ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರ ನಾಯಕರು ಗಮನಹರಿಸಿದ್ದಾರೆ : ಗೌತಮ್ ಮರಿಲಿಂಗೇಗೌಡ

ರಾಮನಗರ : ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರ ನಾಯಕರು ಗಮನಹರಿಸಿದ್ದು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ರೇಷ್ಮೆ ಕೈಗಾರಿಕಾ ನಿಗಮದ ನೂತನ ಅಧ್ಯಕ್ಷ ಗೌತಮ್‌ ಮರಿಲಿಂಗೇಗೌಡ ಹೇಳಿದರು.
ಕನಕಪುರ ತಾಲೂಕಿನ ಮರಳವಾಡಿಯ ತಮ್ಮ ಸ್ವಗೃಹ ಹನುಮಂತನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹಳೆ ಮೈಸೂರು ಭಾಗದಲ್ಲಿ ಕಾರ್ಯಕರ್ತರು ಸಂಘಟಿಸುತ್ತಾ ಸೋತಿದ್ದರು ಆದರೆ ಕಾಲ ಬದಲಾಗಿದೆ. ಹಳೇ ಮೈಸೂರು ಭಾಗದ ಬಗ್ಗೆ ರಾಷ್ಟ್ರೀಯ ನಾಯಕರಲ್ಲಿ ಕಾಳಜಿ ಹೆಚ್ಚಿದೆ. ಇನ್ನು ಸಾಧಾರಣ ಹುಡುಗನನ್ನು ಗುರುತಿಸಿ ಬಿಜೆಪಿ ಪಕ್ಷ ಜನಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆ ದೊರೆಯಲಿದೆ ಎಂಬುದಕ್ಕೆ ನಾನೇ ತಾಜಾ ಉದಾಹರಣೆ. ಸಿ.ಎಂ.ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ನಳಿನ್‌ ಕುಮಾರ್‌ ಕಟೀಲ್‌, ಉಸ್ತುವಾರಿ ಸಚಿವ ಅಶ್ವಥ್‌ ನಾರಾಯಣ, ಎಂಎಲ್‌ಸಿ ಯೋಗೇಶ್ವರ್‌, ಕೆಆರ್‌ಐಡಿಎಲ್‌ ಅಧ್ಯಕ್ಷ ರುದ್ರೇಶ್‌ ಸೇರಿದಂತೆ ಜಿಲ್ಲೆಯ ನಾಯಕರು ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಉನ್ನತ ಹುದ್ದೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟಿಸಲಾಗುವುದು. ಜನರಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸಗಳನ್ನು ಮೊದಲು ಮಾಡಬೇಕಿದೆ. ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸ ಮೊದಲು ಮಾಡಲಾಗುವುದು ಎಂದರು.
ಇದೇ ವೇಳೆ ಮುಖಂಡ ಮಲ್ಲಪ್ಪ ಮಾತನಾಡಿ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಸಲೆ ಇದೆ. ಬೇರೆ ಪಕ್ಷಕ್ಕಾಗಿ 20 ವರ್ಷ ದಣಿವರಿಯದೇ ದುಡಿದಿದ್ದೇವೆ. ಆದರೆ ಯಾವುದೇ ಪದವಿ ನೀಡಿರಲಿಲ್ಲ ಆದರೆ ಬಿಜೆಪಿ ಪಕ್ಷದಲ್ಲಿ ಆಗಿಲ್ಲ ಎಲ್ಲಾ ಮುಖಂಡರು ಸೇರಿ ನೆಚ್ಚಿನ ಯುವ ಮುಖಂಡರಿಗೆ ಉನ್ನತ ಹುದ್ದೆ ನೀಡಿದ್ದಾರೆ. ಮುಂದೆ ಬಿಜೆಪಿಗೆ ಈ ಭಾಗದ ಅನೇಕ ಹಿರಿಯರು ಸೇರ್ಪಡೆಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಒಬಿಸಿ ರಾಜ್ಯ ಕಾರ್ಯದರ್ಶಿ ನಾಗರಾಜು ಮಾತನಾಡಿ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಶಾಸಕರಿಲ್ಲ ಎಂಬ ಕೊರಗಿದೆ. ಅದು ಸಾಕಾರಗೊಳ್ಳುವ ಕಾಲ ಹತ್ತಿರ ಬಂದಿದೆ. ಗೌತಮ್‌ ಗೌಡರಲ್ಲಿ ಸಂಘಟನೆ ಶಕ್ತಿ ಹೆಚ್ಚಿದೆ. ಅವರ ಸಂಘಟನಾ ಚತುರತೆಯನ್ನು ಕಂಡ ನಾಯಕರು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಆ ನಿಟ್ಟಿನಲ್ಲಿ ರುದ್ರೇಶ್‌ ಅವರೂ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಬಾಲಾಜಿ ಸಿಂಗ್‌, ಲಕ್ಷ್ಮಣ್‌ ಗೌಡ, ರಘು, ಬಸವರಾಜು, ಹಿರಿಯ ಮುಖಂಡರಾದ ಸಣ್ಣಪ್ಪ, ಪ್ರಭು ಸೇರಿದಂತೆ ಇನ್ನಿತರರು ನೂತನ ನಿಗಮ ಮಂಡಳಿ ಅಧ್ಯಕ್ಷ ಗೌತಮ್‌ ಗೌಡ ಅವರನ್ನು ಅಭಿನಂದಿಸಿದರು.

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :

https://chat.whatsapp.com/HK9U7zQD11W79PK8sGwVCS

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :

WhatsApp : 9880439669

Mail : rudresh.444@gmail.com

Leave a Reply

Your email address will not be published. Required fields are marked *