ಶಾಸಕ ಜಮೀರ್ ಅಹಮದ್ ಹೇಳಿಕೆಗೆ ಒಕ್ಕಲಿಗ ಸಂಘ ಆಕ್ರೋಶ
ರಾಮನಗರ : ರಾಜ್ಯದಲ್ಲಿ ಮುಂದಿನ ಸಿಎಂ ವಿಚಾರವಾಗಿ ಶಾಸಕ ಜಮೀರ್ ಅಹಮದ್ ಅವರು ಒಕ್ಕಲಿಗ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿರುವುದಕ್ಕೆ ಒಕ್ಕಲಿಗ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನಗರದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗಿಒಷ್ಠಿಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮೇಲಿಂಗು ಮಾತನಾಡಿ, ಶಾಸಕ ಜಮೀರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸ್ಥಾನ ಬದ್ರಮಾಡಿಕಿಳ್ಳಲು ಒಕ್ಕಲಿಗರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ರಾಮನಗರದಂತಹ ಪ್ರದೇಶದಲ್ಲಿ ಒಕ್ಕಲಿಗ ಮತ್ತು ಮುಸಲ್ಮಾನರು ಬಾಂದವ್ಯದಿಂದ
ಬದುಕುತ್ತಿದ್ದಾರೆ. ಇದಕ್ಕೆ ಜಮೀರ್ ಅಂತಹ ವ್ಯಕ್ತಿಗಳು ಬಿರುಕುಂಟುಮಾಡುತ್ತಿದ್ದಾರೆ ಎಂದರು.
ಜಮೀರ್ ಅವರು ರಾಜ್ಯದ ಸಿಎಂ ಆಗಲಿ, ದೇಶಕ್ಕೆ ಪಿಎಂ ಅಗಲಿ ನಮ್ಮ ತಕರಾರಿಲ್ಲ. ಆದರೆ ತಾವು ಅಧಿಕಾರ ಪಡೆಯಲು ಬಾಯಿಗೆ ಬಂದಂತೆ ಇನ್ನೊಂದು ಸಮುದಾಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳು ಜಾತಿ ಮತ್ತು ಧರ್ಮದ ನಡುವೆ ಬಿರುಕು ಉಂಟುಮಾಡು ಕೆಲಸ ಮಾಡುವುದರ ಜೊತೆಗೆ ಸಾಮರಸ್ಯ ಕದಡಲು ಕಾರಣವಾಗುತ್ತದೆ ಎಂದರು.
ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಕೆ.ಚಂದ್ರಯ್ಯ ಮಾತನಾಡಿ, ಹರಕು ಬಾಯಿಯ ಜಮೀರ್ ಒಕ್ಕಲಿಗರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದಕ್ಕೂ ಮುನ್ನ ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಧಾಸೌದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಮಣ್ಣಿನಮಗ ದೇವೇಗೌಡ, ವಿಕಾಸ ಸಧದ ನಿರ್ಮಾತೃ ಎಸ್.ಎಂ.ಕೃಷ್ಣ, ಬೆಳಗಾವಿಯ ಸುವರ್ಣಸೌಧದ ನಿರ್ಮಾತೃ ಕುಮಾರಸ್ವಾಮಿ ಅವರ ಸೇವೆಯನ್ನು ಗುರ್ತಿಸಬೇಕು ಎಂದು ಆಗ್ರಹಿಸಿದರು.
ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಟಿ. ಕಾಂತರಾಜ್ ಪಟೇಲ್ ಮಾತನಾಡಿ, ತಮ್ಮ ವೈಯುಕ್ತಿಕ ಲಾಭಕ್ಕಾಗಿ ಸಮುದಾಯವೊಂದರ ತೇಜೋವಧೆ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ವಿಚಾರಗಳಿಗೆ ಕಡಿವಾಣ ಹಾಕದಿದ್ದರೆ ಒಕ್ಕಲಿಗರು ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕಲಿಗ ಸಂಘದ ಸಹ ಕಾರ್ಯದರ್ಶಿ ಬೈರೇಗೌಡ ಮಾತನಾಡಿ, ಕೂಡಲೆ ಜಮೀರ್ ಅವರು ಆಧಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಾಲನಂದನಾಥ ಸ್ವಾಮೀಜಿ ಮತ್ತು ಒಕ್ಕಲಿಗರ ಕ್ಷಮೆ ಕೇಳದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಮತ್ತು ಇಡಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಕ್ಕಲಿಗ ಸಮುದಾಯದ ಹಿರಿಯ ಮುಖಂಡರಾದ ಶಿವರಾಜು, ತಮ್ಮಯ್ಯಣ್ಣ, ಖಂಜಾಚಿ ನಂದೀಶ್, ಕೆಂಪೇಗೌಡ ಜಯಂತ್ಯೋತ್ಸವ ಸಮಿತಿ ಪದಾಧಿಕಾರಿಗಳಾದ ಮೊಜಾಯಿಕ್ ಶಿವಸ್ವಾಮಿ, ರಾಜಣ್ಣ, ಕಿರಣ್, ಆನಂದ್, ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರವಿ ಇದ್ದರು.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com