ತಂದೆಯ ವಿಡಿಯೋ ನೋಡಿ ಗಳಗಳನೇ ಅತ್ತ ಕುಮಾರಸ್ವಾಮಿ-ರೇವಣ್ಣ
ಮಂಡ್ಯ : ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚೀಣ್ಯ ಗ್ರಾಮದಲ್ಲಿ ಭಾನುವಾರ ಜೆಡಿಎಸ್ ಸಮಾರಂಭದಲ್ಲಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹಾಗೂ ಹೆಚ್. ಡಿ ರೇವಣ್ಣ ತಮ್ಮ ತಂದೆ ದೇವೇಗೌಡರನ್ನು ಪರದೆ ಮೇಲೆ ನೋಡಿ ಕಣ್ಣೀರು ಹಾಕಿದರು. ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸಹ ಭಾಗಿಯಾಗಿದ್ದರು. ಹೆಚ್. ಡಿ. ದೇವೇಗೌಡರು ಮನೆಯಲ್ಲೇ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುವ ವಿಡಿಯೋವನ್ನು ಸ್ಕ್ರೀನ್ ಪ್ಲೇ ಮಾಡಲಾಗಿತ್ತು. ಇದನ್ನುಇಲ್ಲಿ ವೇದಿಕೆಯಲ್ಲಿ ಸ್ಕ್ರೀನ್ ಪ್ಲೇ ಆಗುತ್ತಿದ್ದಂತೆ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ರೇವಣ್ಣ ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ದೇವೇಗೌಡರು ಅನಾರೋಗ್ಯದ ಹಿನ್ನೆಲೆ ಈ ಸಮಾವೇಶಕ್ಕೆ ಬಂದಿರಲಿಲ್ಲ.
ಭಾಷಣ ಮಾಡುವಾಗ ಸೋದರನ ಕಣ್ಣಲ್ಲಿ ನೀರು ಕಂಡು ಹೆಚ್ ಡಿ ರೇವಣ್ಣ ಅವರು ಕೂಡ ವೇದಿಕೆಯಲ್ಲಿ ಕಣ್ಣೀರು ಹಾಕಿದರು. ಭಾಷಣ ಮುಗಿಸಿ ಟವೆಲ್ ಹಿಡಿದುಕೊಂಡು ಬಂದು ಅಳುತ್ತಾ ಕುಳಿತ ಹೆಚ್ ಡಿಕೆಯನ್ನು ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸಮಾಧಾನಪಡಿಸಿದರು.
ಕಣ್ಣೀರು ಹಾಕುತ್ತಾ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಸಾಲಮನ್ನಾದಿಂದ ರೈತರಿಗೆ ಬದುಕು ಶಾಶ್ವತವಾಗಿ ಸಿಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಿ 5 ವರ್ಷ ನನಗೆ ಆಡಳಿತ ಕೊಟ್ಟರೆ ರೈತರು ಸಾಲಗಾರರಾಗದಿರುವಂತಹ ರೀತಿಯಲ್ಲಿ ನಾನು ಮಾಡುತ್ತೇನೆ ಎಂದು ತಿಳಿಸಿದರು.