ಕೊಲೆಗಾರರಿಗೆ ಗುಂಡಿಕ್ಕಲು ಬಿ.ಟಿ. ಅನಿಲ್ ಬಾಬು ಒತ್ತಾಯ
ರಾಮನಗರ : ರಾಜಸ್ತಾನದಲ್ಲಿ ಟೈಲರ್ ಕನ್ನಯ್ಯಕುಮಾರ್ ಅವರನ್ನು ತಾವೇ ಕೊಂದಿರುವುದಾಗಿ ಆ ಇಬ್ಬರು ಮುಸ್ಲಿಮರು ಹೇಳಿದ್ದಾರೆ. ಅವರು ಒಪ್ಪಿಕೊಂಡ ನಂತರವೂ ತನಿಖೆಯ ಅಗತ್ಯವೇನಿದೆ. ಕೂಡಲೇ ಅವರನ್ನು ಗುಂಡಿಟ್ಟು ಕೊಲ್ಲಬೇಕು ಇಲ್ಲವೇ ನೇಣಿಗೆ ಹಾಕಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ತುಮುಕೂರು ವಿಭಾಗ ಸಂಯೋಜಕ್ ಬಿ.ಟಿ. ಅನಿಲ್ ಬಾಬು ಒತ್ತಾಯಿಸಿದರು.
ಆರೋಪಿಗಳು ತಮ್ಮ ಕೃತ್ಯ ಬಹಿರಂಗವಾಗಿ ಒಪ್ಪಿಕೊಂಡ ನಂತರ ಅವರಿಗೆ ಉಗ್ರ ಶಿಕ್ಷೆ ವಿಧಿಸಲು ಅವಕಾಶವಾಗುವಂತೆ ಕಾನೂನಿಗೆ ತಿದ್ದುಪಡಿ ತರಬೇಕು. ರಾಜಸ್ತಾನದಲ್ಲಿ ನಡೆದಿರುವ ಕೊಲೆಗಡುಕ ಕೃತ್ಯ ಹಿಂದೂ ಸಮಾಜಕ್ಕೆ ಹಾಕಿರುವ ಸವಾಲು. ಇದು ಹಿಂದೂಗಳಿಗೆ ಮಾಡಿರುವ ಅಪಮಾನ ಎಂದು ತಿಳಿಸಿದರು.
ಟೈಲರ್ ಕೊಲೆ ಮಾಡಿರುವ ಆರೋಪಿಗಳು ನಂತರ ದೇಶದ ಪ್ರಧಾನಿಗೂ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಹಿಂದೂ ಸಮಾಜದ ತಾಳ್ಮೆ ಪರೀಕ್ಷಿಸುವುದು ಬೇಡ. ಸಮಾಜ ದಂಗೆ ಏಳುವ ಮುನ್ನ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.