ಕೆಂಪೇಗೌಡರು ಒಕ್ಕಲಿಗರಲ್ಲ, ತಿಗಳ ಸಮುದಾಯದವರು : ಮಲ್ಲಿಕಾರ್ಜುನ್

ಕನಕಪುರ : ತಮ್ಮ ಆಡಳಿತಾವದಿಯಲ್ಲಿ ತಿಗಳ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟಿರುವ ನಾಡಪ್ರಭು ಕೆಂಪೇಗೌಡರು ತಿಗಳ ಸಮುದಾಯಕ್ಕೆ ಸೇರಿದವರು ಎಂದು ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೊಸ ವ್ಯಾಖ್ಯಾನ ಮಾಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ತಿಗಳ ಸಮುದಾಯದವರಾ ಅಥವಾ ಒಕ್ಕಲಿಗ ಸಮುದಾಯದವರಾ ಎಂಬ ಚರ್ಚೆ ಬಹಳ ದಿನಗಳಿಂದಲೂ ನಡೆಯುತ್ತಿದೆ ಅವರು ತಿಗಳ ಸಮುದಾಯಕ್ಕೆ ಸೇರಿದ್ದಾರೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ  ದ್ರೌಪದಮ್ಮ ಧರ್ಮರಾಯರ  ದೇವಸ್ಥಾನ ಕಟ್ಟುವುದರ ಮೂಲಕ ತಿಗಳ ಸಮುದಾಯದ ಪರಂಪರಾಗತವಾಗಿ ಬಂದಿರುವ ಬೆಂಗಳೂರು ಕರಗಕ್ಕೆ  ಹೊಸ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಪ್ರತಿಪಾಧಿಸಿದರು.

ತೋಟಗಾರಿಕೆ ಮಾಡಿಕೊಂಡು ವೈವಿದ್ಯಮಯವಾದ ತರಕಾರಿ ಬೆಳೆಯುತ್ತಿದ್ದ  ತಿಗಳ ಸಮುದಾಯದವರಿಗೆ ತರಕಾರಿ ಬೆಳವಣಿಗೆಗೆ ಪೂರಕವಾದ ವಾತಾವರಣ ಮತ್ತು  ಮಾರುಕಟ್ಟೆ ನಿರ್ಮಾಣ ಮಾಡಿ ಬೆಂಗಳೂರಿನ ಸಿದ್ದಾಪುರ ಲಾಲ್ ಬಾಗ್ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಭಾವಶಾಲಿಯಾಗಿ ತಿಗಳ ಸಮುದಾಯದ ಜನರನ್ನು ನೆಲೆಗೊಳಿಸಿದ್ದಾರೆ  ಅಲ್ಲದೆ ತಿಗಳ ಸಮುದಾಯದ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದಲೇ ಬೆಂಗಳೂರಿನಲ್ಲಿ ಚಿಕ್ಕಪೇಟೆ ಬಳೆಪೇಟೆ ಅಕ್ಕಿಪೇಟೆ ತರಗಪೇಟೆಯಂತಹ ಹಲವಾರು ಪೇಟೆಗಳನ್ನು ನಿರ್ಮಾಣ ಮಾಡಿದ್ದಾರೆ  ಕೆಂಪೇಗೌಡರು ಒಕ್ಕಲಿಗ ಸಮುದಾಯದವರೆ ಆಗಿದ್ದರೆ ಒಕ್ಕಲಿಗ ಸಮುದಾಯದ ಅಭಿವೃದ್ದಿಗೆ ಹೆಚ್ಚು ಒತ್ತನ್ನು ಕೋಡಬೇಕಿತ್ತು ಆದರೆ   ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ಪಂಗಡದ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟು ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ  ಈ ಎಲ್ಲಾ ವಿಚಾರಗಳಿದ ಕೆಂಪೇಗೌಡರು ತಿಗಳ ಸಮುದಾಯದವರ ಅಥವಾ ಒಕ್ಕಲಿಗರ ಸಮುದಾಯದವರ ಎಂಬ ಬಹಳಷ್ಟು ವಿವಾದಗಳು ಚರ್ಚೆಗಳು ನಡೆಯುತ್ತಿವೆ ಮೈಸೂರು ಬೆಂಗಳೂರು ಯೂನಿವರ್ಸಿಟಿಗಳಲ್ಲಿ ಕೆಂಪೇಗೌಡರು ಮೂಲ ಯಾವ ಸಮುದಾಯಕ್ಕೆ ಸೇರಿದವರು ಎಂಬ ಅಧ್ಯಯನಗಳು ನಡೆಯುತ್ತಿವೆ ಇದೇಲ್ಲದರ ಹೋರತಾಗಿ ಕೆಂಪೇಗೌಡರು ಯಾವುದೇ ಸಮುದಾಯದವಕ್ಕೆ ಸೇರಿದವರಾಗಿದ್ದರೂ  ಸಹ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಅಡಿಗಲ್ಲನ್ನು ಹಾಕಿದವರು ನಾಡಪ್ರಭು ಕೆಂಪೇಗೌಡರು ಮಾಗಡಿ ಪ್ರದೇಶದಿಂದ  ಬಂದು ಇಡೀ ಬೆಂಗಳೂರನ್ನು  ಪ್ರಪಂಚವೇ ತಿರುಗಿ ನೋಡುವ ಹಾಗೆ ಸುಂದರವಾದ ಬೆಂಗಳೂರಿನ ನಿರ್ಮಾಣ ಮಾಡಿದ್ದಾರೆ  ಹಾಗಾಗಿ ಇಲ್ಲಿ ಯಾವುದೇ ಜಾತಿಯನ್ನು ಪರಿಗಣಿಸದೇ ಅವರ ಕೊಡುಗೆಯನ್ನು ಸೇವೆಯನ್ನು ಪರಿಗಣಿಸಿ ಕೆಂಪೇಗೌಡರ ಆಶಯಗಳನ್ನು ಇಟ್ಟುಕೊಂಡು ಸರ್ಕಾರ ಅವರ ಜಯಂತೋತ್ಸವ ಆಚರಣೆ ಮಾಡಲು ತೀರ್ಮಾನಿಸಿರುವುದು ಅಭಿನಂದನಾರ್ಹ ಎಂದರು.

ಜಯಕರ್ನಾಟಕ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮಾತನಾಡಿ ಕೆಂಪೇಗೌಡರು ಒಕ್ಕಲಿಗರ ಸಮುದಾಯದ ಸರ್ವೋಚ್ಚ ನಾಯಕರು ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದಂಥವರು ಅನೇಕ ಇತಿಹಾಸಕಾರರ ಮೇಲೆ ಕೆಲವು ಅಪವಾದಗಳಿವೆ ಬಸವಣ್ಣ  ಅಂಬೇಡ್ಕರ್ ಅಂತಹ ಮಹಾನಾಯಕರ ಮೇಲೆ ಅಪವಾದಗಳಿವೆ ಆದರೆ ಅದನ್ನ ಕೆಲವು ಯೂನಿವರ್ಸಿಟಿಗಳು ಅಧ್ಯಯನ ಮಾಡಿ ಇಲ್ಲದ ಗೊಂದಲಗಳನ್ನು ಸೃಷ್ಟಿ ಮಾಡುತ್ತಿರುವುದು ಸರಿಯಲ್ಲ ಇದು ಚರ್ಚೆಯಾದರೆ ರಾಜ್ಯಮಟ್ಟದಲ್ಲಿ ಚರ್ಚೆಯಾಗಲಿ ಆದರೆ ಇಂತಹ ಚರ್ಚೆಗಳಿಗೆ ಸರ್ಕಾರ ಅವಕಾಶ ಮಾಡಿಕೊಡಬಾರದು  ಯಾವುದೇ ಸಮುದಾಯದ ನಾಯಕರನ್ನು ತೇಜೋವಧೆ ಮಾಡುವುದು ಸರಿಯಲ್ಲ ಇದರಿಂದ  ಕ್ರಾಂತಿ ಉಂಟಾಗಲಿದೆ ಕೆಂಪೇಗೌಡರು ತಿಗಳರ ಅಥವಾ ಒಕ್ಕಲಿಗರ ಎಂದು ಕೆಲವು ಇತಿಹಾಸಕಾರರು ಇದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಆದರೆ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ,ನಗರ ಸಭೆ ಅಧ್ಯಕ್ಷ ಕಿರಣ್,ತಹಶೀಲ್ದಾರ್ ವಿಶ್ವನಾಥ್, ಗ್ರೇಡ್-2 ತಹಶೀಲ್ದಾರ್ ಶಿವಕುಮಾರ್,ಇಒ ಮಧು,ವೃತ್ತ ನಿರೀಕ್ಷಕ ಟಿ.ಟಿ.ಕೃಷ್ಣ,ನಗರ ಸಭೆ ಪೌರಾಯುಕ್ತೆ ಶುಭಾ, ನಗರ ಠಾಣೆ ಪಿಎಸ್‌ಐ ಉಷಾನಂದಿನಿ,ಆಹಾರ ಇಲಾಖೆ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು  ಸಾಹಿತಿ ಕೂ.ಗಿ. ಗಿರಿಯಪ್ಪ, ಒಕ್ಕಲಿಗರ ಸಂಘದ ಗಬ್ಬಾಡಿ ಕಾಡೇಗೌಡ ಸೇರಿದಂತೆ ಆನೇಕ ಸಂಘ ಸಂಸ್ಥೆ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *