ಮಂಕಿಪಾಕ್ಸ್ ರೋಗ ವ್ಯಕ್ತಿಯಲ್ಲಿ ಉಲ್ಬಣಿಸಲು 5 ರಿಂದ 13 ದಿನ ಬೇಕು : ಎಚ್ಚರಿಕೆ ವಹಿಸಲು ತಜ್ಞರ ಸಲಹೆ

ಲಕ್ಷಣಗಳು : ಜ್ವರ, ಶೀತ ಮತ್ತು ಬೆವರು, ದುಗ್ಧರಸ ಗ್ರಂಥಿಗಳ ಊತ, ತಲೆನೋವು, ಸ್ನಾಯು ನೋವು, ಬೆನ್ನುನೋವು, ನಿಶ್ಯಕ್ತಿ, ನೋಯುತ್ತಿರುವ ಗಂಟಲು ಮತ್ತು ಕೆಮ್ಮು, ಚರ್ಮದ ದದ್ದುಗಳು, ಗುಳ್ಳೆಗಳು ಮುಂತಾದವುಗಳು ಮಂಕಿಪಾಕ್ಸ್ ಲಕ್ಷಣಗಳಾಗಿವೆ.

ಬೆಂಗಳೂರು : ಕೇರಳದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು, ರಾಜ್ಯ ಆರೋಗ್ಯ ಇಲಾಖೆಯು ಮಾರ್ಗಸೂಚಿ ಮತ್ತು ತೀವ್ರ ಕಟ್ಟೆಚ್ಚರಕ್ಕೆ ಮುಂದಾಗಿದೆ. ಮಂಕಿಪಾಕ್ಸ್ ಪತ್ತೆಯಾಗಿ ಅದು ಉಲ್ಭಣಗೊಂಡು ವೈದ್ಯಕೀಯ ಚಿಕಿತ್ಸೆ ಪಡೆಯಲು 5 ರಿಂದ 13 ದಿನಗಳನ್ನು ತೆಗೆದುಕೊಳ್ಳುತ್ತದೆ.

ಕೇವಲ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಇದು ಹರಡುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ, ಆದರೆ ಸೋಂಕಿತ ವ್ಯಕ್ತಿಯೊಂದಿಗೆ ದೀರ್ಘಕಾಲದ ನಿಕಟ ಮುಖಾಮುಖಿ ಸಂಪರ್ಕದಿಂದ, ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯ ಹತ್ತಿರ ಮೂರು ಗಂಟೆಗಳಿಗೂ ಕಾಲ 6 ಅಡಿ ಅಂತರದಲ್ಲಿದ್ದು, ವ್ಯಕ್ತಿ ಸುರಕ್ಷಿತಾ ಸಾಧನಗಳನ್ನು ಧರಿಸದಿದ್ದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಚರ್ಮ ಅಥವಾ ಜನನಾಂಗದ ಗಾಯಗಳು, ಉಸಿರಾಟದಿಂದ ಅಥವಾ ಸೋಂಕಿತ ವ್ಯಕ್ತಿಗಳು ಬಳಸುವ ಕಲುಷಿತ ವಸ್ತುಗಳ ಸಂಪರ್ಕದ ಮೂಲಕ ಮಂಕಿಪಾಕ್ಸ್ ಇನ್ನೊಬ್ಬರಿಕೆ ಹರಡುತ್ತದೆ ಎಂದು ಮಣಿಪಾಲ್ ಆಸ್ಪತ್ರೆ ಆಂತರಿಕ ಔಷಧ ವಿಭಾಗದ ಸಲಹೆಗಾರ ಡಾ. ಪ್ರಮೋದ್ ವಿ ಸತ್ಯ ಹೇಳುತ್ತಾರೆ.

ಕಳೆದ ಮೇ ತಿಂಗಳಲ್ಲಿ ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ವರದಿಯಾದಾಗ ಲೈಂಗಿಕ ಚಟುವಟಿಕೆಯ ನಿಕಟ ಸಂಪರ್ಕದಿಂದ ಬಂದಿದೆ ಎಂದಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ.ಪೃಥು ನರೇಂದ್ರ ಧೇಕಾನೆ, ಮಂಕಿಪಾಕ್ಸ್ ಲಕ್ಷಣಗಳು ಸಿಡುಬಿನಂತೆಯೇ ಇದ್ದರೂ, ಹೆಚ್ಚಿನ ಪ್ರಕರಣಗಳು ಸೌಮ್ಯ ಮತ್ತು ಸ್ವಯಂ-ಸೀಮಿತವಾಗಿದ್ದು, ವ್ಯಕ್ತಿಯಲ್ಲಿ 2 ರಿಂದ 4 ವಾರಗಳವರೆಗೆ ಇರುತ್ತದೆ. ರೋಗಿ ತ್ವರಿತವಾಗಿ ಚೇತರಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು, ಮೈ ಮೇಲೆ ಬೀಳುವ ದದ್ದುಗಳನ್ನು ಒಣಗಲು ಬಿಡುವುದು ಅಥವಾ ಅಗತ್ಯವಿದ್ದರೆ ತೇವಾಂಶವುಳ್ಳ ಡ್ರೆಸ್ಸಿಂಗ್‌ನೊಂದಿಗೆ ಆ ಜಾಗವನ್ನು ರಕ್ಷಿಸುವುದು. ಬಾಯಿ ಅಥವಾ ಕಣ್ಣುಗಳ ಸುತ್ತ ಮುಟ್ಟಬಾರದು ಎಂದು ವಿವರಿಸಿದರು.

ಸಂಭವನೀಯ ಲಸಿಕೆ ಕುರಿತು, ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಖಾಜಿ ಜಾವೀದ್ ಇರ್ಫಾನ್, ಮಂಕಿಪಾಕ್ಸ್ ಗೆ ಇದುವರೆಗೆ ಯಾವುದೇ ಲಸಿಕೆ ಬಂದಿಲ್ಲ, ಸಂಶೋಧನೆಗಳು ನಡೆಯುತ್ತಿವೆ ಎಂದರು.

ಮಂಕಿಪಾಕ್ಸ್ ವರದಿಯಾದ ಪ್ರದೇಶದಲ್ಲಿ ಇರುವವರು, ಮಂಕಿಪಾಕ್ಸ್ ವೈರಸ್ ಬಂದ ವ್ಯಕ್ತಿಯ ಜೊತೆ ಸಂಪರ್ಕದ ಹೊಂದಿರುವವರು ಅಥವಾ ಹಿಂದಿನ 21 ದಿನಗಳಲ್ಲಿ ಶಂಕಿತ ವ್ಯಕ್ತಿಗೆ ಒಡ್ಡಿಕೊಂಡವರು ಎಚ್ಚರವಾಗಿರಲು ಮತ್ತು ತಮ್ಮನ್ನು ತಾವು ಐಸೊಲೇಷನ್ ಗೊಳಪಡಬೇಕೆಂದು ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *