ಲೋಕೋಪಯೋಗಿ ಇಲಾಖೆಯ ಎಇಇ ರಾಮಣ್ಣ ಅವರಿಗೆ ಬೀಳ್ಕೊಡುಗೆ
ರಾಮನಗರ : ಇದೇ ತಿಂಗಳ 31 ರಂದು ಸರ್ಕಾರಿ ಸೇವೆಯಿಂದ ನಿವೃತ್ತರಾಗುತ್ತಿರುವ ಮಾಗಡಿ ಲೋಕೋಪಯೋಗಿ ಇಲಾಖೆಯ ಎಇಇ ರಾಮಣ್ಣ ಅವರನ್ನು ರಾಮನಗರ ವಿಭಾಗದಲ್ಲಿ ಶನಿವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
ರಾಮನಗರ ವಿಭಾಗ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರ್ಯಪಾಲಕ ಅಭಿಯಂತರರಾದ ಆರ್.ವಿ. ವಿಜಯಗೋಪಾಲ್ ಎಲ್ಲರ ಪರವಾಗಿ ರೇಷ್ಮೆಹಾರ ಮತ್ತು ಉಂಗುರ ತೊಡಿಸಿ ಅಭಿನಂದಿಸಿ ಮಾತನಾಡಿದರು.
ರಾಮಣ್ಣ ಸರಳ ಸ್ನೇಹ ಜೀವಿ, ಕೆಲಸದ ಒತ್ತಡದಲ್ಲಿಯೂ ಅವರು ಇಲಾಖಾ ಕೆಲಸಗಳ ನಿಷ್ಟೆಯನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅವರ ಸಲಹೆ, ಸೇವೆಯ ದಿನಗಳು ನಮಗೆಲ್ಲ ರಿಗೂ ಮಾರ್ಗದರ್ಶನವಾಗಲಿದೆ ಎಂದರು.

ನಿವೃತ್ತರಾದ ರಾಮಣ್ಣ ಅಭಿನಂದನೆ ಸ್ವೀಕರಿಸಿ ಮಾತನಾಡಿ ನನ್ನ ವರ್ಷಗಳ ಸರ್ಕಾರಿ ಸೇವೆಯ ದಿನಗಳು 35 ಕ್ಕೂ ಹೆಚ್ಚು ಕಾರ್ಯಪಾಲಕ ಅಭಿಯಂತರರ ಕೆಳ ಹಂತದಲ್ಲಿ ಸೇವೆ ಮಾಡಿದ್ದೇನೆ. 1992ರಿಂದ ಎಲ್ಲರ ಸಹಕಾರದಲ್ಲಿ ಸೇವೆ ಸಲ್ಲಿಸಿದ ಅವಧಿ ನನಗೆ ತೃಪ್ತಿ ತಂದಿದೆ. ನನಗೆ ನನ್ನ ಕುಟುಂಬಕ್ಕಿಂತ ಸರ್ಕಾರಿ ಸೇವೆ ಬಹಳ ಮುಖ್ಯ ಎಂದು ಭಾವಿಸಿ ಕೆಲಸ ಮಾಡಿದೆ. ಎಲ್ಲ ವರ್ಗದ ಸಿಬ್ಬಂದಿಗಳು ನನಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು.
ಈ ವೇಳೆ ಎಇಇ ಕೆ.ಎಚ್.ಶಂಕರ್, ಇಂಜಿನಿಯರ್ ಶೆಟ್ಟರ್ ಮಾತನಾಡಿ ಸರಳ ಸಜ್ಜನಿಕೆಯಿಂದ ಸ್ನೇಹಮಯಿ ಹೃದಯವಂತರಾಗಿದ್ದ ರಾಮಣ್ಣ ಅವರು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದುತ್ತಿದ್ದು, ಅವರ ಮುಂದಿನ ದಿನಗಳು ಸುಖಕರ ವಾಗಿರಲಿ ಎಂದು ಶುಭ ಹಾರೈಸಿದರು.
ಸ್ನೇಹಕೂಟ ಟ್ರಸ್ಟ್ ಅದ್ಯಕ್ಷ ಎಚ್.ಪಿ.ನಂಜೇಗೌಡ ಮಾತನಾಡಿ ಒಬ್ಬ ಅಧಿಕಾರಿಯಾಗಿ ರಸ್ತೆಯ ಯಜಮಾನನಾಗಿ ನಿಷ್ಟಾವಂತ ಅಧಿಕಾರಿಯಾಗಿ ಸೇವೆ ಮಾಡಿದ್ದಾರೆ. ಸ್ನೇಹಕೂಟದ ಖಜಾಂಚಿಯಾಗಿ ನಮಗೆ ಮಾರ್ಗದರ್ಶಕರಾಗಿದ್ದರು ಎಂದು ಅವರ ಸೇವೆಯನ್ನು ಗುಣಗಾನ ಮಾಡಿದರು.
ಈ ವೇಳೆ ಮಾಗಡಿ ವಿಭಾಗದ ನೂತನ ಎಇಇ ಪುರುಷೋತ್ತಮ್ ಇಂಜಿನಿಯರ್ ಗಳಾದ ಕೃಷ್ಣಶೆಟ್ಟಿ, ವೀರನಂಜೇಗೌಡ, ರವಿ, ಶ್ರೀನಿವಾಸ್, ಗೋಪಾಲ್ ಕೃಷ್ಣ, ರಂಗಮೂರ್ತಿ, ರಾಜು, ಶಶಿಕಲಾ, ಪ್ರಿಯಾಂಕ, ಶಿವಕುಮಾರ್ ಸಿಬ್ಬಂದಿಗಳಾದ ಮಂಜು, ವೆಂಕಟೇಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಎಇಇ ಚಿಕ್ಕಣ್ಣ, ಬೈರಪ್ಪ ಸ್ನೇಹಕೂಟ ಟ್ರಸ್ಟ್ ಅದ್ಯಕ್ಷ ಎಚ್.ಪಿ.ನಂಜೇಗೌಡ, ಕಾರ್ಯದರ್ಶಿ ರಾಜು, ಪದಾಧಿಕಾರಿಗಳಾದ ಚಂದ್ರಶೇಖರ್, ಯಕ್ಷರಾಜು,ಗುಂಗರಹಳ್ಳಿ ಮಹೇಶ್, ಮುಖಂಡ ತಮ್ಮಣ್ಣ ಮತ್ತಿತರರು ಹಾಜರಿದ್ದು ನಿವೃತ್ತ ಅಧಿಕಾರಿ ರಾಮಣ್ಣ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.

ವರದಿ : ಪಾದ್ರಳ್ಳಿ ರಾಜು
ಮೊ : 6360 905 062
ಇದನ್ನೂ ಓದಿ :
ಡಿ.ಕೆ. ಶಿವಕುಮಾರ್ ಜಾಮೀನು ಆದೇಶ ಕಾಯ್ದಿರಿಸಿದ ಇ.ಡಿ ನ್ಯಾಯಾಲಯ – ಹಾಯ್ ರಾಮನಗರ –
ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದ ಪ್ರವೀಣ್ ನೆಟ್ಟಾರು ಅವರ ಕೋಳಿ ಅಂಗಡಿ – ಹಾಯ್ ರಾಮನಗರ –
‘ನಿನ್ನ ಸೌಂದರ್ಯವನ್ನೇ ಹಾಳು ಮಾಡುತ್ತೇನೆ. ಆಗ ನಿನ್ನನ್ನು ಯಾವ ಪುರುಷನೂ ನೋಡುವುದಿಲ್ಲ’ ಎಂದು ಚನ್ನೇಗೌಡ ಬೆದರಿಕೆ ಹಾಕಿದ್ದ : ಹೆಂಡತಿ ಸುಂದರವಾಗಿದ್ದಾಳೆಂದು ಆ್ಯಸಿಡ್ ಎರಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ – ಹಾಯ್ ರಾಮನಗರ –
ತೈಲ ಕಂಪನಿಗಳ ಟ್ಯಾಂಕರ್‌ನಲ್ಲಿ ‘ಅರೆಕಾಲಿಕ’ ಕ್ಲೀನರ್ ಆಗಿದ್ದ ಮಹಮ್ಮದ್ ಫಾಝಿಲ್ ಒಳ್ಳೆಯ ಉದ್ಯೋಗದ ಹುಡುಕಾಟದಲ್ಲಿದ್ದ – ಹಾಯ್ ರಾಮನಗರ –
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : hairamanagara.news@gmail.com