ಕನ್ನಡ ಸಾಹಿತ್ಯ ಪರಿಷತ್ : ಕನ್ನಡ ಸೇವೆಗೆ ಅರ್ಜಿ ಆಹ್ವಾನ
ಬೆಂಗಳೂರು: ಕನ್ನಡ ನಾಡು–ನುಡಿಗೆ ಸೇವೆ ಸಲ್ಲಿಸಲು ಆಸಕ್ತಿ ಉಳ್ಳವರಿಂದ ಕನ್ನಡ ಸಾಹಿತ್ಯ ಪರಿಷತ್ತು ಅರ್ಜಿ ಆಹ್ವಾನಿಸಿದೆ.
‘ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದದ ರಕ್ಷಣೆ ಹಾಗೂ ಪ್ರಸಾರ ಪರಿಷತ್ತಿನ ಧ್ಯೇಯೋದ್ದೇಶವಾಗಿದೆ. ಅದೇ ರೀತಿ, ಜನಸಾಮಾನ್ಯರ ಪರಿಷತ್ತಾಗಿ ರೂಪಿಸಲಾಗುತ್ತಿದೆ. ಕಾರ್ಯಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿ ಸಲು ಅನುಕೂಲವಾಗುವಂತೆ ವಿವಿಧ ಕೆಲಸಗಳನ್ನು ನಿರ್ವಹಿಸಲು ಆಸಕ್ತ ಕನ್ನಡಿಗರಿಗೆ ಅವಕಾಶ ನೀಡಲಾಗುತ್ತದೆ’ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
‘ಸರ್ಕಾರದ ವಿವಿಧ ಇಲಾಖೆಗಳು, ಕನ್ನಡಪರ ಸಂಘ-ಸಂಸ್ಥೆಗಳು, ಸಾರ್ವ ಜನಿಕ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ, ನಿವೃತ್ತರಾದವರಿಗೆ ಹಾಗೂ ಕನ್ನಡ ಸೇವಾಸಕ್ತರಿಗೆ ಪರಿಷತ್ತಿನಲ್ಲಿ ಕೆಲಸ ನಿರ್ವಹಿಸಲು ಅವಕಾಶವಿದೆ. ಸಾಮಾಜಿಕ ಜಾಲತಾಣ ನಿರ್ವಹಣೆಯ ಜ್ಞಾನವುಳ್ಳ, ಗಣಕಯಂತ್ರ, ಲೆಕ್ಕಪತ್ರಗಳಲ್ಲಿ ಅನುಭವ ಹೊಂದಿದ, ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ತಪ್ಪಿಲ್ಲದೆ ಓದಲು ಹಾಗೂ ಬರೆಯಲು ಬರುವವರಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.
ಆಸಕ್ತರು ವಿವರಗಳೊಂದಿಗೆ ತಮ್ಮ ಸ್ವ-ಪರಿಚಯ ಹೊಂದಿರುವ ಅರ್ಜಿಯನ್ನು ಜುಲೈ 10ರೊಳಗೆ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು –18 ವಿಳಾಸಕ್ಕೆ ಕಳು ಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.