ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಬೈಕ್ : ಮಾಲೀಕನಿಗೆ 34 ಸಾವಿರ ದಂಡ, ಒಂದು ದಿನ ಸೆರೆವಾಸ
ಚನ್ನಪಟ್ಟಣ : ಬಾಲಕನಿಗೆ ಚಾಲನೆ ಮಾಡಲು ಬೈಕ್ ನೀಡಿದ್ದ ಮಾಲೀಕನಿಗೆ ನಗರದ ಜೆಎಂಎಫ್ ನ್ಯಾಯಾಲಯ 34 ಸಾವಿರ ರೂ. ದಂಡ, ಒಂದು ದಿನ ಸೆರೆವಾಸ ವಿಧಿಸಿದೆ.
ನಗರದ ಅನ್ವರ್ ಖಾನ್ ಶಿಕ್ಷೆಗೆ ಒಳಗಾದವರು.
ತಮ್ಮ ಬೈಕನ್ನು ಸಂಬಂಧಿಕರ ಮಗನಿಗೆ ಚಾಲನೆ ಮಾಡಲು ನೀಡಿದ್ದರು. ಬೈಕ್ ಚಾಲನೆ ಮಾಡುವಾಗ ಸರ್ಕಾರಿ ಬಸ್ ಡಿಪೊ ಮುಂಭಾಗ ಆಯ ತಪ್ಪಿ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದ. ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಹೇಂದ್ರಕುಮಾರ್ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದಕ್ಕೆ ದಂಡ ವಿಧಿಸಿದ್ದಾರೆ.
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : rudresh.444@gmail.com