ಪಿಎಸ್‌ಐ ನೇಮಕಾತಿ ಅಕ್ರಮದ ಮೂಲ ಹುಡುಕುತ್ತಾ ಹೊರಟರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಸಿಕ್ಕಿ ಬೀಳುತ್ತಾರೆ : ಡಾ.ಸಿ.ಎನ್. ಅಶ್ವತ್ಥ ನಾರಾಯಣ
ಮಂಡ್ಯ: ಪಿಎಸ್‌ಐ ನೇಮಕಾತಿ ಅಕ್ರಮದ ಮೂಲ ಹುಡುಕುತ್ತಾ ಹೊರಟರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಸಿಕ್ಕಿ ಬೀಳುತ್ತಾರೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಮೇಲುಕೋಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶಾಂತಾರಾಂ ಪ್ರಕರಣ ನಡೆದಿತ್ತು, ಸಿದ್ದರಾಮಯ್ಯ ತನಿಖೆ ಮಾಡಿದರಾ? ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಾತಿ ಅಕ್ರಮದ ತನಿಖೆ ಆಯಿತಾ? ಹಗರಣಗಳನ್ನು ಮುಚ್ಚಿ ಹಾಕುವುದೇ ಸಿದ್ದರಾಮಯ್ಯ ಅವರ ಕೆಲಸವಾಗಿತ್ತು. ಅವರದು ಅಪವಿತ್ರ, ಅನೈತಿಕ, ಅಕ್ರಮ ಆಡಳಿತವಾಗಿತ್ತು ಎಂದು ಆರೋಪಿಸಿದರು.
ನಾವು ಅಕ್ರಮವನ್ನು ಬಯಲಿಗೆಳೆಯುವ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಮಾಡಿರುವ ಕರ್ಮಕಾಂಡ ಆಗಾಗ ಅವರಿಗೆ ನೆನಪಾಗುತ್ತಿರುತ್ತದೆ. ಹೀಗಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವಧಿ ಮುಗಿದ (ಔಟ್‌ಡೇಟೆಡ್) ರಾಜಕಾರಣಿ, ಹಳೇ ಸೈಕಲ್ ಓಡಿಸಲಾಗುತ್ತಿದೆ. ಸಿ.ಎಂ ಆಗಿದ್ದಾಗ ಇದೇ ಕಡೇ ಅವಧಿ ಎಂದು ಹೇಳಿದ್ದರು. ಪದೇ ಪದೇ 5 ವರ್ಷ ಹೇಳಿಕೊಂಡು ಮುಂದುವರಿಯುತ್ತಲೇ ಇದ್ದಾರೆ, ಯುವಕರು ಎಲ್ಲಿಗೆ ಹೋಗಬೇಕು ಎಂದರು.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com