ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಕ್ತದಾನ ಮಾಡಿದ ಯೋಗೇಶ್ ಚಕ್ಕೆರೆ

ಚನ್ನಪಟ್ಟಣ : ಜೂನ್‌ 14 ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸಾಹಿತಿ ,ಚನ್ನಪಟ್ಟಣ ಬಿ.ಇ.ಒ ಕಚೇರಿಯ ಶಿಕ್ಷಣ ಸಂಯೋಜಕ ,ಅನಿಕೇತನ ಕನ್ನಡ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಯೋಗೇಶ್ ಚಕ್ಕೆರೆ ರವರು ಪಟ್ಟಣದ ಪಾರ್ವತಿ ಟಾಕೀಸ್ ರಸ್ತೆಯ ಚಂದ್ರು ಡಯಾಗ್ನಸ್ಟಿಕ್ ಸೆಂಟರ್ ನ ಜೀವಾಮೃತ ಬ್ಲಡ್ ಬ್ಯಾಂಕ್ ಗೆ ರಕ್ತದಾನ ಮಾಡಿದರು.

ರಕ್ತದಾನ ಮಾಡಿ ಮಾತನಾಡಿದ ಯೋಗೇಶ್ ಚಕ್ಕೆರೆ ಆಸ್ಟ್ರಿಯಾ ವೈದ್ಯ ಕಾರ್ಲ್ ಲ್ಯಾಂಡ್‌ಸ್ಟೇನರ್‌ ಅವರು ಮಾನವನ ರಕ್ತದ ಮೊದಲ ಮೂರು ಗ್ರೂಪ್‌ಗಳನ್ನು ಸಂಶೋಧಿಸಿದ ದಿನವಾದ ಜೂನ್‌ 14 ಅನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ ,ವಿಶ್ವ ಆರೋಗ್ಯ ಸಂಸ್ಥೆಯು ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸುತ್ತಾ ಬರುತ್ತಿದೆ. ರಕ್ತ ಎಂದರೆ ಜೀವದ್ರವ್ಯ.ರಕ್ತದಾನವೆಂದರೆ ಅದು ಜೀವದಾನ.
ಇಂದು ಜಗತ್ತಿನಾದ್ಯಂತ ಪ್ರತಿ ಕ್ಷಣ ಲೆಕ್ಕವಿಲ್ಲದಷ್ಟು ಮಂದಿ ರಕ್ತದ ತೀರಾ ಅಗತ್ಯದಲ್ಲಿದ್ದಾರೆ.ಭಾರತದಲ್ಲಿ ಪ್ರತಿ ವರ್ಷ 5 ಕೋಟಿ ಯೂನಿಟ್‌ ರಕ್ತ ಬೇಕಾಗುತ್ತದೆ. ಪ್ರತಿ 2 ಸೆಕೆಂಡ್‌ಗೆ ಯಾರಿಗಾದರೂ ರಕ್ತದ ಅಗತ್ಯ ಬಿದ್ದೇ ಬೀಳುತ್ತದೆ, ಹಾಗಾಗಿ ಸಾವಿರಾರು ಮಂದಿ ರಕ್ತವನ್ನು ಹುಡುಕಿಕೊಂಡು ಆತಂಕದಿಂದ ಅಲೆಯುತ್ತಿರುತ್ತಾರೆ. ಇವರ ಅಗತ್ಯಗಳನ್ನು ಪೂರೈಸಲು ಮತ್ತೊಂದು ಜೀವವನ್ನು ಉಳಿಸಲು ಸಮಾಜದಲ್ಲಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು . ಈ ನಿಟ್ಟಿನಲ್ಲಿ ಚನ್ನಪಟ್ಟಣದಲ್ಲಿ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ನ ಮಾಲೀಕರಾದ ವಿ.ಸಿ.ಚಂದ್ರೇಗೌಡ ರವರು ಸ್ಥಾಪಿಸಿರುವ ಜೀವಾಮೃತ ಬ್ಲಡ್ ಬ್ಯಾಂಕ್ ಯುವಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ರಕ್ತದಾನದ ಮಹತ್ವವನ್ನು ಮೂಡಿಸುತ್ತಿದೆ. ರಕ್ತದ ಕೊರತೆಯಿಂದ ಬಳಲುತ್ತಿರುವ ಹಲವಾರು ಅಸಹಾಯಕ ಜೀವಗಳಗೆ ಉಳಿವಿಗೆ ಕಂಕಣ ಬದ್ದವಾಗಿ ಕೆಲಸ ಮಾಡುತ್ತಿದ್ದು , ಜೀವಾಮೃತ ಬ್ಲಡ್ ಬ್ಯಾಂಕ್ ನ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

Leave a Reply

Your email address will not be published. Required fields are marked *