ನಾವು ಅಪ್ಪಿಕೊಳ್ಳಬೇಕಾದ ಭಾರತೀಯ ವಿಚಾರದಿಂದ ಬಾಹ್ಯ ಸಿದ್ಧಾಂತಗಳ ಕಾರಣಕ್ಕಾಗಿ ವಿಚಲಿತರಾಗಕೂಡದು : ಎಂ. ಪವಿತ್ರ
ರಾಮನಗರ : ವಿಶ್ವದಲ್ಲಿ ನಮ್ಮ ಗುರುತಿರುವುದು ಭಾರತೀಯರೆಂದು. ನಮ್ಮ ದುಡಿಮೆ ಕೇವಲ ನಮಗಾಗಿ ಇರದೆ ಇಡಿಯ ಕುಟುಂಬದ ದೃಷ್ಟಿಯಿಂದ ಇರುತ್ತದೆ. ಹಾಗೇ ನಮ್ಮ ಬದುಕಿನ ದೃಷ್ಟಿ ದೇಶವನ್ನು ಬಿಟ್ಟು ಇರಲು ಅಸಾಧ್ಯ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಸಮಿತಿ ಸದಸ್ಯೆ ಎಂ. ಪವಿತ್ರ ತಿಳಿಸಿದರು.
ಇಲ್ಲಿನ ಐಜೂರಿನ ಕಲ್ಯಾಣ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಮನಗರ ಜಿಲ್ಲಾ ಸಮಿತಿ ಆಯೋಜಿಸಿದ್ದ ಅಭ್ಯಾಸ ವರ್ಗದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ನಾವು ಅಪ್ಪಿಕೊಳ್ಳಬೇಕಾದ ಭಾರತೀಯ ವಿಚಾರದಿಂದ ಬಾಹ್ಯಸಿದ್ಧಾಂತಗಳ ಕಾರಣಕ್ಕಾಗಿ ವಿಚಲಿತರಾಗಕೂಡದು. ನಮ್ಮನ್ನು ಹೀಗೆ ನಮ್ಮನ್ನು ವೈಚಾರಿಕ ನೆಲೆಯಲ್ಲಿ ಗಟ್ಟಿಯಾಗಿ ಕಾಪಿಟ್ಟುಕೊಳ್ಳುವಲ್ಲಿ ಆದಿಕವಿ ಪಂಪನಿಂದ ಹಿಡಿದು ಬಂಕಿಮರತನಕ ಎಲ್ಲ ಸಾಹಿತಿಗಳ ಸಾಹಿತ್ಯಗಳು ನಮ್ಮ ನೆರವಿಗೆ ಬಂದಿವೆ. ನಾವೂ ಇದೇ ನಿಟ್ಟಿನಲ್ಲಿ ತೊಡಗುವಂತಾಗಲು ಅಭಾಸಾಪ ಸಾಹಿತ್ಯದ ಸಂಘಟನೆಯಾಗಿ ದೇಶಾದ್ಯಂತ ಕಾರ್ಯಮಾಡುತ್ತಿದೆ ಎಂದು ತಿಳಿಸಿದರು.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com