ಜುಲೈ 19ರಂದು ಮರಾಠ ನಿಗಮಕ್ಕೆ ಚಾಲನೆ : ವಿಜೇಂದ್ರ ಜಾಧವ್

ರಾಮನಗರ : ಮರಾಠಿಗರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು, ಇದೇ 19ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಗಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಮುದಾಯದ ಮುಖಂಡ ವಿಜೇಂದ್ರ ಜಾಧವ್ ತಿಳಿಸಿದರು.
ನಗರದ ಶೆಟ್ಟಹಳ್ಳಿ ಬೀದಿಯಲ್ಲಿರುವ ರೇವಣಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮರಾಠ ಅಭಿವೃದ್ಧಿ ನಿಗಮವನ್ನು ರಚಿಸಿರುವುದು, ಅದಕ್ಕೆ ಮಾಜಿ ಶಾಸಕ ಎಂ.ಜಿ. ಮೂಲೆ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮುದಾಯದ ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಏಕೀಕರಣದ 66 ವರ್ಷಗಳ ಸುದೀರ್ಘ ಕಾಲದಲ್ಲಿ ಮರಾಠರು ನಾಡಿನ ಸಂಸ್ಕೃತಿ, ಭಾಷೆ ,ಜಲ ಮತ್ತು ನೆಲದಲ್ಲಿ ಒಂದಾಗಿ ಜೀವಿಸುತ್ತಿದ್ದೇವೆ. ಸಾಮಾಜಿಕವಾಗಿ ಮುಂದುವರೆದರೂ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬಹಳ ಹಿಂದುಳಿದ್ದೇವೆ. ಜತೆಗೆ, ಬಹುದಿನದ ಬೇಡಿಕೆಯಾದ ಮೀಸಲಾತಿ 3ಬಿಯಿಂದ 2ಎಗೆ ಸೇರುವುದು ಮರೀಚಿಕೆಯಾಗಿಯೇ ಉಳಿದುಕೊಂಡಿದೆ ಅವರು ಅವರು ತಿಳಿಸಿದರು.

ಕರ್ನಾಟಕ ಕ್ಷತ್ರೀಯ ಮಹಾ ಒಕ್ಕೂಟದ ಅಧ್ಯಕ್ಷ ಶ್ಯಾಮ ಸುಂದರ್ ಗಾಯಕ್‍ವಾಡ್ ಮಾತನಾಡಿ, ನಮಗೆ ಗಡಿ ವಿಚಾರ- ವಿವಾದಕ್ಕಿಂತ ಹೊಟ್ಟೆಗೆ ಅನ್ನ, ದುಡಿಯಲು ಕೆಲಸ ಬೇಕಾಗಿದೆ. ಶಿವಾಜಿ ಜಯಂತಿಯನ್ನು ಮಹಾರಾಷ್ಟ್ರ ಹೊರತುಪಡಿಸಿದರೆ, ಕರ್ನಾಟಕದಲ್ಲೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಉಮಾಮೂರ್ತಿ ರಾವ್, ಜಗನ್ನಾಥ್ ರಾವ್ ಸಿಂಧೆ, ರವಿ ಮಗರ್, ರಾಮನಗರ ಜಿಲ್ಲಾ ಕ್ಷತ್ರೀಯ ಮರಾಠ ಸೇವಾ ಟ್ರಸ್ಟಿನ ಅಧ್ಯಕ್ಷ ಎಲ್. ನಾರಾಯಣರಾವ್ ಚೌಹಾಣ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ನಲಿಗೆ, ಖಜಾಂಚಿ ಶಂಕರರಾವ್ ಚೌಹಾಣ್, ಪದಾಧಿಕಾರಿಗಳಾದ ಯಶವಂತರಾವ್, ಚಂದನ್ ಮೋರೆ, ನಾಗೇಂದ್ರರಾವ್, ಸಿದ್ದೋಜಿರಾವ್, ಶಿವಾಜಿರಾವ್, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ರಾಮನಗರ ಶಾಖೆಯ ಅಧ್ಯಕ್ಷರಾದ ಸೋಮಶೇಖರ ರಾವ್ ಕಾಂಬ್ಳೆ, ಕಾರ್ಯದರ್ಶಿ ತುಕಾರಂ ಖಾಂಡೆ, ಖಜಾಂಚಿ ಆರ್.ಕೆ. ಬಾಬುರಾವ್, ಸಂಘಟಕಿ ಕವಿತಾರಾವ್ ಇದ್ದರು.

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *