ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಅಂಚೆ ಕಚೇರಿಯಲ್ಲಿ ರಾಷ್ಟ್ರ ಧ್ವಜ ಮಾರಾಟ

ರಾಮನಗರ : ರಾಮನಗರದ ಅಂಚೆ ಕಚೇರಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ನಾಗರಿಕರ ಮನೆಗಳಲ್ಲಿ ಹಗಲು ರಾತ್ರಿ ರಾಷ್ಟ್ರ ಧ್ವಜವನ್ನು ಹಾರಿಸಲು ಸರ್ಕಾರವು ಭಾರತದ ಧ್ವಜ ಸಂಹಿತೆಗೆ ತಿದ್ದುಪಡಿ ತಂದಿದೆ. ಹೀಗಿದ್ದಾಗ ನಿಮ್ಮ ಮನೆಗಳಲ್ಲಿ ಧ್ವಜವನ್ನು ಹಾರಿಸಲು ಹೆಚ್ಚಿನ ಮೊತ್ತವನ್ನು ಪಾವತಿಸಿ ಧ್ವಜವನ್ನು ಖರೀದಿಸುವ ಅವಶ್ಯಕತೆ ಇಲ್ಲ. ಅಂಚೆ ಇಲಾಖೆಯಲ್ಲಿ 25 ರೂಪಾಯಿಗಳನ್ನು ನೀಡಿ ಖರೀದಿಸಬಹುದು. ಮೂರು ದಿನ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು. ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದು ದೇಶ ಪ್ರೇಮದ ಪ್ರತೀಕವಾಗಿದೆ. ಈಗಾಗಲೇ ಹತ್ತು ಸಾವಿರ ರಾಷ್ಟ್ರ ಧ್ವಜಕ್ಕೆ ಬೇಡಿಕೆ ಬಂದಿದೆ ಎಂದು ಅಂಚೆ ಇಲಾಖೆಯ ಸಹಾಯಕ ಸಿದ್ದೇಗೌಡ ತಿಳಿಸಿದರು. ಅಂಚೆ ಇಲಾಖೆಯ ಪೋಸ್ಟ್ ಮಾಸ್ಟರ್ ಸುರೇಂದ್ರ ಇದ್ದರು.

One thought on “ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಅಂಚೆ ಕಚೇರಿಯಲ್ಲಿ ರಾಷ್ಟ್ರ ಧ್ವಜ ಮಾರಾಟ

Leave a Reply

Your email address will not be published. Required fields are marked *