ಬಿ.ಗುಣರಂಜನ್‍ಶೆಟ್ಟಿ ಅವರ ಹತ್ಯೆಗೆ ಸಂಚು ರೂಪಿಸಿರುವ ಭೂಗತ ಪಾತಕಿಗಳನ್ನು ಕೂಡಲೆ ಬಂಧಿಸಿ : ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ಕುಮಾರಸ್ವಾಮಿ ಒತ್ತಾಯ
ರಾಮನಗರ: ಪರಿಸರ ಸಂರಕ್ಷಣೆಯ ಅಭಿಯಾನದಲ್ಲಿ ಸಕ್ರಿಯವಾಗಿ ಗುರ್ತಿಸಿಕೊಂಡಿರುವ ಜಯ ಕರ್ನಾಟಕ ಜನಪರ ವೇದಿಕೆ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್‍ಶೆಟ್ಟಿ ಅವರ ಹತ್ಯೆಗೆ ಸಂಚು ರೂಪಿಸಿರುವ ಭೂಗತ ಪಾತಕಿಗಳನ್ನು ಸರ್ಕಾರ ಕೂಡಲೆ ಬಂಧಿಸಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಂಚಾಲಕ ಕುಮಾರಸ್ವಾಮಿ ನೇತೃತ್ವದಲ್ಲಿ ನೂರಾರು ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಜಿಲ್ಲಾ ಸಂಕೀರ್ಣದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಕುಮಾರಸ್ವಾಮಿ ಮಾತನಾಡಿ ಬಿ.ಗುಣರಂಜನ್‍ಶೆಟ್ಟಿ ಅವರ ನೇತೃತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಸಾವಿರಾರು ಸ್ವಾಭಿಮಾನಿ ಕಾರ್ಯಕರ್ತರ ಜೊತೆಯಲ್ಲಿ ಪರಿಸರ ಸಂರಕ್ಷಣೆಯ ಜೊತೆಯಲ್ಲಿ ಸಂವಿಧಾನ ಮತ್ತು ಕಾನೂನು ಬದ್ದ ಕರ್ನಾಟಕದ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.
ಭೂಮಿಯ ಮೇಲಿನ ನೈಸರ್ಗಿಕ ಸಂಪತ್ತುಗಳಾದ ಜೀವಜಲ, ಪರಿಸರ ಸಂರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ದೃಷ್ಟಿಯಿಂದ ಮನೆಗೊಂದು ಮರ ಊರಿಗೊಂದು ಕೆರೆ, ಜಯ ಕರ್ನಾಟಕ ಜನಪರ ವೇದಿಕೆಯ ನಡೆ ನಿಸರ್ಗದ ಕಡೆ ಎಂಬ ಅಭಿಯಾನದಡಿಯಲ್ಲಿ ಕೈಜೋಡಿಸುತ್ತಿರುವ ವ್ಯಕ್ತಿಯ ಹತ್ಯೆಗೆ ಭೂಗತ ಪ್ರಪಂಚದ ತಂಡವೊಂದು ಸಂಚು ರೂಪಿಸಿದೆ ಎಂಬ ಸುದ್ದಿ ಸ್ವಾಭಿಮಾನಿ ಕಾರ್ಯಕರ್ತರಾದ ನಮಗೆ ದಿಗ್ಬ್ರಮೆ ಮತ್ತು ಆತಂಕ ತಂದಿದೆ. ಆಗಾಗಿ ಕೂಡಲೇ ಹತ್ಯೆಗೆ ಸಂಚು ರೂಪಿಸಿರುವವರನ್ನು ಕೂಡಲೇ ಬಂಧಿಸಬೇಕು ಮತ್ತು ಬಿ.ಗುಣರಂಜನ್‍ಶೆಟ್ಟಿ ಅವರಿಗೆ ಸರ್ಕಾರ ಸೂಕ್ತ ಭದ್ರತೆಯನ್ನು ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಇಲಾಕಾ ಮುಖ್ಯ ಕಾರ್ಯದರ್ಶಿ ಅವರಿಗೆ ಒತ್ತಾಯಿಸುವ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳ ಮುಖೇನ ನೀಡಿರುವುದಾಗಿ ಹೇಳಿದರು.
ಮನವಿ ಸಲ್ಲಿಕೆ ವೇಳೆ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ ಪಿಚ್ಚನಗೆರೆ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ಗಿರೀಶ್, ಕನಕಪುರ ತಾಲೂಕು ಉಪಾಧ್ಯಕ್ಷ ತಿಮ್ಮರಾಜು, ಜಿಲ್ಲಾ ಮುಖಂಡರಾದ ನವೀನ್‍ನಾಯ್ಕ್, ಗಿರೀಶ್‍ಗೌಡ, ಎಂ.ಸತೀಶ್, ದೀಪು, ಸಚಿನ್, ಸತೀಶ್, ಉಲ್ಲಾಸ್ ಮತ್ತಿತರರು ಭಾಗವಹಿಸಿದ್ದರು.

ವರದಿ : ಪಾದ್ರಳಿ ರಾಜು, ಮೊ: 6360905062