ವಿನೋದ್ ಭಗತ್ ಅವರ ಲೇಖನ : ‘ಶೇರ್ ಶಹ’ ಎಂದು ಕರೆಯಲ್ಪಡುತ್ತಿದ್ದ ‘ವಿಕ್ರಮ್ ಭಾತ್ರ’

ವಿನೋದ್ ಭಗತ್

“Either I will come back after hoisting the Tricolor, or I will come back wrapped in it, but I will be back for sure.”

1999ರಲ್ಲಿ ಭಾರತೀಯ ಸೈನಿಕರು ಕಾರ್ಗಿಲ್ ಸೇರುವ ಮುನ್ನವೇ ಪಾಕಿಸ್ತಾನದ ಪಾಪಿಗಳು ಭಾರತದ ಪ್ರದೇಶಗಳನ್ನು ವಶಪಡಿಸಿಕೊಂಡು ಭಾರತದ ಮೇಲೆ ಆಕ್ರಮಣ ಮಾಡಿದ್ದು ನಮಗೆಲ್ಲ ಗೊತ್ತಿದೆ. ಪಾಕಿಸ್ತಾನದ ವಶದಲ್ಲಿರುವ ಗುಡ್ಡಗಳನ್ನು ಮರುವಶ ಮಾಡಿಕೊಳ್ಳಲು ಭಾರತೀಯ ಸೇನೆ ನಿರ್ಧರಿಸುತ್ತದೆ. ಮೊದಲು ಮಹತ್ತರವಾದ ‘5140 ಪಾಯಿಂಟ್’ನ್ನು ಮರುವಶ ಪಡೆಯುವ ಜವಾಬ್ದಾರಿಯನ್ನು ‘ಶೇರ್ ಶಹ‘ ಎಂದೇ ಕರೆಯಲ್ಪಡುತ್ತಿದ್ದ ಕ್ಯಾಪ್ಟನ್ “ವಿಕ್ರಮ್ ಭಾತ್ರ” ಅವರಿಗೆ ವಹಿಸಲಾಗುತ್ತದೆ.

17000 ಅಡಿಯ ಎತ್ತರದಲ್ಲಿ ಶತ್ರುಸೇನೆ, ಕೆಳಗಿನಿಂದ ವಿಕ್ರಮ್ ಭಾತ್ರ ತನ್ನ ಐದು ಸಹೋದ್ಯೋಗಿಗಳ ಜೊತೆ ಹೋಗಿ ಪಾಯಿಂಟ್ 5140 ವಶಪಡಿಸಿಕೊಳ್ಳಬೇಕು. ಗುಡ್ಡದ ತುದಿ ತಲುಪಿದ ಭಾತ್ರರ ತಂಡವನ್ನು ಕಂಡ ಶತ್ರುಪಡೆ Heavy Machine Gun ಗಳಿಂದ ದಾಳಿ ಶುರುಮಾಡಿತು. ವಿಕ್ರಮ್ ಒಬ್ಬರೇ ಮೂವರು ಪಾಕಿಸ್ತಾನಿ ಸೈನಿಕರನ್ನು ಕೊಂದರು, ಈ ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡ ವಿಕ್ರಮ್ ಧೃತಿಗೆಡದೆ ತನ್ನ ತಂಡದೊಂದಿಗೆ ಎಂಟು ಪಾಕಿಸ್ತಾನಿ ಸೈನಿಕರನ್ನು ಕೊಂದು ಪಾಯಿಂಟ್ 5140 ಮೇಲೆ 20 ಜೂನ್ 1999ರ ಬೆಳಗಿನ ಜಾವ 3.30ಕ್ಕೆ ತಿರಂಗ ಧ್ವಜ ಹಾರಿಸಿದರು. “ಏ ದಿಲ್ ಮಾಂಗೇ ಮೋರ್” ಎನ್ನುತ್ತಲೇ ಬಹುಮುಖ್ಯವಾದ ‘ಟೈಗರ್ ಹಿಲ್‘ ವಶಪಡಿಸಿಕೊಳ್ಳುವುದರಲ್ಲಿ ಸಹಾಯ ಮಾಡಿದರು ಶೇರ್ ಶಹ.

ಇದರ ಬೆನ್ನಲ್ಲೆ 16000 ಅಡಿ ಎತ್ತರದ 4875 ಗುಡ್ಡವನ್ನು ಗೆಲ್ಲುವ ಜವಾಬ್ದಾರಿ ವಿಕ್ರಮರ ಪಾಲಾಯಿತು. 7 ಜುಲೈ 1999ರಂದು ಪಾಯಿಂಟ್ 4875 ಗೆಲ್ಲುವ ಪ್ರಯತ್ನದಲ್ಲಿ ಶತ್ರುಗಳ ದಾಳಿಯಿಂದ ಗಾಯಗೊಂಡ ತಮ್ಮದೇ ತಂಡದ ಸುಬೇದಾರನನ್ನು ರಕ್ಷಿಸಿ ‘ತು ಬಾಲ್-ಬಚ್ಚೆದಾರ್ ಹೇ, ಹಟ್ ಜಾ’ (ನೀನು ಮಕ್ಕಳೊಂದಿಗ, ಪಕ್ಕಕ್ಕೆ ಸರಿ ನಾನು ನೋಡ್ಕೋತೀನಿ) ಎಂದ ವಿಕ್ರಮ್ ಭಾತ್ರ ಶತ್ರುಗಳ ಗುಂಡಿನ ಧಾಳಿಗೆ ಎದೆಯೊಡ್ಡಿದರು, “ಜೈ ಮಾತಾ ದಿ” ಎನ್ನುತ್ತಾ ಭಾರತ ಮಾತೆಗೆ ತಮ್ಮ ಪ್ರಾಣಾರ್ಪಣೆ ಮಾಡಿದರು.

ಮರಣೋತ್ತರವಾಗಿ 15 ಆಗಸ್ಟ್ 1999ರಂದು ಭಾರತ ಸರ್ಕಾರ ‘ಪರಮವೀರ ಚಕ್ರ’ ಪ್ರಶಸ್ತಿ ಕೊಟ್ಟು ಗೌರವಿಸಿದೆ.

ವಿನೋದ್ ಭಗತ್

ಲೇಖನ : ವಿನೋದ್ ಭಗತ್

ಅಧ್ಯಕ್ಷರು
ಯುವ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್

ಮೊ : 97399 01930

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *