ಜ್ಞಾನಗುರುರಾಜುಗೆ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್
ರಾಮನಗರ : ತಾಲೂಕಿನ ಆಚಾರ್ಯ ವರ್ಲ್ಡ್ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಗಾನಸರಸ್ವತಿ ಜ್ಞಾನಗುರುರಾಜು ಅವರಿಗೆ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್-2022ರ ಪುರಸ್ಕಾರ ಲಭಿಸಿದೆ.
ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್ ವತಿಯಿಂದ ಕೊಡಮಾಡುವ ಪ್ರಶಸ್ತಿ ಇದಾಗಿದ್ದು, ಸಂಗೀತ ಕ್ಷೇತ್ರದಿಂದ ಭಾಲಪ್ರತಿಭೆ ಜಾÐನ ಗುರುರಾಜ್‍ಗೆ ಜೂ.30 ರಂದು ಬೆಂಗಳೂರಿನಲ್ಲಿ ನಡೆದ ತಿಮ್ಮಕ್ಕ ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದು, 25 ಸಾವಿರ ನಗದು, ಬೆಳ್ಳಿ ಪದಕ, ಸ್ಮರಣಿಕೆಯನ್ನು ನೀಡಿ ಗೌರವಿಸಲಾಗಿದೆ.
ಆಚಾರ್ಯ ವಲ್ರ್ಡ್ ಶಾಲೆಯ ಅಧ್ಯಕ್ಷ ಎಚ್.ಸಿ.ರಾಜಣ್ಣ ಮಾತನಾಡಿ ಜಾÐನಗುರುರಾಜು ಅವರಿಗೆ ಪ್ರಶಸ್ತಿ ಲಭಿಸಿದೆ. ಭಾಲಪ್ರತಿಭೆ ನಮ್ಮ ಶಾಲೆಯ ವಿದ್ಯಾರ್ಥಿನಿ ಎಂಬುದು ಸಂತಸದ ವಿಚಾರವಾಗಿದ್ದು, ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ. ಆಗೆಯೆ ಶಾಲೆಯ ಸಂಸ್ಥಾಪಕರಾದ ಸಿದ್ದೇಗೌಡ, ಕಾರ್ಯದರ್ಶಿ ಕಲ್ಯಾಣಕುಮಾರಿ ಸೇರಿದಂತೆ ಶಿಕ್ಷಕ ವೃಂದದವರು ಜಾÐನಗುರುರಾಜು ಅವರನ್ನು ಅಭಿನಂದಿಸಿದ್ದಾರೆ.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com