ನಾಳೆ (ಜುಲೈ 29) ಗಣಿತದ ಸುಲಭೋಪಾಯಗಳು ಪ್ರಾಯೋಗಿಕ ಚಟುವಟಿಕೆ
ರಾಮನಗರ : ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ರಾಮನಗರ ತಾ.ಜಿಲ್ಲೆ ಅವ್ವೇರಹಳ್ಳಿ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಜುಲೈ 29ರಂದು ಮಧ್ಯಾಹ್ನ 12 ಗಂಟೆಗೆ ಗಣಿತದ ಸುಲಭೋಪಾಯಗಳು ಪ್ರಾಯೊಗಿಕ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಾಮಾನ್ಯವಾಗಿ ಶಾಲಾಮಕ್ಕಳಿಗೆ ಗಣಿತದ ಲೆಕ್ಕಗಳು ತಲೆಗೆ ಹೋಗದೆ, ಕಷ್ಟ ಎನ್ನುವ ಸಹಜ. ಈ ಹಿನ್ನೆಲೆಯಲ್ಲಿ ಗಣಿತ ಕಬ್ಬಿಣದ ಕಡಲೆಯಲ್ಲ, ಅದನ್ನು ಅನುಭವಿಸಿ ಆಸ್ವಾದಿಸಿದರೆ ಕಲಿಕೆ ಸುಲಭ ಎಂಬುದನ್ನು ಪ್ರಾಯೋಗಿಕವಾಗಿ ಹೆಳಿಕೊಡಲು ಹೆಸರಾಂತ ಕತೆಗಾರ ರಾಜೇಂದ್ರ ಬಿ. ಶೆಟ್ಟಿ ಬೆಂಗಳೂರಿನಿಂದ ಬರುತ್ತಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಮದಾರ್ ನರಸಿಂಹಲು ವಹಿಸುವರು. ಅತಿಥಿಗಳಾಗಿ ರಾಮನಗರ ತಾ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಅವ್ವೇರಹಳ್ಳಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪಲತಾ, ಕಲಾವಿದ, ನಿರೂಪಕ ಜಿ.ಪಿ. ರಾಮಣ್ಣ, ಹಾಗೂ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
Good work