ವಿದ್ಯುತ್ ಬೇಡಿಕೆ ತಗ್ಗಿಸಲು ನವೀಕರಿಸಬಹುದಾದ ಇಂಧನ ಮಾರ್ಗ ಅವಶ್ಯಕ : ಹರ್ಷಿತಾ

ರಾಮನಗರ : ವಿದ್ಯುತ್ ಬೇಡಿಕೆ ಪ್ರಮಾಣವನ್ನು ಸೌರಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳ ಸಮರ್ಪಕ ಬಳಕೆಯಿಂದ ಮಾತ್ರ ತಗ್ಗಿಸಬಹುದಾಗಿದೆ ಎಂದು ನಬಾರ್ಡ್ ಮಂಡ್ಯ ಮತ್ತು ರಾಮನಗರ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹರ್ಷಿತಾ ತಿಳಿಸಿದರು.

ನಗರದ ರಾಮಘಡ್  ರೆಸಿಡೆನ್ಸಿಯಲ್ಲಿ  ಸೆಲ್ಕೋ ಸೋಲಾರ್  ಲೈಟ್  ಪ್ರೈವೆಟ್  ಲಿಮಿಟೆಡ್  ಮಾಧ್ಯಮ ಮಿತ್ರರಿಗೆ ಆಯೋಜಿಸಿದ್ದ ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನವೀಕರಿಸಲಾಗದ ಶಕ್ತಿಯನ್ನು  ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆಯಿದೆ. ಇಂದು ಹೆಚ್ಚಾಗುತ್ತಿರುವ ವಿದ್ಯುತ್ ಬೇಡಿಕೆ ಪ್ರಮಾಣವನ್ನು ನವೀಕರಿಸಬಹುದಾದ ಇಂಧನ ಮೂಲಗಳ ಸಮರ್ಪಕ ಬಳಕೆಯಿಂದ ತಗ್ಗಿಸಬಹುದಾಗಿದೆ. ಇಂಧನ ಉಳಿತಾಯ ಹಾಗೂ ನವೀಕರಿಸಬಹುದಾದ ಇಂಧನ ಬಳಕೆ ಇಂದಿನ ಅಗತ್ಯ ಎಂದರು.

ವಿದ್ಯುತ್  ಕ್ಷೇತ್ರದಿಂದ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಗಟ್ಟಲು, ವಿದ್ಯುತ್  ಕೊರತೆ ನೀಗಿಸಲು ಪರಿಸರ ಸ್ನೇಹಿಯಾದ ಅಸಾಂಪ್ರದಾಯಿಕ ಶಕ್ತಿ ಮೂಲಗಳ ವಿದ್ಯುತ್  ಬಳಸಬೇಕು. ಇಂಧನ ಕೊರತೆ ನೀಗಿಸುವ ನಿಟ್ಟಿನಲ್ಲಿ ಸೌರಶಕ್ತಿ  ಬಹುಮುಖ್ಯ ಸಾಧನವಾಗಬಹುದು.

ಇದಲ್ಲದೇ ಜಲ, ಗಾಳಿ ಹಾಗೂ ಜೈವಿಕ ಶಕ್ತಿಯತ್ತಲೂ ಗಮನ ಹರಿಸಬೇಕು. ಈ ಮೂಲಗಳಿಂದ ವಿದ್ಯುತ್  ಉತ್ಪಾದಿಸುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಈಗಾಗಲೇ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವಲ್ಲಿ  ಪ್ರಗತಿ ಕೂಡ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಆಧುನಿಕ ಯುಗದಲ್ಲಿ ಮೊಬೈಲ್ ನಿಂದ ಹಿಡಿದು ಕಾರಿನವರೆಗೂ ನಮ್ಮ ಪ್ರತಿ ಹೆಜ್ಜೆಯು ವಿದ್ಯುತ್ ನಿಂದ ಅವಲಂಬಿತವಾಗಿದ್ದೇವೆ. ಮುಂದಿನ ಭವಿಷ್ಯ ಅವಲೋಕಿಸಿದಾಗ ನೈಸರ್ಗಿಕ ಸಂಪನ್ಮೂಲ ಬರಿದಾಗಲಿವೆ. ಆದ್ದರಿಂದ ಪ್ರತಿ ಮನೆಯಲ್ಲಿಯೂ ಇಂಧನ ಉಳಿಸಿ, ಇಂಧನ ಬೇಡಿಕೆ ಕಡಿಮೆ ಮಾಡಲು ಹಾಗೂ ಸೌರಶಕ್ತಿ ಬಳಲಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಸೆಲ್ಕೋ ಫೌಂಡೇಷನ್ ಧ್ಯೇಯ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿದೆ. ರಾಜ್ಯದಲ್ಲಿ ಸುಮಾರು 3.50 ಲಕ್ಷ ಮನೆಗಳಿಗೆ ಸೋಲಾರ್ ವಿದ್ಯುತ್  ಕಲ್ಪಿಸಿದ್ದಾರೆ. ಈ ಕೆಲಸ ಸರ್ಕಾರ ಮಾಡುವುದಾಗಿದ್ದರೆ ಹತ್ತಾರು ವರ್ಷ ಬೇಕಾಗಿತ್ತು. ಆದರೆ, ಫೌಂಡೇಷನ್  ಕಡಿಮೆ ಅವಧಿಯಲ್ಲಿ  ಮಾಡಿ ತನ್ನ ಸಾಮಾಜಿಕ ಬದ್ಧತೆ ತೋರಿಸಿದೆ ಎಂದು ಹೇಳಿದರು.

ನಬಾರ್ಡ್ ವತಿಯಿಂದ ರಾಮನಗರದಲ್ಲಿ  ನಾಲ್ಕು ಸಾವಿರ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸುವ ಚಿಂತನೆ ಇದೆ. ಮಂಡ್ಯದಲ್ಲಿ ಮುಂದಿನ ಎರಡು ತಿಂಗಳಲ್ಲಿ  100ಕ್ಕೂ ಹೆಚ್ಚು ಸ್ವ ಸಹಾಯ ಸಂಘಟನೆಗಳಿಗೆ ಮಾರಾಟ ಮಳಿಗೆ ಮಾಡಲು ಸೌರ ಕುಟೀರ ನಿರ್ಮಿಸುವ ಉದ್ದೇಶ ಹೊಂದಿದ್ದು, ಇದಕ್ಕೆ ನಬಾರ್ಡ್‍ನಿಂದಲೇ ಅನುದಾನ ಬಳಕೆ ಮಾಡಲಾಗುವುದು ಎಂದು ಹರ್ಷಿತಾ ತಿಳಿಸಿದರು.

ಸೆಲ್ಕೋ ಉಪ ಮಹಾ ಪ್ರಬಂಧಕ ಸುದೀಪ್ತ ಘೋಷ್  ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳ ವಿಧಗಳು ಮುಗಿಯದ, ಪುನರ್  ಉತ್ಪತ್ತಿ ಹೊಂದುವ ಅಥವಾ ನವೀಕರಿಸಬಹುದಾದ ಸಂಪನ್ಮೂಲಗಳು. ಕೆಲವು ಸಂಪನ್ಮೂಲನಗಳನ್ನು ನಿರಂತರವಾಗಿ ಬಳಸುತ್ತಾ ಹೋದಂತೆ ಮತ್ತೆ ಮತ್ತೆ ಚೈತನ್ಯ ಪಡೆದುಕೊಳ್ಳುತ್ತವೆ. ಮುಗಿದು ಹೋಗುವ, ಪುನರ್  ಉತ್ಪತ್ತಿ ಹೊಂದಲಾಗದ ಅಥವಾ ನವೀಕರಿಸಲಾಗದ ಸಂಪನ್ಮೂಲಗಳು (ಪೆಟ್ರೋಲಿಯಂ) ಪುನ ಬಳಸಿದಂತೆ ಕ್ರಮೇಣ ಬರಿದಾಗುತ್ತವೆ ಎಂದು ಹೇಳಿದರು.  

ಸೌರಶಕ್ತಿಯು ನವೀಕರಿಸಬಹುದಾದ ಶಕ್ತಿಯ ಮೂಲವಾಗಿ ಹೆಚ್ಚು ಆಕರ್ಷಕವಾಗುವ ನಿರೀಕ್ಷೆಯಿದೆ. ಸೀಮಿತ ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಮುಂದಿನ 30 ವರ್ಷಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಖಾಲಿಯಾಗುತ್ತವೆ. ಸೌರಶಕ್ತಿ ಎಂದಿಗೂ ಖಾಲಿಯಾಗ ಸಂಪತ್ತು  ಎಂದು ತಿಳಿಸಿದರು.

ಸೆಲ್ಕೋ ಉಪ ಮಹಾ ಪ್ರಬಂಧಕ ಗುರುಪ್ರಕಾಶ್  ಶೆಟ್ಟಿ, ಸಹಾಯಕ ಮಹಾ ಪ್ರಬಂಧಕ ಕೆ.ಕರಿಸ್ವಾಮಿ ಉಪಸ್ಥಿತರಿದ್ದರು.

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *