ಪೌರಕಾರ್ಮಿಕರಿಂದ ಅರೆಬೆತ್ತಲೆ ಪ್ರತಿಭಟನೆ
ರಾಮನಗರ : ಪೌರ ಕಾರ್ಮಿಕ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಖಾಯಂ ಮತ್ತು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಹೋರಾತ್ರಿ ನಡೆಸುತ್ತಿರುವ ಧರಣಿ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ನಾಲ್ಕನೇ ದಿನವಾದ ಸೋಮವಾರ ಅರಬೆತ್ತಲೆ ಮತ್ತು ತಮಟೆ ಚಳುವಳಿ ಮಾಡುವ ಮೂಲಕ ವಿಭಿನ್ನ ವಾಗಿ ಪ್ರತಿಭಟನೆ ನಡೆಸಿದರು.

ಎಂಇಐ ಮಾಜಿ ಅಧ್ಯಕ್ಷ, ನಗರಸಭೆ ಸದಸ್ಯ ಕೆ.ಶೇಷಾದ್ರಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ ಹೊರಗುತ್ತಿಗೆ ನೌಕರರು ನಗರ ಪಟ್ಟಣದ ಸ್ವಚ್ಚತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರ ಕನಿಷ್ಟ ಬೇಡಿಕೆಗಳನ್ನು ಈಡೇರಿಸುವ ಕೆಲಸ ಸರ್ಕಾರ ಮಾಡದಿರುವುದು ನಾಚಿಕೆಗೇಡಿನ ಸಂಗತಿ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.
ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ ಮಾತನಾಡಿ ನಾಲ್ಕು ದಿನಗಳ ನಿನ್ಮಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ ಮಾತನಾಡಿ ಹೊರಗುತ್ತಿಗೆ ನೌಕರರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸದಿರುವುದು ನೋವಿನ ಸಂಗತಿಯಾಗಿದೆ. ನಿಮ್ಮ ಬೇಡಿಕೆ ಈಡೇರುವವರೆಗೆ ನಿಮ್ಮ ಹೋರಾಟ ನಿಲ್ಲದಿರಲಿ ನಿಮ್ಮ ಜೊತೆ ನಾವು ನಿಲ್ಲುತ್ತೇವೆ ಎಂದರು.
ಪುರಸಭೆ ಸದಸ್ಯ ರಾಮಚಂದ್ರಯ್ಯ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹಿನ್ ಪಾಷ, ಸದಸ್ಯರಾದ ದೌಲತ್ ಷರೀಫ್, ಮಣಿ, ಪೈರೋಜ್, ಪವಿತ್ರ ಮುಖಂಡರಾದ ಸೂರಿ, ವೆಂಕಟೇಶ್, ಚಂದ್ರು, ಶಿವಕುಮಾರಸ್ವಾಮಿ, ಖಾಸಿಪ್, ದೇವರಾಜು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಚಲಪತಿ ಸೇರಿದಂತೆ ನಾಲ್ಕು ತಾಲೂಕುಗಳಿಂದ ಆಗಮಿಸಿರುವ ನೂರಾರು ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ : ಪಾದ್ರಳ್ಳಿ ರಾಜು
ಮೊ : 6360905062