ಶ್ರೀ ರೇಣುಕಾಯಲ್ಲಮ್ಮದೇವಿ ದೇವಾಲಯ ಲೋಕಾರ್ಪಣೆ

ರಾಮನಗರ : ಬಿಡದಿ ಪುರಸಭೆ ವ್ಯಾಪ್ತಿಯ ದಾಸಪ್ಪನದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರೇಣುಕಾಯಲ್ಲಮ್ಮದೇವಿ ದೇವಾಲಯವನ್ನು ಚಿತ್ರದುರ್ಗ ಅಖಿಲ ಕರ್ನಾಟಕ ಬೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮತ್ತು ಮಾಗಡಿ ಕ್ಷೇತ್ರದ ಶಾಸಕ ಎ. ಮಂಜುನಾಥ್ ಶುಕ್ರವಾರ ಲೋಕಾರ್ಪಣೆ ಮಾಡಿದರು.
ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಕ್ತಿದೇವತೆಯಾಗಿರುವ ಯಲ್ಲಮ್ಮ ತಾಯಿ ದೇವಸ್ಥಾನ ನಿರ್ಮಾಣ ಮಾಡಿರುವ ಗ್ರಾಮಸ್ಥರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸಮಾಜದಲ್ಲಿ ದೇವಾಲಯಗಳು ನೆಮ್ಮದಿಯ ತಾಣಗಳಾಗಿದ್ದು, ಆ ಸ್ಥಳದ ಮೂಲಕ ಜನರಿಗೆ ಶಾಂತಿ, ನೆಮ್ಮದಿ ಸಹ ಸಿಗಲಿದೆ. ಆಗಾಗಿ ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡಿರುವ ಕಾರ್ಯ ಶ್ಲಾಘನೀಯವಾಗಿದೆ. ಸರ್ಕಾರ ಬೋವಿ ನಿಗಮವನ್ನು ರಚಿಸಿ ನಿಮ್ಮಗಳ ಜನಾಂಗದ ಅಭಿವೃದ್ದಿಗೆ ನೆರವು ನೀಡಿದೆ. ನಿಮ್ಮ ಗ್ರಾಮದ ಅಭಿವೃದ್ದಿ ಕಾರ್ಯಗಳಿಗೆ ನಾನು ಸದಾ ಸಿದ್ದನಿದ್ದು, ಹಕ್ಕುಪತ್ರ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುತ್ತೇನೆ. ಎಲ್ಲರಿಗೂ ಯಲ್ಲಮ್ಮ ದೇವಿಯ ಆಶೀರ್ವಾದ ಇರಲಿ ಎಂದರು.


ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಡಿ. ನಾಗರಾಜು ಪ್ರಸ್ತಾವಿಕವಾಗಿ ಮಾತನಾಡಿ ಹಾರೋಹಳ್ಳಿಯಿಂದ ನಮ್ಮ ಪೂರ್ವಜರು ನೂರು ವರ್ಷದ ಹಿಂದೆ ಈ ಗ್ರಾಮಕ್ಕೆ ಬಂದು ನೆಲೆ ಕಂಡುಕೊಂಡರು. ಅಲ್ಲಿಂದ ತಂದ ಯಲ್ಲಮ್ಮ ದೇವಿಯನ್ನು ಪೂಜಿಸಲಾಗುತ್ತಿತ್ತು. ಇಂದು‌ ಎಲ್ಲರ ಸಹಕಾರ ಪಡೆದು ಅಮ್ಮನವರ ದೇವಾಲಯವನ್ನು ನಿರ್ಮಿಸಿದ್ದೇವೆ.‌ ಸಹಕರಿಸಿದ ಎಲ್ಲರಿಗೂ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಭೋವಿ ಗುರುಪೀಠದ ಸ್ವಾಮೀಜಿ ಯವರಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಎಂಇಐ ಮಾಜಿ ಅಧ್ಯಕ್ಷ ಕೆ. ಶೇಷಾದ್ರಿ, ಚಿತ್ರದುರ್ಗದ ಉಪವಿಭಾಗಾಧಿಕಾರಿ ಚಂದ್ರಪ್ಪ, ಹಿರಿಯ ಮುಖಂಡರಾದ ಎಚ್.ಎಲ್. ಚಂದ್ರು, ಗುಂಡಪ್ಪ, ರಾಮಕೃಷ್ಣಯ್ಯ, ಸೋಮೇಗೌಡ, ಶೇಷಪ್ಪ, ಪುರಸಭಾ ಸದಸ್ಯರಾದ ದೇವರಾಜು, ಎನ್.ಕುಮಾರ್, ನಾಗರಾಜು, ಬಿ.ಜೆ.ಲೋಹಿತ್ ಕುಮಾರ್, ಕೆ.ಶ್ರೀನಿವಾಸ್, ರಮೇಶ್, ಮಾಜಿ ಪುರಸಭಾ ಸದಸ್ಯರಾದ ಬಿ.ಎಂ.ರಮೇಶ್ ಕುಮಾರ್, ಅರ್. ಕುಮಾರ್, ಗ್ರಾಮದ ಮುಖಂಡರಾದ ಡಿ.ದಾಸಪ್ಪ, ವೈ.ಕಾಂತರಾಜು,ಡಾ.ಭರತ್ ಕೆಂಪಣ್ಣ, ದೇವದಾಸ್, ಚಂದ್ರಪ್ಪ, ಮಂಜುನಾಥ್, ಮಹದೇವಯ್ಯ, ಲೋಕೇಶ್, ಗೋವಿಂದಯ್ಯ, ಜಯ ಕರ್ನಾಟಕ ಸಂಘಟನೆಯ ಪ್ರಕಾಶ್ ರೈ, ಬಿಡದಿ ಆರ್ ಎಸ್ ಎಸ್ ಬಿ ಎನ್ ನಿರ್ದೇಶಕರಾದ ನರಸಿಂಹಯ್ಯ, ರಾಮಯ್ಯ, ಬೋವಿ ಸಂಘಟನೆಯ ಜಿಲ್ಲಾಧ್ಯಕ್ಷ ಕನಕರಾಜು ಮತ್ತಿತರರು ಇದ್ದರು.

ಎಚ್.ಸಿ. ಬಾಲಕೃಷ್ಣ ಭಾಗಿ :

ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ಪುರಸಭೆ ಸದಸ್ಯ ಸಿ. ಉಮೇಶ್, ದಿಶಾ ಸದಸ್ಯೆ ಕಾವ್ಯ, ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಲ್. ಚಂದ್ರಶೇಖರ್ ಇತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು. ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು. ಇಡೀ ಗ್ರಾಮವೇ ಧಾರ್ಮಿಕ ಕಾರ್ಯಕ್ರಮದಲ್ಲಿ ಮಿಂದೆದ್ದ ವಾತಾವರಣ ನಿರ್ಮಾಣವಾಗಿತ್ತು.

ಪಾದ್ರಳ್ಳಿ ರಾಜು

ವರದಿ : ಪಾದ್ರಳ್ಳಿ ರಾಜು

ಮೊ : 94487 45536

Leave a Reply

Your email address will not be published. Required fields are marked *