ಜುಲೈ 1 ರಿಂದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಹಾಗೂ ಪೌರಕಾರ್ಮಿಕರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟ ಧರಣಿ : ಚಲಪತಿ

ರಾಮನಗರ : ಜಿಲ್ಲೆಯ  ನಗರಸಭೆ, ಪುರಸಭೆ ಪರಿಮಿತಿಯಲ್ಲಿ ಕುಡಿಯುವ ನೀರು ಮತ್ತು  ಸ್ವಚ್ಚತಾ ಕಾರ್ಯವನ್ನು ಸ್ಥಗಿತಗೊಳಿಸಿ ಜುಲೈ1ರಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ಹಾಗೂ ಪೌರಕಾರ್ಮಿಕರು ಅನಿರ್ದಿಷ್ಟ ಕಾಲ ಧರಣಿ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ನೇರ ಪಾವತಿ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಛಲಪತಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದ 314 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಬಿಎಂಪಿ ಸೇರಿದಂತೆ 30 ಸಾವಿರ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಕಸ ಸಾಗಿಸುವ ವಾಹನ ಚಾಲಕರು.ವಾಟರ್ ಮೆನ್ ಸೇರಿದಂತೆ ಹತ್ತು ಸಾವಿರ ಮಂದಿ ಹೊರಗುತ್ತಿಗೆ ನೌಕರರು ಸ್ವಚ್ಚತೆ ಹಾಗೂ ಕುಡಿಯುವ ನೀರು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿಯಿರುವ ಪೌರಕಾರ್ಮಿಕರ ಹುದ್ದೆಗಳನ್ನು ತುಂಬುವಂತೆ ಹಾಗೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಪದ್ದತಿ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸುವಂತೆ ಕಳೆದ ಮೇ.19ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಜುಲೈ 1ರಿಂದ ಅನಿರ್ದಿಷ್ಟ ಮುಷ್ಕರ ನಡೆಸುವ ಗಡುವು ನೀಡಿ ಮುಖ್ಯಮಂತ್ರಿಯವರಿಗೆ

ನಿಗದಿತ ಅವಧಿಯೊಳಗೆ ಬೇಡಿಕೆ ಈಡೇರಿಕೆಗೆ ಕ್ರಮವಹಿಸುವಂತೆ ಮನವಿ ಸಲ್ಲಿಸಲಾಗಿತ್ತು. ಬೇಡಿಕೆ ಈಡೇರಿಸುವಂತೆ ಸಿಎಂ ಭರವಸೆ ನೀಡಿದ್ದರು, ಆದರೆ  ಬೇಡಿಕೆಗಳು ಬೇಡಿಕೆಯಾಗಿಯೆ ಉಳಿದಿದ್ದು, ಇದುವರೆಗೂ ಕಾರ್ಯಗತಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜುಲೈ1ರಿಂದ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು.

 ಬಿಬಿಎಂಪಿ ಸೇರಿದಂತೆ ರಾಜ್ಯಾದ್ಯಂತ 30 ಸಾವಿರ ಪೌರಕಾರ್ಮಿಕರು ಹಾಗೂ ಹತ್ತು ಸಾವಿರ ಹೊರಗುತ್ತಿಗೆ ನೌಕರರು ಸ್ವಚ್ಚತೆ ಹಾಗೂ‌ ಕುಡಿಯುವ ನೀರು ಸ್ಥಗಿತಗೊಳಿಸಿ ರಾಜ್ಯಾಧ್ಯಂತ ಅನಿರ್ದಿಷ್ಟ ಧರಣಿ ಆರಂಭಿಸುತ್ತಿದ್ದೆವೆ ಎಂದರು.

ಈ ಹೋರಾಟಕ್ಕೆ ಸ್ಥಳೀಯ ಶಾಸಕರುಗಳು ಸಂಸದರು ನಗರಸಭಾ ಸದಸ್ಯರು  ಅಗತ್ಯ ಬೆಂಬಲ ನೀಡುವಂತೆ ಹಾಗೂ ಧರಣಿಯಲ್ಲಿ ಭಾಗವಹಿಸುವಂತೆ ಕೋರುತ್ತೇನೆ. ಆಗೆಯೆ  ಕುಡಿಯುವ ನೀರು ಹಾಗೂ ಸ್ವಚ್ಚತೆ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ. ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದು ಇದರಿಂದ ನಾಗರೀಕರಿಗೆ ಆಗುವ ಅನಾನೂಕೂಲಕ್ಕೆಇದರಿಂದ ನಾಗರೀಕರಿಗೆ ಆಗುವ ಅನಾನೂಕೂಲಕ್ಕೆ ವಿಷಾದಿಸುತ್ತೆವೆ. ಜೊತೆಗೆ ನಾಗರೀಕರಿಗೆ ಆಗುವ ಅನಾನುಕೂಲಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಪೌರ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಜು, ಜಿಲ್ಲಾ ಕಾರ್ಯದರ್ಶಿ ಎಂ.ಗಣೇಶ್, ಖಜಾಂಚಿ, ಚಿಕ್ಕನರಸಯ್ಯ ಬಿ.ಎನ್, ನಿರ್ದೇಶಕ ಶ್ರೀನಿವಾಸ್, ರಾಮನಗರ ಹೊರಗುತ್ತಿಗೆ ವಾಹನ ಚಾಲಕರ ಸಂಘದ ಅದ್ಯಕ್ಷ ಪುಟ್ಟಸ್ವಾಮಿ, ಕನಕಪುರ ವಾಟರ್ ಮ್ಯಾನ್ ವೆಂಕಟರಮಣಪ್ಪ, ಪದಾಧಿಕಾರಿಗಳಾದ ರಾಜಶೇಖರ್, ಮಹೇಂದ್ರ, ಮುಭಾರಕ್, ಶ್ರೀನಿವಾಸ್ ಆರ್.ಎಲ್, ವೆಂಕಟೇಶ್ ಮತ್ತಿತರರು ಇದ್ದರು.

ಪಾದ್ರಳ್ಳಿ ರಾಜು

ವರದಿ : ಪಾದ್ರಳ್ಳಿ ರಾಜು, ಮೊ : 6360 905 062

Leave a Reply

Your email address will not be published. Required fields are marked *