ಸೈನ್ಯ ಸೇರುವುದು ನೌಕರಿಗಲ್ಲ ದೇಶ ಸೇವೆಗೆ : ಚಂದ್ರಶೇಖರ್

ನಿವೃತ್ತ ಯೋಧ ಚಂದ್ರಶೇಖರ್ ಮಾತನಾಡುತ್ತಿರುವುದು.

ರಾಮನಗರ : ‘ಸೈನ್ಯವನ್ನು ಸೇರುವುದು ದೇಶಕ್ಕೆ ಸೇವೆ ಸಲ್ಲಿಸಲು ಒಂದು ಸುಮಾರ್ಗ. ಅದು ಹೊಟ್ಟೆ ಪಾಡಿಗೆ ಮಾಡುವ ನೌಕರಿಯಲ್ಲ’ ಎಂದು ನಿವೃತ್ತ ಯೋಧ ಚನ್ನಪಟ್ಟಣದ ಚಂದ್ರಶೇಖರ್‌ ತಿಳಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ ತಾಲ್ಲೂಕಿನ ಅವ್ವೇರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ನಡೆದ ಭಾರತ ಮಾತಾ ಪೂಜೆ ಮತ್ತು ಭಾರತೀಯ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಗ್ನಿಪಥ ಯೋಜನೆ ಮತ್ತು ದೇಶಭಕ್ತಿಯ ಮಹತ್ವ, ಸೈನಿಕರಾಗಿದ್ದ ಅನುಭವವನ್ನು ಅವರು ಮಕ್ಕಳೊಂದಿಗೆ ಹಂಚಿಕೊಂಡರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಸಹ ಪ್ರಧಾನ ಕಾರ್ಯದರ್ಶಿ ಎ. ಗಂಗಾಧರಾಚಾರಿ ‘ ಬಾಲಗಂಗಾಧರ ತಿಲಕರ ಪುಣ್ಯಸ್ಮರಣೆಯ ದಿನವಾದ ಆಗಸ್ಟ್ 1ರಂದು ದೇಶ ವ್ಯಾಪಿ ಒಂದು ಲಕ್ಷ ಶಾಲಾ ಕಾಲೇಜುಗಳಲ್ಲಿ ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸಲು ವಿಶೇಷವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

‘ಇಂಡಿಯಾದಿಂದ ಭಾರತದೆಡೆಗೆ’ ವಿಷಯದ ಕುರಿತು ಉಪನ್ಯಾಸಕಿ ಎಂ. ಪವಿತ್ರಾ ಮಾತನಾಡಿದರು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ ,ವಂದೇ ಮಾತರಂ ಗೀತ ಗಾಯನ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.

ಶಾಲೆಯ ಪ್ರಾಂಶುಪಾಲ ನಾಮದಾರು ನರಸಿಂಹಲು ಅಧ್ಯಕ್ಷತೆ ವಹಿಸಿದ್ದರು. ಸಹಶಿಕ್ಷಕಿ ಹೇಮಲತಾ ಇದ್ದರು. ವಿಜ್ಞಾನ ಶಿಕ್ಷಕಿ ಮಧುಮತಿ ನಿರೂಪಿಸಿದರು. ತೇಜಸ್ವಿನಿ ಸ್ವಾಗತಿಸಿದರು. ಕೃತಿ ಸನ್ಮಾನಿತರ ಪರಿಚಯ ಮಾಡಿದರು. ಶಿಲ್ಪಾ ವಂದಿಸಿದರು.

“ಹಾಯ್ ರಾಮನಗರ” ಡಿಜಿಟಲ್ ನ್ಯೂಸ್ ವಿಭಾಗಕ್ಕೆ ವ್ಯಕ್ತಿ ಪರಿಚಯ, ಸುದ್ದಿ ಚಿತ್ರಗಳು, ಲೇಖನಗಳು, ಪುಸ್ತಕ ವಿಮರ್ಶೆ, ಕುಂದುಕೊರತೆ, ಸಿನೆಮಾ ವಿಮರ್ಶೆ, ನಾಟಕ ವಿಮರ್ಶೆ, ಕತೆ, ಕವನ, ವರದಿ ಮೊದಲಾದ ವಿಷಯ ವೈವಿಧ್ಯಗಳನ್ನು ಕಳಿಸಲು ವ್ಯಾಟ್ಸ್ ಪ್ ಅಥವಾ ಮೇಲ್ ಮಾಡಿ.

WhatsApp : 9880439669

Mail : hairamanagara.news@gmail.com

Leave a Reply

Your email address will not be published. Required fields are marked *