ರಾಯಲ್ ಯೋಗ ಸ್ನೇಹಿತರಿಂದ ಯೋಗ ದಿನ ಆಚರಣೆ

ರಾಮನಗರ : ನಗರದ ವಿನಾಯಕ ನಗರದಲ್ಲಿ ರಾಯಲ್ ಯೋಗ ಸ್ನೇಹಿತರು ಕೇಕ್ ಕತ್ತರಿಸಿ ಮಂಗಳವಾರ ಮುಂಜಾನೆ ವಿಶ್ವ ಯೋಗ ದಿನವನ್ನು ಆಚರಣೆ ಮಾಡಿದರು. ನಮ್ಮ‌ ಹೆಮ್ಮೆಯ ಭಾರತ ದೇಶ ಯೋಗದ ವಿಶ್ವ ಗುರುವಾಗಿ ಹೊರಹೊಮ್ಮಿರುವುದು ನಮ್ಮೆಲ್ಲರ ಭಾಗ್ಯ. ಪ್ರತಿಯೊಬ್ಬ ಮನುಷ್ಯರಿಗೆ ಉತ್ತಮ ಆರೋಗ್ಯ ಪಡೆಯಲು ಉತ್ತಮ ಆಹಾರ ಹೇಗೆ ಮುಖ್ಯವೋ ಆಗೆ ಯೋಗವು ಸಹ ಬಹಳ ಮುಖ್ಯವಾಗಿದೆ. ಆಗಾಗಿ ಕಳೆದ 8 ವರ್ಷಗಳಿಂದ ನಾವು ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದು, ಇದರಿಂದ ಉತ್ತಮ ಆರೋಗ್ಯ ಪಡೆದಿದ್ದೇವೆ ಎಂದು ರಾಯಲ್ ಯೋಗಾ ಒಂದು ಕುಟುಂಭವಾಗಿದ್ದೇವೆ ಎಂದು‌ ವೀರಪ್ಪಾಜಿ, ನೀಲಮ್ಮ, ಉಷಾ, ಗೌರಮ್ಮ, ನಾಗರಾಜು, ಕಿಟ್ಟಿ, ಕಮಲ, ಮಣಿ ಸೇರಿದಂತೆ ಹಲವು ಯೋಗಭ್ಯಾಸ ನಿರತರು ಸಂತಸ ಹಂಚಿಕೊಂಡರು.

Leave a Reply

Your email address will not be published. Required fields are marked *