ಮೂಡಲಪಾಯ ಯಕ್ಷಗಾನ ಪ್ರಸಂಗ ಕಲಿಯಲು ಅರ್ಜಿ ಆಹ್ವಾನ

ಬೆಂಗಳೂರು : ಮೂಡಲಪಾಯ ಯಕ್ಷಗಾನ ಪ್ರಸಂಗ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವೃತ್ತಿಪರ ತಂಡಗಳಲ್ಲಿ ಅವಕಾಶ ಪಡೆಯಲು 18ರಿಂದ 35 ವರ್ಷದೊಳಗಿನ ಕಲಾವಿದರಿಂದ ‌ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು ಅರ್ಜಿ ಆಹ್ವಾನಿಸಿದೆ.

ಮೂಡಲಪಾಯ ಯಕ್ಷಗಾನ ಕಲೆಯು ದಕ್ಷಿಣ ಕರ್ನಾಟಕದ 10 ಜಿಲ್ಲೆಗಳಲ್ಲಿ ಪ್ರಚಲಿತವಿದೆ. ಮೂಡಲ ಪಾಯ ಯಕ್ಷಗಾನ ಪ್ರಸಂಗಗಳ ಪ್ರದರ್ಶ ನಕ್ಕೆ ಸಂಬಂಧಿಸಿದಂತೆ ಆ.22ರಿಂದ ಹತ್ತು ದಿನಗಳು ಪೂರ್ವಭಾವಿ ಸಿದ್ಧತಾ ಕಾರ್ಯಾಗಾರ ನಡೆಯಲಿದೆ. ಸೆ.1ರಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಮೂಡಲಪಾಯದ ಭಾಗವತರು, ಮದ್ದಳೆ ಮತ್ತು ಮುಖವೀಣೆ ಕಲಾವಿದರ ನೇತೃತ್ವದಲ್ಲಿ ತರಬೇತಿ ನಡೆಯಲಿದೆ ಎಂದು ಪರಿ ಷತ್ತಿನ ಪ್ರಧಾನ ಕಾರ್ಯದರ್ಶಿ ಶಶಿಧರ್ ಭಾರಿಘಾಟ್ ಹೇಳಿದ್ದಾರೆ.

ಆಸಕ್ತರು ಅರ್ಜಿ ನಮೂನೆಯನ್ನು ಆ.16ರೊಳಗೆಸಂಚಾಲಕರು, ಮೂಡಲಪಾಯ ಯಕ್ಷರಂಗ ಪಯಣ, ಕರ್ನಾಟಕ ಸಂಘ, ಆರ್.ಪಿ.ರಸ್ತೆ, ಮಂಡ್ಯ-571401 ಈ ವಿಳಾಸಕ್ಕೆ ಅಥವಾ ಇ-ಮೇಲ್ ವಿಳಾಸ karnatakasanghamandya@gmail.comಗೆ ಕಳಿಸುವಂತೆ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮೊ : 9448194456 ಅಥವಾ 9448542411 ಸಂಪರ್ಕಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *