ಬಿಜೆಪಿಯವರು ನನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ; ಆ ‘ಸನ್ನಿವೇಶ’ ನನ್ನನ್ನು ಮುಖ್ಯಮಂತ್ರಿ ಮಾಡಿತು ಎಚ್.ಡಿ. ಕುಮಾರಸ್ವಾಮಿ
ರಾಮನಗರ : ರಾಜಕೀಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೆಲವು ಒತ್ತಡಗಳಿಗೆ ಮಣಿಯಬೇಕಾಗುತ್ತದೆ ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬಿಡದಿಯಲ್ಲಿರುವ ತಮ್ಮ ತೋಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ನಾನು ಎಂ.ಪಿ. ಪ್ರಕಾಶ್ ಅವರ ಮನೆಗೆ ಹೋಗಿ ನೀವು ಮುಖ್ಯಮಂತ್ರಿಯಾಗಿ ಎಂದು ಕೇಳಿಕೊಂಡೆ, ಆದರೆ ಎಂ.ಪಿ. ಪ್ರಕಾಶ್ ಅವರು ನಾನು ದೇವೇಗೌಡರ ಜೊತೆಯಲ್ಲಿರುತ್ತೇನೆ, ನೀವೇ ಮುಖ್ಯಮಂತ್ರಿಯಾಗಿ ಎಂದು ಒತ್ತಡ ಹಾಕಿದರು ಎಂದರು.
ಬಿಜೆಪಿಯವರು ನನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ, ಆ ಸನ್ನಿವೇಶ ನನ್ನನ್ನು ಮುಖ್ಯಮಂತ್ರಿ ಮಾಡಿತು. ಕುಮಾರಸ್ವಾಮಿ ಅವರ ಕಣ್ಣೀರಧಾರೆ ಎಂದು ಮನುಷ್ಯತ್ವ ಇಲ್ಲದ ಟ್ವೀಟ್ ಅನ್ನು ಬಿಜೆಪಿಯವರು ಮಾಡಿದ್ದಾರೆ. ಅಂದು ಸರ್ಕಾರ ಮಾಡಬೇಕಾದರೆ ನಾನೆಷ್ಟು ಕಣ್ಣೀರು ಹಾಕಿದ್ದೆ ಎಂದು ಬಾಲಕೃಷ್ಣ ಸೇರಿದಂತೆ 50 ಜನ ಶಾಸಕರಿಗೆ ಗೊತ್ತು ಎಂದರು.
ಇದನ್ನೂ ಓದಿ :
ಸಂಸದ ಪ್ರತಾಪ್ ಸಿಂಹರಿಂದ ಫೋಟೋ ಪಾಲಿಟಿಕ್ಸ್ : ಡಿಕೆ ಸಹೋದರರ ಜತೆ ಆಡಿದ ಆಟವನ್ನು ನನ್ನ ಹತ್ತಿರ ಆಡಿದರೆ ನಡೆಯಲ್ಲ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ವಿರುದ್ಧ ಗುಡುಗಿದ ಎಚ್.ಡಿ. ಕುಮಾರಸ್ವಾಮಿ – ಹಾಯ್ ರಾಮನಗರ –
ಇದನ್ನೂ ಓದಿ :
ಕರಾವಳಿ ತ್ರಿವಳಿ ಕೊಲೆ : ಕುಸಿದ ಕಾನೂನು ಸುವ್ಯವಸ್ಥೆ ಮಳೆ-ನೆರೆಯಿಂದ ರಾಜ್ಯ ತತ್ತರ : ವಿಧಾನಮಂಡಲ ಅಧಿವೇಶನ ಕರೆಯಲು ಹೆಚ್.ಡಿ. ಕುಮಾರಸ್ವಾಮಿ ಒತ್ತಾಯ – ಹಾಯ್ ರಾಮನಗರ –
“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಾಟ್ಸ್ ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/HK9U7zQD11W79PK8sGwVCS
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ :
WhatsApp : 9880439669
Mail : hairamanagara.news@gmail.com