇಕು. ನಿಮಗೆ ಸುದೀರ್ಘವಾದ ಐದು ವರ್ಷಗಳ ಕಾಲಾವಕಾಶವಿರುವುದರಿಂದ ಶಾಂತಚಿಂತರಾಗಿ ಕಾರ್ಯಕ್ರಮ ಆಯೋಜಿಸಿ. ನನಗೂ ಗೊತ್ತಿದೆ ಹೇಳುವುದು ಸುಲಭ ಕಾರ್ಯಕ್ರಮ ಗಳನ್ನು ಆಯೋಜಿಸುವುದು ಎಷ್ಟು ಕಷ್ಟವೆಂಬುದು,ನೀವೆಲ್ಲ ಒಟ್ಟಾಗಿ ಶ್ರಮ ತೆಗೆದುಕೊಂಡು ಪ್ರಯೋಜಕರ, ಉದಾರಿಗಳ ಮತ್ತು ದಾನಿಗಳನ್ನು ಗುರುತಿಸಿ ಅವರ ಸಹಾಯ ಸಹಕಾರ ಪಡೆದುಕೊಂಡು ಕಾರ್ಯಕ್ರಮ ಆಯೋಜಿಸಿ ಎಂಬುದು ನನ್ನ ಸಲಹೆಯಷ್ಟೇ. ದಯವಿಟ್ಟು ಅನ್ಯತಾ ಭಾವಿಸುವುದು ಬೇಡ. ಇದರ ಜೊತೆಗೆ ನೀವು ಮಾಸಿಕ, ದ್ವೈ ಮಾಸಿಕ ಅಥವಾ ತ್ರೈಮಾಸಿಕ ಸಭೆಗಳನ್ನ ಮಾಡಿದಾಗ ಎಲ್ಲಾ ಘಟಕಗಳ ನಿಕಟಪೂರ್ವ, ಮಾಜಿ ಪದಾಧಿಕಾರಿಗಳನ್ನ ಅವರು ಬರಲಿ ಬಿಡಲಿ ಪತ್ರ ಬರೆದೋ, ದೂರವಾಣಿ ಕರೆ ಮಾಡಿಯೋ ರಿಜಿಸ್ಟರ್ ನಲ್ಲಿ ದಾಖಲಿಸಿಕೊಳ್ಳಿ. ಇದು ಕಚೇರಿಗೊಂದು ದಾಖಲೆಯಾಗುತ್ತದೆ. ದಯವಿಟ್ಟು ಮತ್ತೊಂದು ನನ್ನ ವಿಶೇಷ ಕೋರಿಕೆಯೇನೆಂದರೆ, ನಿಮ್ಮ ಅವಧಿಯಲ್ಲಿ ಒಂದೆರಡು ಬಾರಿಯಾದರು ಜಿಲ್ಲಾ, ತಾಲ್ಲೂಕು, ಹೋಬಳಿ ಪದಾಧಿಕಾರಿಗಳಿಗೆ ಕೇಂದ್ರ ಕಸಾಪದ ಪದಾಧಿಕಾರಿಗಳನ್ನ ಆಹ್ವಾನಿಸಿ ತರಬೇತಿ ಕೊಡಿಸಿ ಇದೊಂದು ವಿಶೇಷ ದಾಖಲೆಯಾಗುತ್ತದೆ.ಕಾರ್ಯಕ್ರಗಳನ್ನ ಆಯೋಜಿಸಿ ಆಗಮಿಸುವ ಅಥಿತಿಗಳಿಗೆ ಆದಷ್ಟು ಮೊಮೆಂಟೋ ಜೊತೆಗೆ ಪುಸ್ತಕಗಳನ್ನ ಕೊಡುವ ಪರಿಪಾಠ ಮಾಡಿಕೊಳ್ಳಿ. ಮೊಮೆಂಟೋ ಇಲ್ಲದಿದ್ದರೂ ಪರವಾಗಿಲ್ಲ, ಪುಸ್ತಕದ ಜೊತೆಗೆ ಒಂದು ಪುಟ್ಟ ಗುಲಾಬಿ ಹೂ ಕೊಟ್ಟರಾಯಿತು. ನನ್ನ ಸಲಹೆ ಅತಿಯಾದರೆ ಕ್ಷಮೆ ಇರಲಿ ಗೆಳೆಯರೇ. ನನಗೆ ಅನಿಸದ್ದನ್ನ ತಮಗೆಲ್ಲ ತಿಳಿಸಿದ್ದೇನೆ. ನಮಸ್ತೆ…

- ಬಿ. ಟಿ. ಚಿಕ್ಕಪುಟ್ಟೇಗೌಡ, ಮಾಜಿ ಅಧ್ಯಕ್ಷರು, ಕನಕಪುರ ತಾಲ್ಲೂಕು ಮತ್ತು ರಾಮನಗರ ಜಿಲ್ಲೆ ಹಾಗು ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು, ಮೊ: 9972111440
“ಹಾಯ್ ರಾಮನಗರ” ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com