58ನೇ ಬಾರಿ ರಕ್ತದಾನ ಮಾಡಿದ ಗಾಣಕಲ್ ನಟರಾಜ್

ರಾಮನಗರ: ರಕ್ತದಾನ ಮಾಡುವ ಮೂಲಕ ‌ಮತ್ತೊಂದು ಜೀವ ಉಳಿಸುವ ಸತ್ಕಾರ್ಯವನ್ನು ನಿರಂತರವಾಗಿ ಮಾಡೋಣ ಎಂದು ತಾಪಂ ಮಾಜಿ ಅಧ್ಯಕ್ಷ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್‌ ನಟರಾಜು ಸಲಹೆ ನೀಡಿದರು.
ತಾಲ್ಲೂಕಿನ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕರ ಸಂಘ ಸಂಸ್ಥಾಪನಾ ದಿನಾಚರಣೆ, ನಾಡಪ್ರಭು ಕೆಂಪೇಗೌಡರ 513ನೇ ದಿನಾಚರಣೆ ಹಾಗೂ ಅಪಘಾತದಲ್ಲಿ ಮೃತರಾದ ಕಾರ್ಮಿಕ ಸಹೋದ್ಯೋಗಿಗಳ ಸ್ಮರಣಾರ್ಥ ಸೋಮವಾರ ಬಿಡದಿಯಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ 58ನೇ ಬಾರಿ ರಕ್ತದಾನ ಮಾಡಿದ ನಂತರ ಪ್ರಮಾಣ ಪತ್ರ ಸ್ವೀಕರಿಸಿ ಅವರು ಮಾತನಾಡಿದರು.
ಮಾನವನ ಬದುಕಿನ ಜೀವಸೆಲೆಯಾಗಿರುವ ರಕ್ತವನ್ನು ದಾನ ಮಾಡುವುದೆಂದರೆ ಮತ್ತೊಂದು ಜೀವಿಯ ಬದುಕ ಉಳಿಸುವ ಮಹಾತ್ಕಾರ್ಯವೇ ಸರಿ. ಹಾಗಾಗಿ, ಆರೋಗ್ಯವಂತರೆಲ್ಲಾ ರಕ್ತದಾನ ಮಾಡೋಣ, ಮಾನವೀಯತೆ ಮೆರೆಯೋಣ ಎಂದು ಕಿವಿಮಾತು ಹೇಳಿದರು. ನಾವೆಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿ ಹಾಗೂ
ಪ್ರೇರಣೆಯಾಗೋಣ ಎಂದು ನಟರಾಜು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಕ್ತವನ್ನು ಎ, ಬಿ, ಒ ಗುಂಪುಗಳಾಗಿ ವರ್ಗೀಕರಣ ಮಾಡುವ ಸಂಶೋಧನೆ ನಡೆಸಿ ರಕ್ತ ವರ್ಗಾವಣೆಯ ಚಿಕಿತ್ಸಾಕ್ರಮಕ್ಕೆ ಅಡಿಪಾಯ ಹಾಕಿದ ಖ್ಯಾತ ವಿಜ್ಞಾನಿ ಡಾ. ಕಾರ್ಲ್ ಲ್ಯಾಂಡ್ ಸ್ಪೈನರ್ ಇವರ ಹೆಸರನ್ನು ವಿಶೇಷವಾಗಿ ಸ್ಮರಿಸಲಾಯಿತು.
ಟೊಯೋಟಾ ಕಾರ್ಮಿಕ ಸಂಘಟನೆಯ ಹಲವಾರು ಪದಾಧಿಕಾರಿಗಳು, ಮುಖಂಡರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *