ಸಿದ್ದರಾಮೋತ್ಸವ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಚನ್ನಮಾನಹಳ್ಳಿ ನಾಗೇಶ್ ಮನವಿ

ರಾಮನಗರ : ಆಗಸ್ಟ್ 3 ರ ಬುಧವಾರ ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75 ನೇ ಜನುಮ ದಿನದ ಅಂಗವಾಗಿ ನಡೆಸುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಮನಗರ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಸಸ್ವಿಗೊಳಿಸಬೇಕೆಂದು ರಾಮನಗರ ತಾಲ್ಲೂಕು ಕುರುಬರ ಸಂಘದ ಉಪಾಧ್ಯಕ್ಷ ಚನ್ನಮಾನಹಳ್ಳಿ ನಾಗೇಶ್ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯನವರು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಮರಳಿನ ಮೇಲೆ ಅಕ್ಷರ ಕಲಿತು ಇಂದು ರಾಜ್ಯವೇ ನಿಬ್ಬೆರಗಾಗುವಂತೆ ಸುದೀರ್ಘ ಕಾಲದ ಹಾಗೂ ಸಾಮಾಜಿಕ ತಳಹದಿಯಲ್ಲಿ ದಾಖಲೆಯ 13 ಜನಪರ ಬಜೆಟ್‍ಗಳನ್ನು ಮಂಡಿಸಿ ಜನಮಾನಸದಲ್ಲಿ ಇಂದಿಗೂ ಜನಾನುರಾಗಿಯಾಗಿರುವ ಸಿದ್ದರಾಮಯ್ಯನವರ 75 ನೇ ಜನುಮ ದಿನದ ಅಮೃತ ಮಹೋತ್ಸವವನ್ನು ಆಗಸ್ಟ್ 3 ರಂದು ದಾವಣಗೆರೆಯಲ್ಲಿ ರಾಜ್ಯವಷ್ಟೇ ಅಲ್ಲ ನೆರೆ ಹೊರೆ ರಾಜ್ಯಗಳಲ್ಲಿನ ಅವರ ಅಸಂಖ್ಯಾತ ಸ್ನೇಹಿತರು -ಹಿತೈಷಿಗಳು -ಅಭಿಮಾನಿಗಳು ಐತಿಹಾಸಿಕ ಸಮಾವೇಶವನ್ನು ಆಯೋಜಿಸಿದ್ದಾರೆ.

ಸಿದ್ದರಾಮಯ್ಯನವರ ಬದುಕನ್ನು ಸಾರ್ಥಕಗೊಳಿಸಿದ ಅವಧಿಯನ್ನು ಜನಕಲ್ಯಾಣ ದಿನದಂದೆ ಆಚರಿಸಿ ಸಾರ್ಥಕತೆಯ ಈ 75 ವರುಷಕ್ಕೆ ಕಾಲಿಡುತ್ತಿರುವ ಈ ಅಮೃತ ಮಹೋತ್ಸವದಲ್ಲಿ ಭಾಗವಹಿಸಿ ಸಾಕ್ಷೀಕರಿಸಿ ಸಿದ್ದರಾಮಯ್ಯನವರ ಪ್ರಾಮಾಣಿಕತೆಗೆ -ಬದ್ಧತೆಗೆ -ಅಭಿವೃದ್ಧಿಗೆ -ಸಾಮಾಜಿಕ ಕಾಳಜಿಗೆ ಒಂದು ಹೆಮ್ಮೆಯ ಸಲಾಂ ಹೇಳಿ ನಿಮ್ಮೊಡನೆ ನಾವಿದ್ದೇವೆ ಎನ್ನುವ ಸಂದೇಶವನ್ನು ಸಾರಬೇಕಿದೆ ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಮನಗರ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಸ್ವಿಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಚನ್ನಮಾನಹಳ್ಳಿ ನಾಗೇಶ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ :

ಚಾಮರಾಜ ಸವಡಿ ಅವರ ಲೇಖನ : ಸಿದ್ದರಾಮೋತ್ಸವ : ಕುರುಬ ಸಮಾಜದ ಶಕ್ತಿ ಧೃವೀಕರಣ – ಹಾಯ್ ರಾಮನಗರ –

https://go.shr.lc/3PPq52n

Leave a Reply

Your email address will not be published. Required fields are marked *